ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ

ದಿನಾಂಕ 7-8-2019 ರಂದು ಕೊಡಗು ಜಿಲ್ಲೆಯ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಹೊದ್ದೂರು ಗ್ರಾಮದ ಹೊದವಾಡ ಸಮೀಪ ಪ್ರವಾಹದಲ್ಲಿ ಸಿಲುಕಿದ್ದ ಬೊಳಿಬಾಣೆ ಜೋಯಿ ಎಂಬವರ ಕಾರ್ಮಿಕ ಕುಟುಂಬವೊಂದನ್ನು ಎನ್.ಡಿ.ಆರ್.ಎಫ್ ತಂಡದ ಸಹಾಯದಲ್ಲಿ ರಕ್ಷಿಸಲಾಯಿತು.

Crime News

ವಿಷ ಉಣಿಸಿ ಪತಿಯ ಕೊಲೆ

           ದಿನಾಂಕ 04-08-2019 ರಂದು ಸೋಮವಾರಪೇಟೆ ತಾಲೋಕಿನ ತಣ್ಣೀರಹಳ್ಳ ಗ್ರಾಮದ ನಿವಾಸಿಯಾದ ಸುರೇಶ ಎಂಬುವವರು ಕೊರಿಯರ್ ನಲ್ಲಿ ಬಂದಿದ್ದ ತೀರ್ಥ ಪ್ರಸಾದವನ್ನು ಸೇವಿಸಿ ಮೃತಪಟ್ಟಿದ್ದು, ಈ ಬಗ್ಗೆ ಪತ್ನಿ ರಾಧಾರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿ ತನಿಖೆ ಕೈಗೊಂಡು, ತನಿಖೆಯ ಸಮಯದಲ್ಲಿ ಸುರೇಶರವರ ಪತ್ನಿ ಮತ್ತು ಸೋಮವಾರಪೇಟೆ ನಗರ ನಿವಾಸಿ ಮುರುಳಿ ಎಂಬುವವರು ಸೇರಿ ಸುರೇಶನವರ ಕೊಲೆ ಮಾಡುವ ಉದ್ದೇಶವನ್ನಿಟ್ಟುಕೊಂಡು ನೀರಿಗೆ ಸೈನೆಡ್ ಬೆರೆಸಿ ತೀರ್ಥದ ರೂಪದಲ್ಲಿ ಕೊರಿಯರ್ ಮೂಲಕ ಸುರೇಶನವರ ವಿಳಾಸಕ್ಕೆ  ಕಳುಹಿಸಿದ್ದನ್ನು ಸುರೇಶನವರ ಪತ್ನಿ ರಾಧಾ ದೇವರ ತೀರ್ಥ ಎಂದು ಕುಡಿಸಿದ ಪರಿಣಾಮ ಸುರೇಶನವರು ಮೃತಪಟ್ಟಿದ್ದು ಕಂಡುಬಂದ ಹಿನ್ನೆಲೆಯಲ್ಲಿ  ಸೋಮವಾರಪೇಟೆ ಠಾಣೆಯಲ್ಲಿ ಕೊಲೆ   ಮೊಕದ್ದಮೆ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ಆತ್ಮಹತ್ಯೆ

              ಸೋಮವಾರಪೇಟೆ ತಾಲೋಕಿನ ಕೊಡ್ಲಿಪೇಟೆಯ ರಾಮೇನಹಳ್ಳಿಯ ನಿವಾಸಿಯಾದ ಆನಂದ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದವರು ದಿನಾಂಕ 07-08-2019 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ             

ದಿನಾಂಕ 07-08-2019 ರಂದು ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್ಐ ರವರಿಗೆ ಮಹೇಂದ್ರ ಪಿಕ್ ಅಪ್ ಜೀಪಿನಲ್ಲಿ ಬ್ಯಾಟರಿಗಳನ್ನು ಕದ್ದು ತರುತ್ತಿರುವ ಬಗ್ಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಹೋಗಿ ಆನೆಕಾಡು ಎಂಬದಲ್ಲಿ ದಾಳಿ ಮಾಡಿ ಬೈಲುಕೊಪ್ಪದಲ್ಲಿ ಮೊಬೈಲ್ ಟವರ್‍ ಗೆ ಅಳವಡಿಸಿದ ಸುಮಾರು 24 ಬ್ಯಾಟರಿಗಳನ್ನು ಕಳ್ಳತನ ಮಾಡಿಕೊಂಡು ಜೀಪಿನಲ್ಲಿ ಸಾಗಿಸುತ್ತಿದ್ದ ಮೂಲತ: ಬೆಳಗಾಂನ ನಿವಾಸಿ ಮಡಿಕೇರಿ ನಗರದಲ್ಲಿ ವಾಸವಿರುವ ಅಭಯ್ ಮತ್ತು ಮಡಿಕೇರಿ ನಗರದ ನಿವಾಸಿ ರಾಜ ಎಂಬುವವರನ್ನು ವಾಹನ ಸಮೇತವಾಗಿ ವಶಕ್ಕೆ ಪಡೆದು ಅವರ ವಿರುದ್ಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.