Crime News & Events

ಸಂಚಾರ ಸುರಕ್ಷತೆ ಜಾಗೃತಿ ಕಾರ್ಯಕ್ರಮ.

ರಾಜ್ಯಾದ್ಯಂತ ಜುಲೈ 1ರಿಂದ ಪೊಲೀಸ್ ಇಲಾಖಾ ವತಿಯಿಂದ ರಸ್ತೆ ಸಂಚಾರ ಮತ್ತು ರಸ್ತೆ ಸುರಕ್ಷತೆ ಮಾಸಾಚರಣೆಯನ್ನು ಆಚರಿಸುತ್ತಿದ್ದು ಈ ಪ್ರಯುಕ್ತ ಜಿಲ್ಲಾ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಮಡಿಕೇರಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಹಾಗು ಸಂಚಾರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರವನ್ನು ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಐಪಿಎಸ್ ರವರು ವಿದ್ಯಾರ್ಥಿ ಗಳು ಚಾಲನೆ ಪರವಾನಗಿ ಇಲ್ಲದೆ ಅಥವಾ ಮದ್ಯಪಾನ ಮಾಡಿ ವಾಹನ ಚಾಲಿಸುವುದು ಕಾನೂನು ಬಾಹಿರವಾಗುತ್ತದೆ ಹಾಗು ವಾಹನ ಚಾಲಿಸುವಾಗ ಎಲ್ಲಾ ಸುರಕ್ಷತಾಕ್ರಮಗಳಾದ ಸೀಟ್ ಬೆಲ್ಟ್ ಧಾರಣೆ, ಹೆಲ್ಮೆಟ್ ಧಾರಣೆ ಮತ್ತು ರಸ್ತೆ ಎಡಬದಿಯಲ್ಲಿಯೇ ವಾಹನ ಚಾಲನೆ, ಅಪಾಯಕಾರಿ ವೇಗದಲ್ಲಿ ವಾಹನ ಚಾಲಿಸದಿರುವುದು ಮುಂತಾದ ವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕರೆನೀಡಿದರು.  ಮುಂದುವರೆದು ಮಾತನಾಡಿದ ರಸ್ತೆ ಸಂಚಾರ ಮತ್ತು ಸುರಕ್ಷಾ ಕ್ರಮಗಳನ್ನು ವಿದ್ಯಾರ್ಥಿಗಳು ತಾವು ಪಾಲಿಸುವುದಲ್ಲದೆ ತಮ್ಮ ಕುಟುಂಬ, ಸ್ನೇಹಿತರು ಮತ್ತು ಬಂಧು ಮಿತ್ರರಲ್ಲಿಯೂ ಸಹ ಬಗ್ಗೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು. ಹಾಗು ಅಪಾಯಕಾರಿ ಚಾಲನೆ ಹಾಗು ಸಮಚಾರಿ ನಿಯಮ ಉಲ್ಲಂಘನೆಗಳಿಂದ ಸಂಭವಿಸುವ ಅಪಾಯಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು  ಕಿರುಚಿತ್ರಗಳನ್ನು ಪ್ರದರ್ಶಿಸಿ ಮಾಹಿತಿಯನ್ನು ನೀಡಿದರು.    

 

 

 

 

 

 

 

 

 

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಹಾಗು  ಮಡಿಕೇರಿ ಉಪ ವಿಭಾಗದ ಡಿವೈಎಸ್‍ಪಿ ಕೆ.ಎಸ್. ಸುಂದರ್‍ ರಾಜ್, ನಗರ ವೃತ್ತ ನಿರೀಕ್ಷಕ ಐ.ಪಿ. ಮೇದಪ್ಪ ಮುಂತಾದವು ಉಪಸ್ಥಿತರಿದ್ದರು.

ಸ್ನೇಹಿತನಿಂದ ಹಲ್ಲೆ:

ವಿರಾಜಪೇಟೆ ನಗರದ ಶಿವಕೇರಿ ನಿವಾಸಿ ಹೆಚ್‍.ಸಿ. ಸಾಗರ್ ಎಂಬವರು ದಿನಾಂಕ 30-6-2018 ರಂದು ರಾತ್ರಿ 11-00 ಗಂಟೆಗೆ ಗೋಣಿಕೊಪ್ಪದ ಮಂಗಳವಿಹಾರ ಕಲ್ಯಾಣ ಮಂಟಪದಲ್ಲಿ ಡೆಕರೇಷನ್ ಕೆಲಸ ಮುಗಿಸಿ ಕಾರಿನಲ್ಲಿ ವಿರಾಜಪೇಟೆ ನಗರದ ಕಡೆಗೆ ಹೋಗುತ್ತಿದ್ದಾಗ ಜೊತೆಗೆ ಇದ್ದ ಕಾಡಿ ಕುಟ್ಟೀರ ಸತೀಶ ಎಂಬವರು ತನ್ನನ್ನು ತನ್ನ ಮನೆಗೆ ಕಾರಿನಲ್ಲಿ ಬಿಡುವ ವಿಚಾರದಲ್ಲಿ ಜಗಳ ಮಾಡಿ ಫಿರ್ಯಾದಿ ಹೆಚ್.ಪಿ. ಸಾಗರ್ ರವರ ಕಾರಿನ ಗಾಜನ್ನು ದೊಣ್ಣೆಯಿಂದ ಒಡೆದು ಹಾಕಿ ನಷ್ಟಪಡಿಸಿದ್ದು ಅಲ್ಲದೆ ಕೈಗಳಿಂದ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೆರೆಗೆ ಬಿದ್ದು ವ್ಯಕ್ತಿ ಸಾವು:

ಸೋಮವಾರಪೇಟೆ ಠಾಣಾ ಸರಹದ್ದಿನ ಗರ್ವಾಲೆ ಗ್ರಾಮದ ನಿವಾಸಿ ಶ್ರೀಮತಿ ಮಣಿ ಎಂಬವರ ಪತಿ ಕುಮಾರ ಎಂಬವರು ದಿನಾಂಕ 30-6-2018 ರಂದು ವಿಪರೀತ ಮದ್ಯಸೇವಿಸಿ ಮನೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪಕ್ಕದ ಕೆರೆಗೆ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ:

ಮಡಿಕೇರಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಹಾಕತ್ತೂರು ಗ್ರಾಮದ ತೊಂಭತ್ತುಮನೆ ನಿವಾಸಿ ಶ್ರೀಮತಿ ಬಿ.ಜಿ. ದೇವಕ್ಕಿ ಎಂಬವರ ಪತಿ ಗುರುವ ಎಂಬವರು ದಿನಾಂಕ 29-6-2018 ರಂದು ಕಗ್ಗೋಡ್ಲು ಗ್ರಾಮಕ್ಕೆ ಹೋಗಿಬರುವುದಾಗಿ ತಿಳಿಸಿ ಹೋಗಿದ್ದು ನಂತರ ಮನೆಗೆ ಬಾರದೆ ಕಾಣೆಯಾಗಿದ್ದು ಶ್ರೀಮತಿ ಬಿ.ಜಿ. ದೇವಕ್ಕಿರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯಮಾರಾಟ.

ದಿನಾಂಕ 01.07.2018 ರಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್‍.ಐ. ರವರಾದ ನವೀನ್ ಗೌಡ ರವರಿಗೆ ಬಂದ ಮಾಹಿತಿಯ ಮೇರೆಗೆ ದಿನಾಂಕ 1-7-2018 ರಂದು ಗೊಂದಿಬಸವನಹಳ್ಳಿ ಗ್ರಾಮದ ಮಣಿ ಎಂಬವರ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಯ್ಯಪ್ಪ ಎಂಬ ವ್ಯಕ್ತಿ ಸರಕಾರದ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯದ ಪ್ಯಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಒತ್ತಾಯವಾಗಿ ಕುಡಿಯುವಂತೆ ಪ್ರಚೋದನೆ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಅವರ ವಶದಲ್ಲಿದ್ದ 90 ಎಂ.ಎಲ್.ನ ಮದ್ಯದ 10 ಪ್ಯಾಕೆಟ್ ಗಳನ್ನು ಹಾಗು ರೂ.150/- ನಗದನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಾಗಿಲು ಮುರಿದು ಕಳವು:

ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಬೆಕ್ಕೆಸೊಡ್ಲೂರು ಗ್ರಾಮದ ನಿವಾಸಿ ಪೋರಂಗಡ ಮೊಣ್ಣಪ್ಪ ಎಂಬವರ ಮನೆಗೆ ದಿನಾಂಕ 27-5-2018 ರಿಂದ 1-7-2018ರ 3.30 ಪಿ.ಎಂ. ನಡುವಿನ ಅವಧಿಯಲ್ಲಿ ಮನೆಯ ಬೀಗವನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ಮನೆಯಲ್ಲಿಟ್ಟಿದ್ದ  10,000 ರೂ ಮೌಲ್ಯದ ಹಾಗು 20,000 ರೂ ಮೌಲ್ಯದ ಎರಡು ಎಸ್‍.ಬಿ.ಬಿ.ಎಲ್  ಕೋವಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಪೋರಂಗಡ ಮೊಣ್ಣಪ್ಪನವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.