Crime News

ರಸ್ತೆ ಅಪಘಾತ

ದಿನಾಂಕ 03/03/2019ರಂದು ಮಡಿಕೇರಿ ನಗರದ ಚೈನ್ ಗೇಟ್ ನಿವಾಸಿ ಪಿ.ಅಜೀಜ್ ಎಂಬವರು ನಗರದ ಓಂಕಾರೇಶ್ವರ ದೇವಸ್ಥಾನ ರಸ್ತೆಯ ಅಮೃತದರ್ಶನ್ ಹೋಟೆಲಿನ ಬಳಿ ಕೆಲಸ ಮಾಡುತ್ತಿದ್ದಾಗ ಅಲ್ಲಿ ನಿಲ್ಲಿಸಿದ್ದ ಕೆಎ-55-3758ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಅಜೀಜ್‌ರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೋದ ಪರಿಣಾಮ ಅಜೀಜ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 03/03/2019ರಂದು ಅಮ್ಮತ್ತಿ ಬಳಿಯ ಪುಲಿಯೆರಿ ಗ್ರಾಮದ ಆನಂದಪುರ ನಿವಾಸಿ ಮೋಂತು ಎಂಬವರು ಆನಂದಪುರದ ಬಸ್‌ ನಿಲುಗಡೆ ಸ್ಥಳದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಕೆಎ-01-ಪಿ-3207ರ ಕಾರನ್ನು ಅದರ ಚಾಲಕ ನೆಲ್ಲಿಹುದಿಕೇರಿಯ ಪ್ರಿನ್ಸನ್ ಡಿ ಕಾತ್ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಮೋಂತುರವರಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಂತುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 03/03/2019ರಂದು ಸಿದ್ದಾಪುರ ಬಳಿಯ ಕರಡಿಗೋಡು ನಿವಾಸಿ ಜಾನ್ ಡಿ ಎಂಬವರು ಅವರ ಲಾರಿಯಲ್ಲಿ ಕಾಫಿಯನ್ನು ತೆಗೆದುಕೊಂಡು ಮಡಿಕೇರಿ ಮಾರ್ಗವಾಗಿ ಪಿರಿಯಾಪಟ್ನ ಕಡೆಗೆ ಹೋಗುತ್ತಿರುವಾಗ ಮಡಿಕೇರಿ ಬಳಿಯ ಇಬ್ನಿವಳವಾಡಿ ಗ್ರಾಮದ ಬೋಯಿಕೇರಿಯ ಇಳಿಜಾರಿನಲ್ಲಿ ಎದುರುಗಡೆಯಿಂದ ಕೆಎ-41-ಎನ್‌-6939ರ ಕಾರನ್ನು ಅದರ ಜೋಸೆಫ್ ಮ್ಯಾಥ್ಯೂ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ಬಲಬದಿಗಾಗಿ ಚಾಲಿಸಿಕೊಂಡು ಬಂದು  ಜಾನ್‌ರವರು ಚಾಲಿಸುತ್ತಿದ್ದ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಚಾಲಕನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 03/03/2019ರಂದು ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬು ನಿವಾಸಿ ಆಸಾದ್ ಎಂಬವರು ಅವರ ಸ್ನೇಹಿತ ರಾಹಿದ್‌ , ಮಸೂದ್, ಹಫೀಲ್‌ ಎಂಬವರೊಡನೆ ಕಾರಿನಲ್ಲಿ ಕೇರಳದಿಂದ ಮೈಸೂರಿಗೆ ಹೋಗುತ್ತಿರುವಾಗ ಗೋಣಿಕೊಪ್ಪ ಬಳಿಯ ಹಾತೂರಿನಲ್ಲಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ಬೆನ್‌ ಜಾನ್‌ ಎಂಬವರು ಅತಿ ವೇಗ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಸಾದ್‌ರವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ರಾಹಿದ್, ಬಾಬು ಮತ್ತು ಪ್ರಜಿನಾ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು

ದಿನಾಂಕ 03/03/2019ರಂದು ಪೊನ್ನಂಪೇಟೆ ಬಳಿಯ ನೊಕ್ಯ ಗ್ರಾಮದ  ಜಯಪುರ ಎಸ್ಟೇಟ್ ನ ನಿವಾಸಿ ಪಣಿ ಎರವರ ನಂಜ ಎಂಬವರು ಕೆರೆಯಲ್ಲಿ ಕಲಮಕಾಯಿಯನ್ನು ಹಿಡಿಯಲು ಹೋಗಿ ಕೆರೆಯಲ್ಲಿ ಈಜಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರ ಅಕ್ರಮ ಸಾಗಾಟ

ದಿನಾಂಕ 03/03/2019 ರಂದು ಪೊನ್ನಂಪೇಟೆ ಬಳಿಯ ದೇವರಪುರ ಬಳಿ ಬೇಗೂರು ನಿವಾಸಿ ನಶೀದ್ ಎಂಬವರು ಕಾರಿನಲ್ಲಿ ಸುಮಾರು ರೂ. 50,000/- ಬೆಲೆಯ ನಂದಿ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಪೊನ್ನಂಪೇಟೆ ಪಿಎಸ್‌ಐ ಬಿ.ಜಿ. ಮಹೇಶ್‌ರವರು ಪತ್ತೆ ಹಚ್ಚಿ ಮರದ ತುಂಡುಗಳನ್ನು ವಶಪಡಿಸಿಕೊಂಡು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ