ರಸ್ತೆ ಸುರಕ್ಷತಾ ಕಾರ್ಯಾಗಾರ

ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹವು ‘ರಸ್ತೆ ಸುರಕ್ಷತೆ – ಜೀವದ ರಕ್ಷೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಜಿಲ್ಲಾ ಪೊಲೀಸ್, ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಹಾಗು ಟ್ರಾವೆಲ್‍ ಅಸೋಶಿಯೇಷನ್‍ರವರ ಸಹಯೋಗದಲ್ಲಿ  ಶಾಲಾ ಕಾಲೇಜು ವಾಹನ ಚಾಲಕರುಗಳಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಸಾಗಿಸುವ ವಾಹನ ಚಾಲಕರುಗಳು ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಅರಿವು ಕಾರ್ಯಾಗಾರವನ್ನು ಇಂದು ನಗರದ ಕ್ರಿಸ್ಟಲ್ ಹಾಲ್‍ ನಲ್ಲಿ  ಆಯೋಜಿಸಲಾಗಿತ್ತು.

        ಕಾರ್ಯಕ್ರಮವನ್ನು ಉದ್ದೇಶಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ:ಸುಮನ್ ಡಿ. ಪೆನ್ನೇಕರ್‍, ಐಪಿಎಸ್ ರವರು ಶಾಲೆಗಳಲ್ಲಿ ಹಾಗು ಶಾಲೆಯಿಂದ ಮನೆಗೆ ಹಾಗು ಮನೆಯಿಂದ ಶಾಲೆಗೆ ಮಕ್ಕಳನ್ನು ವಾಹನಗಳಲ್ಲಿ  ಕಳುಹಿಸುವ ಸಂದರ್ಭಗಳಲ್ಲಿ ಶಾಲಾ ಮುಖ್ಯಸ್ಥರು ಹಾಗು ವಾಹನ ಚಾಲಕರುಗಳು ವಹಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು ಹಾಗು ಪ್ರತಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಸಮೀತಿಯನ್ನು ಸರ್ಕಾರದ ನಿರ್ದೇಶನದ ಮಾರ್ಗಸೂಚಿಗಳನ್ವಯ ರಚಿಸುವಂತೆ ಹಾಗು ಅದೇ ರೀತಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.

        ಕಾರ್ಯಾಗಾರದಲ್ಲಿ ಮಾತನಾಡಿದ ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ. ಅನೂಪ್ ಮಾದಪ್ಪನವರು ಶಾಲಾ ಮಕ್ಕಳನ್ನು ವಾಹನಗಳಲ್ಲಿ ಶಾಲೆಗಳಿಗೆ ಕರೆದೊಯ್ಯುವಾಗ ನಿಗದಿತ ಮಿತಿಗಿಂತ ಹೆಚ್ಚಾಗಿ ಮಕ್ಕಳನ್ನು ಕರೆದೊಯ್ಯುವುದು, ಸುಸ್ಥಿತಿಯಲ್ಲಿದ ವಾಹನಗಳಲ್ಲಿ ಸಾಗಿಸಸುವುದು   ಮುಂತಾದವುಗಳನ್ನು ಮಾಡತಕ್ಕದಲ್ಲ ಹಾಗು ಈ ಸಂಬಂಧ ಸರಕಾರದ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದರು. ಮತ್ತು ರಸ್ತೆ ಸುರಕ್ಷತೆಗೆ ಸಂಬಂಧಪಟ್ಟಂತೆ ಕಾನೂನಿನ ಬಗ್ಗೆ ತಿಳುವಳಿಕೆ ನೀಡಿದರು.

        ಕಾರ್ಯಾಗಾರದಲ್ಲಿ  ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ನಡೆಸಲಾದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಾಗಾರದಲ್ಲಿ  ಆರ್‍.ಟಿ.ಒ. ಅಧಿಕಾರಿ ಶ್ರೀಮತಿ ಸೌಂದರ್ಯ, ಆರ್‍.ಟಿ.ಒ. ನಿರೀಕ್ಷಕ ರಾಮಚಂದ್ರ , ಕೆ.ಎಸ್‍.ಆರ್‍.ಟಿ.ಸಿ. ಮಡಿಕೇರಿ ಡಿಪೋದ ಅಧಿಕಾರಿಗಳು, ಶಾಲಾ ಮುಖ್ಯಸ್ಥರುಗಳು ಹಾಗು ಶಾಲಾ ಕಾಲೇಜು ವಾಹನ ಚಾಲಕರುಗಳು, ಮಕ್ಕಳನ್ನು ಶಾಲೆಗಳಿಗೆ ಸಾಗಿಸುವ ವಾಹನ ಚಾಲಕರುಗಳು ಹಾಜರಿದ್ದರು.