Crime News

ಹಲ್ಲೆ ಪ್ರಕರಣ

ದಿನಾಂಕ 12/03/2021ರಂದು ಸಿದ್ದಾಪುರ ಬಳಿಯ ಅಂಬೇಡ್ಕರ್‌ ನಗರದ ನಿವಾಸಿ ಜಗದೀಶ್ವರಿ ಎಂಬವರ ಮೇಲೆ ಮಣಿ ಎಂಬವರು ಹಣದ ವಿಚಾರದಲ್ಲಿ ಜಗಳವಾಡಿ ಕತ್ತಿಯಿಂದ ಹೊಡೆದು ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರಿಮೆಣಸು ಕಳವು ಪ್ರಕರಣ

ಶ್ರೀಮಂಗಲ ಬಳಿಯ ಬಲ್ಯಮುಂಡೂರು ಗ್ರಾಮದ ಮಾಚಿಮಾಡ ರತಿ ಎಂಬವರು ಅವರ ಮನೆಯ ಬಳಿ ಇಟ್ಟಿದ್ದ ಸುಮಾರು ರೂ.9,000/- ಮೌಲ್ಯದ 50 ಕೆ.ಜಿ. ಕರಿಮೆಣಸನ್ನು ದಿನಾಂಕ 11/03/2021ರ ರಾತ್ರಿ ವೇಳೆ ಯಾರೋ ಕಳವು ಮಾಡಿದ್ದು ರತಿರವರ ಮನೆಯಲ್ಲಿ ಕೂಲಿ ಕೆಲಸ ಮಾಡಿದ್ದ ಮಡಿವಾಳರ ಮನು ಎಂಬಾತನು ಕಳವು ಮಾಡಿರಬಹುದೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 11/03/2021ರ ರಾತ್ರಿ ವೇಳೆ ಶ್ರೀಮಂಗಲ ಬಳಿಯ ಕುರ್ಚಿ ಗ್ರಾಮದ ನಿವಾಸಿ ಪಣಿ ಎರವರ ಗೌರಿ ಎಂಬವರಿಗೆ ಅವರ ನೆರೆ ಮನೆಯ ಪಣಿ ಎರವರ ಮಂಜು ಎಂಬಾತನು ಹಣದ ವಿಚಾರದಲ್ಲಿ ಜಗಳವಾಡಿ ಸೌದೆ ತುಂಡಿನಿಂದ ಹೊಡೆದು ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

1 2 3 982