Crime News

ಅಕ್ರಮ ಶ್ರೀಗಂಧ ಸಾಗಾಟ, ಆರೋಪಿ ಬಂಧನ:  

ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಡಗು ಜಿಲ್ಲಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಸ್ತುವಾರಿಯಲ್ಲಿರುವ ಯತೀಶ್ ಎನ್. ಐಪಿಎಸ್(ಪ್ರೊಭೆಷನರಿ) ರವರಿಗೆ ಬಂದ ಖಚಿತ ಮಾಹಿತಿ ಆದಾರದ ಮೇರೆಗೆ ಸದರಿ ಠಾಣಾ ಪಿಎಸ್‍ ಐ ಚೇತನ್ ಹಾಗು ಸಿಬ್ಬಂದಿಯೊಂದಿಗೆ ದಿನಾಂಕ 4-6-2018 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಬೋಯಿಕೇರಿ ಬಸ್ಸು ನಿಲ್ದಾಣದ ಬಳಿ ನಿಂತಿದ್ದ ವ್ಯಕ್ತಿಯೋರ್ವ ಒಂದು ಚೀಲದಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ತುಂಬಿಸಿಕೊಂಡು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದು ಆತನ ಮೇಲೆ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದು ಆತನ ಬಗ್ಗೆ ಮಾಹಿತಿ ತಿಳಿಯಲಾಗಿ ಈತನ ಹೆಸರು ಸಂಶುದ್ದೀನ್, ತಂದೆ: ಪೌತಿ ಜೈನುದ್ದೀನ್, ಪ್ರಾಯ 23 ವರ್ಷ, ವಾಸ: ಕುಂಟಾರು ಗ್ರಾಮ, ಮುಳ್ಳೇರಿಯಾ ತಾಲೋಕು, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ಎಂಬುದಾಗಿ ತಿಳಿದುಬಂದಿದ್ದು, ಆತನಿಂದ 50,000 ರೂ. ಮೌಲ್ಯದ ಅಂದಾಜು 10 ಕೆ.ಜಿ. ತೂಕದ 28 ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಪಿ. ರಾಜೇಂದ್ರ ಪ್ರಸಾದ್, ಐಪಿಎಸ್ ರವರ ನಿರ್ದೇಶನದಲ್ಲಿ, ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಕೆ.ಎಸ್. ಸುಂದರ ರಾಜ್ ರವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸಿದ್ದಯ್ಯ, ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಯತೀಶ್ ಎನ್. ಐಪಿಎಸ್ (ಪ್ರೊಭೆಷನರಿ), ಉಪ ನಿರೀಕ್ಷಕರಾದ ವಿ. ಚೇತನ್ ಹಾಗು ಸಿಬ್ಬಂದಿಗಳಾದ ತೀರ್ಥಕುಮಾರ್, ಇಬ್ರಾಹಿಂ, ಸತೀಶ್. ಎ.ಯು. ಶಿವರಾಜೇಗೌಡ, ಸುಧಾಮಣಿ ಚಾಲಕರಾದ ಅರುಣ್ ರವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಮೇಲ್ಕಾಣಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿಸಿ ಬಹುಮಾನವನ್ನು ಘೋಷಿಸಿರುತ್ತಾರೆ.

ಬೈಕ್ ಅಪಘಾತ:

ಮಡಿಕೇರಿ ತಾಲೋಕು ಮದೆನಾಡು ಗ್ರಾಮದ ನಿವಾಸಿ ಕೆ.ಪಿ. ಪ್ರಥಮ್ ಎಂಬವರು ದಿನಾಂಕ 3-6-2018 ರಂದು ಅಭಿಷೇಕ್ ಎಂಬವರ ಮೋಟಾರ್ ಸೈಕಲಿನಲ್ಲಿ ಕೆ.ಎಸ್‍.ಆರ್‍.ಟಿ.ಸಿ ಡಿಪೋ ಕಡೆಯಿಂದ ಮಡಿಕೇರಿ ನಗರದ ಕಡೆಗೆ ಬರುತ್ತಿದ್ದಾಗ ಎದುರುಕಡೆಯಿಂದ ಬಂದ ಮೋಟಾರ್ ಸೈಕಲ್ ಸದರಿ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಭಿಷೇಕ್ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಕೆ.ಪಿ. ಪ್ರಥಮ್ ಹಾಗು ಅಭಿಷೇಕ್ ರವರು ಗಾಯಗೊಂಡಿದ್ದು ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್ ಕಳವು:

ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಕಳ್ಳತನವಾದ ಘಟನೆ ವಿರಾಜಪೇಟೆ ನಗರದ ಸುಣ್ಣದ ಬೀದಿಯಲ್ಲಿ ನಡೆದಿದೆ. ಸುಣ್ಣದ ಬೀದಿ ನಿವಾಸಿ ಶ್ರೀಮತಿ ರುಬಿನಾ ಎಂಬವರು ದಿನಾಂಕ 1-6-2018 ರಂದು ತಮ್ಮ ಬಾಪ್ತು ಹೋಂಡಾ ಆಕ್ಟೀವಾ ಸ್ಕೂಟರನ್ನು ತಮ್ಮ ಮನೆಯ ಮುಂದುಗಡೆ ನಿಲ್ಲಿಸಿದ್ದು, ಮಾರನೆ ದಿನ ದಿನಾಂಕ 2-6-2018 ರಂದು ಬೆಳಗ್ಗೆ ನೋಡಿದಾಗ ಸದರಿ ಸ್ಕೂಟರ್ ಕಳ್ಳತವಾಗಿರುವುದು ಕಂಡು ಬಂದಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.