ಸಂದರ್ಶಕರಿಗೆ ಪುಟ್ಟ ಗ್ರಂಥಾಲಯ

ಕೊಡಗು ಜಿಲ್ಲೆಯ ವಿರಾಜಪೇಟೆ ಉಪವಿಭಾಗದ ಗೋಣಿಕೊಪ್ಪ ವೃತ್ತಕ್ಕೊಳಪಡುವ  ಪೊನ್ನಂಪೇಟೆ ಪೊಲೀಸ್ ಠಾಣೆಗೆ ಬರುವ ಸಂದರ್ಶಕರ / ದೂರುದಾರರ ಅನುಕೂಲಕ್ಕಾಗಿ ಠಾಣೆಯ ಸಂದರ್ಶಕರ ಕೊಠಡಿಯಲ್ಲಿ ಪುಟ್ಟ ಗ್ರಂಥಾಲಯವನ್ನು ದಿನಾಂಕ 17-12-2018 ರಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ: ಸುಮನ್ ಡಿ. ಪೆನ್ನೇಕರ್, ಐಪಿಎಸ್ ರವರು ಉದ್ಘಾಟಿಸಿರುತ್ತಾರೆ.  ಈ ಗ್ರಂಥಾಲಯದಲ್ಲಿ  ಠಾಣೆಗೆ ಬರುವ ಸಂದರ್ಶಕರು ಮತ್ತು ದೂರುದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾನೂನು ಅರಿವಿನ ಬಗ್ಗೆ ಪುಸ್ತಕಗಳು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರ ಪುಸ್ತಕಗಳು, ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು, ಮಾನಸಿಕ ತೊಳಲಾಟ ಪರಿಹಾರೋಪಾಯದ ಬಗೆಗಿನ  ಪುಸ್ತಕಗಳು ಹಾಗು ಇನ್ನೂ ಹಲವು ರೀತಿಯ ಉಪಯುಕ್ತ ಮಾಹಿಯನ್ನೊಳಗೊಂಡ ಪುಸ್ತಕಗಳನ್ನು ಸಂಗ್ರಹಿಸಿ ಇಡಲಾಗಿದ್ದು ಠಾಣೆಗೆ ಬರುವ ಸಂದರ್ಶಕರು /ದೂರುದಾರರು ಪೊಲೀಸ್ ಅಧಿಕಾರಗಳನ್ನು ಭೇಟಿ ಮಾಡಲು ಠಾಣೆಗೆ  ಬಂದ ಸಂದರ್ಭದಲ್ಲಿ ತಮ್ಮ ಆಯ್ಕೆಗನುಸಾರ ಪುಸ್ತಕಗಳನ್ನು ಪಡೆದು ಓದುವ ಅವಕಾಶವನ್ನು ಕಲ್ಪಸಿದೆ. ಠಾಣೆಗೆ ಆಗಮಿಸುವ ಸಂದರ್ಶಕರು / ದೂರುದಾರರು ಇದರ  ಉಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.