Crime News

ಮದ್ಯವ್ಯಸನಿ ಮಹಿಳೆ ನೀರಿಗೆ ಬಿದ್ದು ಸಾವು:

ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಮೀನು ಮಾರ್ಕೆಟ್‍ಬಳಿ 5-12-2018 ರಂದು ಮಾದಾಪುರ ನಿವಾಸಿ ಶ್ರೀಮತಿ ಪವಿತ್ರ ಎಂಬವರ ತಾಯಿ ಶ್ರೀಮತಿ ಶಾಂತಿ ರವರು ಕುಡಿದ ಅಮಲಿನಲ್ಲಿ ಕೊಳಚೆ ನೀರಿಗೆ ಬಿದ್ದು ಮೃತಪಟ್ಟಿದ್ದು, ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ,

ಬಾಲಕನಿಗೆ ಬೈಕ್ ಡಿಕ್ಕಿ:

ಮಡಿಕೇರಿ ತಾಲೋಕು ಕೆ. ನಿಡುಗಣೆ ಗ್ರಾಮದ ನಿವಾಸಿ ಶ್ರೀಮತಿ ಪ್ರಫುಲ್ಲ ಎಂಬವರ ಮಗ 10 ವರ್ಷ ಪ್ರಾಯದ ತೇಜಸ್ ದಿನಾಂಕ 1-12-2018 ರಂದು ಸಮಯ 2-00 ಪಿ.ಎಂ. ಗಂಟೆಗೆ ಮಡಿಕೇರಿ ನಗರದ ಜ್ಯೂನಿಯರ್ ಕಾಲೇಜು ಬಳಿ ರಸ್ತೆಯಲ್ಲಿ ನಿಂತಿದ್ದಾಗ ಕೆಎ-12-2251ರ ಮೋಟಾರ್ ಸೈಕಲ್‍ ಸವಾರ ಮೋಟಾರ್‍ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ತೇಜಸ್‍ ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ:

ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ಎಳ್ಳುಕೊಚ್ಚಿ ಗ್ರಾಮದ ನಿವಾಸಿ ಸುದರ್ಶನ್ ಎಂಬವರ ತಂದೆ 52 ವರ್ಷ ಪ್ರಾಯದ ದಿವಾಕರ ಎಂಬವರು ದಿನಾಂಕ 3-12-2018 ರಂದು ಮನೆಯಿಂದ ಕಾಣೆಯಾಗಿದ್ದು, ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಮೇಲೆ ದೌರ್ಜನ್ಯ:

ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಗೌಳಿಬೀದಿನಿವಾಸಿ ಶ್ರೀಮತಿ ಮೀನಾಕ್ಷಿ ಎಂಬವರಿಗೆ ದಿನಾಂಕ 28-10-1999 ರಿಂದ ಇಲ್ಲಿಯ ತನಕ ತನ್ನ ಗಂಡ ಗಿರೀಶ್ ಕುಮಾರ್‍ ರವರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುತ್ತಿರುವ ಬಗ್ಗೆ ಕೊಡಗು ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಆದಾರದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಕಲ್ಲುಗಣಿಗಾರಿಕೆ ಪ್ರಕರಣ ದಾಖಲು:

ದಿನಾಂಕ 05-12-2018 ರಂದು ಎಂ. ಮಹೇಶ್, ಪೊಲೀಸ್ ನಿರೀಕ್ಷಕರು, ಡಿಸಿಐಬಿ ಘಟಕ ಮಡಿಕೇರಿ ರವರು ಸಿಬ್ಬಂದಿಯವರುಗಳೊಂದಿಗೆ ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವಾಗ್ಗೆ ಪೊನ್ನಂಪೇಟೆ ಕಿರಗೂರು ಗ್ರಾಮದ ಚೆಪ್ಪುಡಿರ ನಟೇಶ್ ಎಂಬುವರ ಕಾಫಿ ತೋಟದ ನಡುವಿನ ಜಾಗದಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆಯನ್ನು ನಡೆಸುತ್ತಿರುವುದಾಗಿ ಬಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಕಿರುಗೂರು ಗ್ರಾಮದ ಚೆಪ್ಪುಡಿರ ನಟೇಶ್‍ ರವರ ಕಾಫಿ ತೋಟದ ನಡುವೆ ಆರೋಪಿ ಚೆಪ್ಪುಡೀರ್ ನಟೇಶ್ ಎಂಬವರು ಅಕ್ರಮವಾಗಿ ಸ್ಪೋಟಕಗಳನ್ನು ಬಳಸಿ ಕಲ್ಲುಗಣಿಗಾರಿಕೆಯನ್ನು ನಡೆಸುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿರುತ್ತದೆ.

ದಾರಿ ತಡೆದು ಕತ್ತಿಯಿಂದ ಕಡಿದು ಕೊಲೆಗೆ ಯತ್ನ:

ದಿನಾಂಕ 5-12-2018 ರಂದು ಈಸ್ಟ್ ನೆಮ್ಮಲೆ ಗ್ರಾಮದ ನಿವಾಸಿಗಳಾದ ಚೊಟ್ಟೆಯಂಡಮಾಡ ಮಂದಣ್ಣ ಹಾಗು ದಿನೇಶ್‍ರವರು ಟಿ.ಶೆಟ್ಟಿಗೇರಿ ಕಡೆಯಿಂದ ಮಾರುತಿ ವ್ಯಾನಿನಲ್ಲಿ ಬರುತ್ತಿದ್ದಾಗ ಈಸ್ಟ್‍ನೆಮ್ಮಲೆ ಗ್ರಾಮದಲ್ಲಿ  ಅದೇ ಗ್ರಾಮದ ಮಾಣಿರ ದೇವಯ್ಯ, ಮಾಣಿರ ಕಾರ್ಯಪ್ಪ ಮತ್ತು ಶ್ರೀಮತಿ ಮಾಣಿರ ತಂಗಮ್ಮರವರುಗಳು ದೊಣ್ಣೆ, ಕಲ್ಲು ಇತ್ಯಾದಿಗಳನ್ನು ಕೈಯಲ್ಲಿ ಹಿಡಿದುಕೊಂಡು ಮಂದಣ್ಣ ಹಾಗು ದಿನೇಶ್‍ರವರನ್ನು ದಾರಿಯಲ್ಲಿ ತಡೆದು ಅವರನ್ನು ವ್ಯಾನಿನಿಂದ ಕೆಳಗೆ ಎಳೆದು ಇಬ್ಬರನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ್ದು, ಅಲ್ಲದೆ ವಾಹನದ ಮೇಲೆ ಕಲ್ಲುಗಳನ್ನು ಎಸೆದು ಜಖಂ ಪಡಿಸಿದ್ದು, ಈ ಸಂಬಂಧ  ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಚೊಟ್ಟೆಯಂಡಮಾಡ ದರ್ಶ್‍ನ್ ರವರು ಮತ್ತು ಸ್ಥಳೀಯರು ತೀವ್ರ ರಸ್ತ ಸ್ರಾವವಾಗಿ ಬಿದ್ದಿದ್ದ ಮಂದಣ್ಣ ಹಾಗು ದಿನೇಶ್‍ರವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಿದ್ದು,  ಈ ಸಂಬಂಧ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ವಿಚಾರದಲ್ಲಿ ಜಗಳ, ಹಲ್ಲೆ:

ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ಈಸ್ಟ್‍ನೆಮ್ಮಲೆ ಗ್ರಾಮದ ನಿವಾಸಿ ದಿನಾಂಕ 5-12-2018 ಎಂ.ಕೆ. ದೇವಯ್ಯ ಮತ್ತು ತೋಟದ ಕೆಲಸದವರ ಮೇಲೆ ಭತ್ತದ ಕಣದಲ್ಲಿ ಕೆಲಸ ಮಾಡಿಕೊಂಡಿರುವಾಗ್ಗೆ ಆರೋಪಿಗಳಾದ ಚೊಟ್ಟೆಯಂಡಮಾಡ ಮಂದಣ್ಣ, ಚೊಟ್ಟೆಯಂಡಮಾಡ ಬೋಸ್, ಚೊಟ್ಟೆಯಂಡಮಾಡ ದಿನೇಶ್, ಚೊಟ್ಟೆಯಂಡಮಾಡ ನಿಶಾನ್, ವಿಶು, ನಟೇಶ್  ಮತ್ತು ಲೋಕೇಶ್ ರವರುಗಳು ಸೇರಿ ದಾರಿ ವಿಚಾರದಲ್ಲಿ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದು ಕತ್ತಿಯಿಂದ ಕಡಿದು ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಂಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ:

ಸೋಮವಾರಪೇಟೆ ಠಾಣಾ ಸರಹದ್ದಿನ ತಾಕೇರಿ ಗ್ರಾಮದ ನಿವಾಸಿ ಎಸ್.ಎ. ಕಾಳಪ್ಪ ಎಂಬವರ ತಂದೆ ಎಸ್‍.ಎಂ. ಅಪ್ಪಯ್ಯ ಹಾಗು ಶ್ರೀಮತಿ ಬೊಳ್ಳಮ್ಮ ರವರುಗಳು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 5-12-2018 ರಂದು ಮನೆಯಲ್ಲಿ ಯಾರು ಇಲ್ಲದೆ ಸಮಯದಲ್ಲಿ  ಮನೆಯ ಪಕ್ಕದ ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಎಸ್‍.ಎ. ಕಾಳಪ್ಪ ನವರು ನೀಡಿದ ದೂರಿನ ಮೇರೆಗೆ ಸೋವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.