Crime New

 

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ: 

 

ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ತಾಕೇರಿ ಗ್ರಾಮದಲ್ಲಿ ನಡೆದಿದೆ.  ತಾಕೇರಿ ಗ್ರಾಮದ ನಿವಾಸಿ  ಸುಬ್ಬಯ್ಯ (57) ಎಂಬವರು ಹಾಗು ಅವರ ಪತ್ನಿಯವರು ದಿನಾಂಕ 15-3-2018 ರಂದು  ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗಿದೆ ಸುಬ್ಬಯ್ಯನವರು ದಿನಾಂಕ 25-3-2018 ರಂದು ಸಾವನಪ್ಪಿದ್ದು, ಈ ಸಂಬಂಧ ಮೃತರ ಮಗ ಸ್ವಾಗತ್ ನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಅಕ್ರಮ ಮದ್ಯ ಮಾರಾಟ:

 

ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಗದ್ದೆಹಳ್ಳ ಗ್ರಾಮದ ನಿವಾಸಿ ಸುನೀಲ್ ಹಾಗು ಚಂದ್ರಶೇಕರ್ ಎಂಬವರು ಗದ್ದೆಹಳ್ಳದಲ್ಲಿ ಹೋಟೇಲ್ ನಡೆಸಿಕೊಂಡಿದ್ದು ಸದರಿ ಹೋಟೇಲಿನಲ್ಲಿ ಹೋಟೇಲ್ ಗ್ರಾಹಕರಿಗೆ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಸುಂಟಿಕೊಪ್ಪ ಪೊಲೀಸ್ ಠಾಣಾ ಪಿ.ಎಸ್.ಐ. ಶ್ರೀ ಎಸ್.ಎನ್. ಜಯರಾಮ್ ರವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

 

ಅಕ್ರಮ ಮರಳು ಸಾಗಾಟ:

 

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಪಿ.ಎಸ್.ಐ. ಶ್ರೀ ವಿ.ಚೇತನ್ ರವರು ದಿನಾಂಕ 25-3-2018 ರಂದು ರಾತ್ರಿ ಗಸ್ತು ಕರ್ವವ್ಯದಲ್ಲಿದ್ದಾಗ ಬಂದ ಮಾಹಿತಿ ಆದಾರದ ಮೇರೆಗೆ ಕೋಡಂಬೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಕೆಎ-12 ಬಿ-3611 ಪಿಕ್ಅಪ್ ವಾಹನದಲ್ಲಿ ಅಕ್ರಮವಾಗಿ ಮರಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

 

 

 

 

 

1 102 103 104 105 106 107