Crime News

ಹಲ್ಲೆ ಪ್ರಕರಣ

ಸೋಮವಾರಪೇಟೆ ತಾಲೋಕು ಗೆಜ್ಜೆ ಹಣಕೋಡು ಗ್ರಾಮದ ನಿವಾಸಿ ಸುರೇಶ್ ಎಂಬವರು ದಿನಾಂಕ 31-8-2020 ರಂದು ಸಂಜೆ ಗೆಜ್ಜೆಹಣಕೋಡು ಗ್ರಾಮದದಲ್ಲಿ ಅಂಗಡಿಯೊಂದಕ್ಕೆ ಹೋಗಿ ಬರುತ್ತಿದ್ದಾಗ ಅದೇ ಗ್ರಾಮದ ರಮೇಶ್ ಎಂಬವರು ಸುರೇಶ್ ರವರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲಿನಿಂದ ಹಲ್ಲೆ ಮಾಡಿ ಗಾಯಪಡಸಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಬೈಕ್ ಕಳವು

ವಿರಾಜಪೇಟೆ ತಾಲೋಕು ಕುಂದ ಗ್ರಾಮದ ನಿವಾಸಿ ಜಿ.ಎಸ್.ನಂಜಪ್ಪ ಎಂಬವರಿಗೆ ಸೇರಿದ ಮೋಟಾರ್ ಸೈಕಲ್ (ನೋದಣಿ ಸಂಖ್ಯೆ ಕೆಎ-12-8618 ಟಿವಿಎಸ್ ಸ್ಪೋಟ್) ನ್ನು ದಿನಾಂಕ 31-8-2020 ರಂದು  ಗೋಣಿಕೊಪ್ಪ ನಗರದ ಟಾಸ್ ಬಿಲ್ಡಿಂಗ್ ಮುಂದಿನ ರಸ್ತೆಯಲ್ಲಿ ನಿಲ್ಲಿಸಿದ್ದು, ಸದರಿ ಬೈಕ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೊಬೈಲ್ ಟವರ್ ಬ್ಯಾಟರಿ ಕಳ್ಳತನ:

ಹೆಚ್. ದೀಪಕ್, ಮಂಗಳೂರು ರವರು ಪೊನ್ನಂಪೇಟೆಯ ಹಳ್ಳಿಗಟ್ಟು ಗ್ರಾಮದ ಸಿ.ಟಿ ನಾಣಯ್ಯ ನವರ ಜಾಗದಲ್ಲಿ ಮೊಬೈಲ್ ಟವರನ್ನು ನಿರ್ಮಿಸಿದ್ದು ಅದಕ್ಕೆ 400 ಎ.ಹೆಚ್ ಬ್ಯಾಟರಿಯನ್ನು ಅಳವಡಿಸಿದ್ದು  ದಿನಾಂಕ 30-08-2020 ರಂದು ಸಂಜೆ 05-00 ಪಿ.ಎಂ ಗೆ ಟೆಕ್ಕ್ನೀಷಿಯನ್ ಮಿಥುನ್ ರವರು ಸರ್ವೀಸ್ ಕೊಡಲು ಹೋಗಿ ನೋಡಿದಾಗ ಬ್ಯಾಟರಿ ಕಳ್ಳತನವಾಗಿರುವುದು ಕಂಡು ಬಂದಿದ್ದು, ಸದರಿ ಬ್ಯಾಟರಿಯ ಅಂದಾಜು ಮೌಲ್ಯ 10,000/- ಆಗಬಹುದೆಂದು ನೀಡಿದ ದೂರಿನ ಮೇರೆಗೆ ಪೊನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿನಾಕಾರಣ ಮಹಿಳೆ ಮೇಲೆ ಹಲ್ಲೆ

ಮಡಿಕೇರಿ ತಾಲೋಕು ಹಾಲೇರಿ ಗ್ರಾಮದ ನಿವಾಸಿ ಶ್ರೀಮತಿ ಎಂ.ಡಿ. ಶಿಲ್ಪ ಎಂಬವರು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮುಕ್ಕೋಡ್ಲು ಗ್ರಾಮದಲ್ಲಿರುವ ತನ್ನ ತವರು ಮನೆಗೆ ಹೋಗಿದ್ದು, ದಿನಾಂಕ 31-8-2020 ರಂದು ಅವರ ಚಿಕ್ಕಪ್ಪನವರಾದ ಸಕ್ಕರೆ ಕುಶಾಲಪ್ಪ ವಿನಾಕಾರಣ ಜಗಳ ಮಾಡಿ ಹಲ್ಲೆ ಮಾಡಿ ಹಣೆಯ ಭಾಗಲ್ಲೆ ಗಾಯಪಡಿಸಿದ್ದ ಬಗ್ಗೆ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.