ಕೊಡಗು ಜಿಲ್ಲೆಯಲ್ಲಿ ನಾಗರೀಕ ಬಂದೂಕು ತರಬೇತಿ.

ಕೊಡಗು ಜಿಲ್ಲೆ ಪೊಲೀಸ್ ಇಲಾಖಾ ವತಿಯಿಂದ ನಾಗರೀಕರಿಗೆ ಬಂದೂಕು ಉಪಯೋಗದ ಬಗ್ಗೆ ದಿನಾಂಕ 7-2-2019 ರಿಂದ 13-2-2019ರ ವರೆಗೆ 7 ದಿನಗಳ ತರಬೇತಿಯನ್ನು ಸೋಮವಾರಪೇಟೆ ಬಿ.ಟಿ.ಸಿ.ಜಿ. ಕಾಲೇಜಿಯಲ್ಲಿ ನಡೆಸಲಾಯಿತು.

        ಈ ತರಬೇತಿಯನ್ನು ಮುಖ್ಯವಾಗಿ ಬಂದೂಕನ್ನು ಅಪಾಯವಿಲ್ಲದೆ ಬಳಸುವ ಬಗ್ಗೆ ಹಾಗು ಅದರ ನಿರ್ವಹಣೆಯ ಬಗ್ಗೆ, ನಾಗರೀಕರು ಮತ್ತು  ಪೊಲೀಸರ ನಡುವೆ ಬಾಂಧವ್ಯ ಹೆಚ್ಚಿಸುವ ಉದ್ದೇಶದಿಂದ ನಡೆಸಲಾಗುತ್ತಿದೆ.   ಬಂದೂಕಿನಿಂದ  ಸಂಭವಿಸಬಹುದಾದ ಅನಾಹುತಗಳು ಮತ್ತು ಅಪರಾಧಗಳು ನಡೆಯದಂತೆ ಮುಂಜಾಗೃತಾ ಕ್ರಮಗಳ ಬಗ್ಗೆ ತರಬೇತಿಯಲ್ಲಿ ತಿಳಿಸಲಾಯಿತು.  ತುರ್ತು ಪರಿಸ್ಥಿತಿಯಲ್ಲಿ ಸದರಿ ತರಬೇತಿ ಪಡೆದ ನಾಗರೀಕರನ್ನು ಪೊಲೀಸರೊಂದಿಗೆ ಸಹಾಯಕರಾಗಿ ಬಳಸಲು ಸಹಾಯಕಾರಿಯಾಗಿದೆ.  ಹೊಸದಾದ ಬಂದೂಕು ಪರವಾನಗಿಯನ್ನು ಪಡೆಲು ಈ ತರಬೇತಿಯ ಅವಶ್ಯಕತೆ ಇರುತ್ತದೆ.

        ಈ ತರಬೇತಿಯಲ್ಲಿ ಒಟ್ಟು 81 ಜನ ಸೋಮವಾರಪೇಟೆ ತಾಲೋಕಿನ ನಾಗರೀಕರು ಭಾಗವಹಿಸಿದ್ದು, ಅವರ ಪೈಕಿ 5 ಮಂದಿ ಮಹಿಳೆಯರು ಭಾಗವಹಿಸಿದ್ದರು. ಈ ತರಬೇತಿಯನ್ನು ಡಿ.ಎ.ಆರ್. ಘಟಕದ ಆಯುಧಗಾರದ ನಿರ್ವಾಹಕರಾದ ಎಸ್‍.ಕೆ. ವೆಂಕಪ್ಪ, ಎ.ಆರ್‍.ಎಸ್‍.ಐ. ರವರು ನಡೆಸಿಕೊಟ್ಟಿರುತ್ತಾರೆ.

        ಈ ತರಬೇತಿಯು ದಿನಾಂಕ 13-2-2019 ರಂದು ಸಮಾರೋಪ ಸಮಾರಂಭದ ಮೂಲಕ ಮುಕ್ತಾಯಗೊಂಡಿದ್ದು, ಈ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ: ಸುಮನ್ ಡಿ. ಪೆನ್ನೇಕರ್, ಐಪಿಎಸ್‍ ರವರು ಮಾತನಾಡಿ ಬಂದೂಕನ್ನು ಬಳಸುವ, ನಿರ್ವಹಣೆ ಮಾಡುವ ಮತ್ತು ಅದರಿಂದ ಉಪಯೋಗ ಮತ್ತು  ಅಪಾಯದ ಬಗ್ಗೆ ತರಬೇತಿಯಲ್ಲಿ ಭಾಗವಹಿಸಿದ ನಾಗರೀಕರಿಗೆ ತಿಳಿಹೇಳಿದರು.  ಸಮಾರಂಭದಲ್ಲಿ  ರಾಚಯ್ಯ, ಆರ್‍.ಪಿ.ಐ, ಡಿಎಆರ್‍, ಮಡಿಕೇರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.