ಅಪರಾಧ ಸುದ್ದಿಗಳು

ಹಲ್ಲೆ ಪ್ರಕರಣ

ದಿನಾಂಕ 20/06/2018ರಂದು ಮಡಿಕೇರಿ ಬಳಿಯ ಮೇಕೇರಿ ಗ್ರಾಮದ ನವಗ್ರಾಮ ನಿವಾಸಿ ತೇಜಸ್ ಎಂಬವರಿಗೆ ಅದೇ ಗ್ರಾಮದ ನಿವಾಸಿಗಳಾದ ವಿನಯ್, ವಿಜಯ್, ಅರುಣ, ಸಜೇಶ್, ಪಮ್ಮು ಮತ್ತು ಶೀತಲ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ಸಂಶಯಾಸ್ಪದ ವ್ಯಕ್ತಿ ವಶ

ದಿನಾಂಕ 20/06/2018ರಂದು ರಾತ್ರಿ ವೇಳೆ ಸುಂಟಿಕೊಪ್ಪ ಠಾಣೆಯ ಸಿಬ್ಬಂದಿ ಬಿ.ಎಸ್.ದಯಾನಂದ ಎಂಬವರು ನಗರ ಗಸ್ತಿನಲ್ಲಿರುವಾಗ ಸಿದ್ದಾಪುರ ನಿವಾಸಿ ಸತೀಶ ಆರ್ ನಾಯಕ ಎಂಬವನು  ಸುಂಟಿಕೊಪ್ಪ ನಗರದ ಮಾದಾಪುರ ರಸ್ತೆಯ ವಿಜಯಾ ಬ್ಯಾಂಕ್ ಬಳಿ ಸಂಶಯಾಸ್ಪದವಾಗಿ ಸುಳಿದಾಡುತ್ತಿದ್ದು ಆತನ ಇರುವಿಕೆಯ ಬಗ್ಗೆ ಸೂಕ್ತ ಕಾರಣವನ್ನು ನೀಡದೆ ಇದ್ದು ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಆತನು ಅಲ್ಲಿ ಇದ್ದಿರಬಹುದೆಂದು ಆತನನ್ನು ವಶಕ್ಕೆ ಪಡೆದು ಸುಂಟಿಕೊಪ್ಪ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಹಲ್ಲೆ ಪ್ರಕರಣ

ದಿನಾಂಕ 20/06/2018ರಂದು ಶ್ರೀಮಂಗಲ ಬಳಿಯ ಕುಮಟೂರು ನಿವಾಸಿ ಬಳಪಂಡ ಉತ್ತಪ್ಪ ಎಂಬವರು ವಿರಾಜಪೇಟೆ ಬಳಿಯ ಕಂಡಂಗಾಲ ಬಳಿಯ ಬಳಪಂಡ ಶ್ಯಾಂ ಎಂಬವರ ಮನೆಗೆ ತಿಥಿ ಕರ್ಮಾಂತರ ಕಾರ್ಯಕ್ಕೆ ಬಂದಿದ್ದು ಅಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿರುನಾಣಿ ಗ್ರಾಮದ ಮಲ್ಲೆಯಂಡ ಚಂಗಪ್ಪ ಮತ್ತು ಬಳಪಂಡ ವಿನು ಎಂಬವರು ಬಾಟಲಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾರಿ ಅವಘಢ

ದಿನಾಂಕ 21/06/2018ರಂದು ಅಶ್ವಥ್ ಕುಮಾರ್ ಎಂಬವರು ಒಂದು ಲಾರಿಯಲ್ಲಿ ಬೆಂಗಳೂರಿನಿಂದ ಕರ್ನಾಟಕ ಎಣ್ಣೆ ಬೀಜ ಮಹಾ ಮಂಡಳಿಯ ಪಾಮ್ ಎಣ್ಣೆ ಉತ್ಪಾದನೆಯನ್ನು ಬಂಟ್ವಾಳ, ಮೂಡಬಿದಿರೆ ಮತ್ತು ಬೆಳ್ತಂಗಡಿ ಕಡೆಗೆ ಸಾಗಿಸುತ್ತಿರುವಾಗ ಜೋಡುಪಾಲ ಬಳಿ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಲಾರಿ ರಸ್ತೆ ಬದಿಯ ಮಣ್ಣಿನ ದಿಬ್ಬಕ್ಕೆ ಡಿಕ್ಕಿಯಾಗಿ ಜಖಂಗೊಂಡಿರುವುದಾಗಿ ನಿಗಮದ ಅಧಿಕಾರಿ ಕಾಳಾಚಾರ್‌ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಬೈಕ್ ಅಪಘಾತ

ದಿನಾಂಕ 21/06/2018ರಂದು ನಾಪೋಕ್ಲು ಬಳಿಯ ಯವಕಪಾಡಿ ನಿವಾಸಿ ಜಷ್ಮಿ ಎಂಬವರು ಅವರಿಗೆ ಪರಿಚಯವಿರುವ ರಂಜು ಎಂಬವರ ಬೈಕಿನಲ್ಲಿ ಕಕ್ಕಬೆ ಪಟ್ಟಣದಿಂದ ಯವಕಪಾಡಿಯ ಅವರ ಮನೆಗೆ ಹೋಗುತ್ತಿರುವಾಗ ರಂಜುರವರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ವೈಕೋಲ್ ರಸ್ತೆಯ ಬಳಿ ಬೈಕ್ ರಸ್ತೆ ಬದಿಯ ಮೋರಿಗೆ ಡಿಕ್ಕಿಯಾಗಿ ಜಷ್ಮಿ ಹಾಗೂ ರಂಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.