Crime News

ಜಾಗದ ವಿಚಾರದಲ್ಲಿ ಜಗಳ:

ಸೋಮವಾರಪೇಟೆ ತಾಲೋಕು ಬಾಣವಾರದ ನಿವಾಸಿ ಶ್ರೀಮತಿ ಜೆ.ಎಸ್. ಶಾಂತಿ ಎಂಬವರು ದಿನಾಂಕ 16-3-2019 ರಂದು ತಮ್ಮ ಮನೆಯ ಹತ್ತಿರ ನಿಂತಿರುವಾಗ ಅದೇ ಗ್ರಾಮದ ನಿವಾಸಿ ರಮೇಶ ಎಂಬವರು ಗದ್ದೆಯ ವಿಚಾರದಲ್ಲಿ ಕೆಲಸ ಮಾಡಿವ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಿ ನೊವನ್ನುಂಟುಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಶ್ರೀಮಂಗಲ ಠಾಣಾ ಸರಹದ್ದಿನ ಶ್ರೀಮಂಗಲ ಕಾಲೋನಿಯಲ್ಲಿ ವಾಸವಾಗಿದ್ದ ಪಂಜರಿ ಎರವರ ರಾಜು ಎಂಬವರು ದಿನಾಂಕ 21-3-2019 ರಂದು ರಾತ್ರಿ ಸಮಯದಲ್ಲಿ ತಮ್ಮವಾಸದ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಕಾಂಪೌಂಡ್ ಹಾನಿ, ಕೊಲೆ ಬೆದರಿಕೆ:

ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ತಿತಿಮತಿ ಗ್ರಾಮದಲ್ಲಿ ಮಲ್ಲೇಂಗಡ ದೇವಯ್ಯ @ ಗಿರೀಶರವರು ದಿನಾಂಕ 28-2-2019 ರಂದು ತಮ್ಮ ಮನೆ ದುರಸ್ಥಿ ಹಾಗು ಕಾಂಪೌಂಡ್ ನ್ನು ದುರಸ್ಥಿ ಪಡಿಸುತ್ತಿದ್ದ ವೇಳೆ  ಅವರ ಅಣ್ಣ ಬೆಳ್ಯಪ್ಪ ಹಾಗು ಅವರ ಪತ್ನಿ ಪೊನ್ನಮ್ಮನವರು ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಲ್ಲೇಂಗಡ ದೇವಯ್ಯನವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕಾಂಪೌಂಡ್ ಇಟ್ಟಿಗೆಗಳನ್ನು ನೂಕಿ ಬಿಳಿಸಿ ಸುಮಾರು 10,000/- ರೂ.ಗಳಷ್ಟು ನಷ್ಟಪಡಿಸಿರುವ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಗೋಣಿಕೊಪ್ಪ ಠಾಣಾ ಸರಹದ್ದಿನ  ಗೋಣಿಕೊಪ್ಪ ನಗರದ ಜೆ.ಬಿ. ಕಾಂಪ್ಲೆಕ್ಸ್ ನಲ್ಲಿ ವಾಸವಾಗಿದ್ದ ತಮಿಳರ ಶಿವಸ್ವಾಮಿ ಎಂಬವರು ದಿನಾಂಕ 21-3-2019 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಎ.ಬಿ. ಜಯರಾಂ ಎಂಬವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಟೋ ರಿಕ್ಷಾ ಮತ್ತು ವ್ಯಾನ್ ನಡುವೆ ಅಪಘಾತ:

ದಿನಾಂಕ 22-3-2019 ರಂದು ಮಡಿಕೇರಿ ನಗರದ ಮೈಸೂರು ರಸ್ತೆಯ ಕಾಮಧೇನು  ಪೆಟ್ರೋಲ್ ಬಂಕ್ ಬಳಿ ಆಟೋ ರಿಕ್ಷಾ ಮತ್ತು ಮಾರುತಿ ವ್ಯಾನ್ ನಡುವೆ ಅಪಘಾತ ಸಂಭವಿಸಿ  ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಜಮೀಲ ಹಾಗು ಜಬೀವುಲ್ಲಾ ಎಂಬವರು ಗಾಯಗೊಂಡಿದ್ದು ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 2 3 350