ಸರಗಳ್ಳತನ  

              ದಿನಾಂಕ 05-07-2019 ರಂದು ಮಡಿಕೇರಿ ನಗರದ ಮಂಗಳಾದೇವಿ ನಗರದ ನಿವಾಸಿಯಾದ ಸೌಮ್ಯರವರು ನಗರದ ಅಪ್ಪಚ್ಚುಕವಿ ರಸ್ತೆಯಲ್ಲಿ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ಬಂದ ಅಪರಿಚಿತ ವ್ಯಕ್ತಿಯು ಸೌಮ್ಯರವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಮೊಬೈಲನ್ನು ಕಿತ್ತುಕೊಂಡು ಹೋಗಿದ್ದು, ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

              ದಿನಾಂಕ 05-07-2019 ರಂದು ಗೋಣಿಕೊಪ್ಪ ನಗರದ ನಿವಾಸಿ ಕುಟ್ಟಪ್ಪನವರು ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡಿರುವಾಗ ಆಟೋ ರಿಕ್ಷಾ ಹೋಗಲು ದಾರಿ ಇಲ್ಲ ಎಂದು ಹೇಳಿ ಮುನ್ನ, ಶರೀಫ್ ಮತ್ತು ನಯಾಜ್ ರವರು ಹಲ್ಲೆ ನಡೆಸಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಸಾವು

             ದಿನಾಂಕ 03-07-2019 ರಂದು ಕೊಡ್ಲಿಪೇಟೆಯ ಜನಾರ್ಧನ ಹಳ್ಳಿಯ ನಿವಾಸಿಯಾದ ವಾಸುದೇವರವರು ಮನೆಯಲ್ಲಿ ಅಸ್ವಸ್ಥರಾಗಿದ್ದವರನ್ನು ಹಾಸನ ಜಿಲ್ಲೆಯ ಚಾಮರಾಜೇಂದ್ರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ     05-07-2019 ರಂದು ಮೃತಪಟ್ಟಿದ್ದು, ಈ ಬಗ್ಗೆ ಚೆನ್ನಮ್ಮನವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.

ಸೈಬರ್ ಅಪರಾಧಗಳ ಬಗ್ಗೆ ಕಾರ್ಯಾಗಾರ

            ದಿನಾಂಕ 04-07-2019 ರಿಂದ ಮೂರು ದಿವಸಗಳ ಕಾಲ ಜಿಲ್ಲಾ ಪೊಲೀಸ್ ಕಚೇರಿಯ ತರಭೇತಿ ಕೇಂದ್ರದಲ್ಲಿ ಬೆಂಗಳೂರಿನ ಸಿ.ಐ.ಡಿ ಘಟಕದ ವತಿಯಿಂದ ರೂಮನ್ ಸಂಸ್ಥೆಯವರಿಂದ ಸೈಬರ್ ಅಪರಾಧಗಳ ಕುರಿತು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ತರಭೇತಿಯನ್ನು ನಡೆಸಲಾಯಿತು. ತರಭೇತಿಯನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಯವರಾದ ಡಾ. ಸುಮನ್ ಡಿ.ಪಿ ರವರು ಸಿಬ್ಬಂದಿಗಳಿಗೆ ಸೈಬರ್ ಅಪರಾಧಗಳ ಕುರಿತು ಮಾಹಿತಿಯನ್ನು ನೀಡಿದರು.