Crime News

ಹಣದ ವಿಚಾರದಲ್ಲಿ ಹಲ್ಲೆ

ವಿರಾಜಪೇಟೆ ತಾಲೂಕಿನ ಕದನೂರು ಗ್ರಾಮದ ನಿವಾಸಿಯಾದ ಜಾನ್ಸಿ ಎಂಬುವವರು ಅದೇ ಗ್ರಾಮದ ಚೇತನ್ ರವರಿಗೆ ಸಾಲವಾಗಿ ಕೊಟ್ಟಿದ್ದ ಹಣವನ್ನು ದಿನಾಂಕ 10-08-2018 ರಂದು ವಾಪಾಸ್ಸು ಕೇಳಿದಾಗ ಜಗಳ ಮಾಡಿ ಚೇತನ್ ಹಾಗೂ ಸುರೇಶರವರು ಹಲ್ಲೆ ನಡೆಸಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ನಗರದಲ್ಲಿ ವರದಿಯಾಗಿದೆ. ಮಡಿಕೇರಿ ನಗರದ ಮಾರ್ಕೆಟ್ ಹತ್ತಿರ ವಾಸವಿರುವ  ಅಮರ್ ನಾಥ್ ಕುಮಾರ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 10-08-2018 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ  ದಾಖಲಾಗಿರುತ್ತದೆ.