ವಿದ್ಯುತ್ ಸ್ಪರ್ಷಗೊಂಡು ಮಹಿಳೆ ಸಾವು:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕಾಟಕೇರಿ ಗ್ರಾಮದ ನಿವಾಸಿ ಎಂ.ಬಿ. ಆನಂದ ಎಂಬವರ ತಾಯಿ ಅಮ್ಮವ್ವ ಎಂಬವರು ದಿನಾಂಕ 15-8-2018 ರಂದು ಬೆಳಗ್ಗೆ  ತಮ್ಮ ತೋಟಕ್ಕೆ ಹೋಗಿದ್ದು, ತೋಟದಲ್ಲಿ ಹಾದುಹೋದ ವಿದ್ಯುತ್ ತಂತಿ ಮೇಲೆ ಮರ ಬಿದ್ದು ತಂತಿ ನೆಲದ ಮೇಲೆ ಬಿದ್ದಿದ್ದು  ಸದರಿ ವಿದ್ಯುತ್ ತಂತಿ ಮೇಲೆ ಅಮ್ಮವ್ವನವರು ಆಕಸ್ಮಿಕವಾಗಿ ಕಾಲನ್ನು ಇಟ್ಟಿದ್ದ ಪರಿಣಾಮವಾಗಿ ವಿದ್ಯುತ್ ಹರಿದು ಸದರಿ ಅಮ್ಮವ್ವನವರು ಸಾವನಪ್ಪಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪರಕರಣ ದಾಖಲಾಗಿದೆ.

ಕಾರುಗಳ ಮುಖಾಮುಖಿ ಡಿಕ್ಕಿ:

ಸುಂಟಿಕೊಪ್ಪ ಠಾಣೆ ಸರಹದ್ದಿನ ಹೊಸಕೋಟೆ ಗ್ರಾಮದಲ್ಲಿ ಮಡಿಕೇರಿ ನಗರದ ಸುಬ್ರಹ್ಮಣ್ಯ ನಗರ ನಿವಾಸಿ ಸಿ.ಜೆ.  ಪೂವಣ್ಣ ಎಂಬವರು ತಮ್ಮ ಕಾರಿನಲ್ಲಿ ಕುಶಾಲನಗರದಿಂದ ಮಡಿಕೇರಿ ಕಡೆಗೆ ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಕಾರನ್ನು ಅದರ ಚಾಲಕ ಅವೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಿ.ಜೆ. ಪೂವಣ್ಣರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳು ಜಖಂಗೊಂಡಿದ್ದು ಜಿ.ಜೆ. ಪೂವಣ್ಣನವರಿಗೆ ಪೆಟ್ಟಾಗಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.