Crime News

ಅಪಘಾತ ಪ್ರಕರಣ

 ಮಡಿಕೇರಿ ತಾಲೂಕಿನ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ಮೋಟಾರು ಸೈಕಲ್ ಮತ್ತು ಮಾರುತಿ ಕಾರುಗಳು ಪರಸ್ಪರ ಡಿಕ್ಕಿಯಾಗಿ ಮಹದೇವಪೇಟೆಯ ನಿವಾಸಿಯಾದ ನಿಶಾಂತ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ಕಾರು ಚಾಲಕ ಸಂತೋಷ್ ಮತ್ತು ಮೋಟಾರು ಸೈಕಲ್ ಸವಾರ ನಿಶಾಂತ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಎರಡೂ ವಾಹನಗಳು ಜಖಂಗೊಂಡ ಘಟನೆ ಸುಂಟಿಕೊಪ್ಪದಲ್ಲಿ ವರದಿಯಾಗಿದೆ. ದಿನಾಂಕ 26-07-2018 ರಂದು ಅರುಣ ಎಂಬುವವರು ಕ್ಯಾಂಟರ್ ಲಾರಿಯಲ್ಲಿ ಬೆಂಗಳೂರಿನಿಂದ ಕುರ್ ಕುರೇ ತುಂಬಿಸಿಕೊಂಡು ಸುಂಟಿಕೊಪ್ಪದ ಗದ್ದೆಹಳ್ಳದ ಗಣೇಶ ಏಜೆನ್ಸಿ ಅಂಗಡಿಯ ಮುಂದೆ ರಾತ್ರಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿರುವಾಗ ಸಮಯ ರಾತ್ರಿ 1-00 ಗಂಟೆಗೆ ಕುಶಾಲನಗರ ಕಡೆಯಿಂದ  ಬಂದ ಕಾರನ್ನು ಅದರ ಚಾಲಕ ಹರೀಶ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ನಿಲ್ಲಿಸಿದ್ದ ಲಾರಿಗೆ ಹಿಂದುಗಡೆಯಿಂದ ಡಿಕ್ಕಿಪಡಿಸಿದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ಈ ಬಗ್ಗೆ ಲಾರಿಯ ಚಾಲಕ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಚಿನ್ನಾಭರಣ ಕಳವು

ದಿನಾಂಕ 25-07-2018 ರಂದು ಕುಶಾಲನಗರದ ಬಸವೇಶ್ವರ ಬಡಾವಣೆಯ ನಿವಾಸಿ ಶ್ರೀಮತಿ ಸವಿತ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಕೂಡುಮಂಗಳೂರಿನಲ್ಲಿರುವ ಮಗಳ ಮನೆಗೆ ಹೋಗಿದ್ದವರು ವಾಪಾಸ್ಸು ದಿನಾಂಕ 27-07-2018 ರಂದು ಮನೆಗೆ ಬಂದು ನೋಡುವಾಗ ಮನೆಯ ಮುಂದಿನ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಮುರಿದು ಒಳನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಸವಿತರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಾಹನ ಅಪಘಾತ

ದಿನಾಂಕ 27-07-2018 ರಂದು ಮಂಗಳೂರಿನ ಕಾರ್ಗೋಲಿನ್ಸ್ ಕಂಪೆನಿಗೆ ಸೇರಿದ ಕಂಟೈನರ್ ಲಾರಿಯಲ್ಲಿ ಹಾಸನದಿಂದ ಹತ್ತಿಯನ್ನು ತುಂಬಿಸಿಕೊಂಡು ಚಾಲಕ ಜೋಸೆಫ್ ರವರು ಮಂಗಳೂರಿಗೆ ಹೋಗುತ್ತಿರುವಾಗ ಜೋಡುಪಾಲ ಎಂಬಲ್ಲಿಗೆ ತಲುಪುವಾಗ  ಎದುರುಗಡೆಯಿಂದ ಬಂದ ಖಾಸಗಿ ಬಸ್ಸನ್ನು ಅದರ ಚಾಲಕ ಗಣೇಶ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ಬಸ್ಸಿನ ಚಾಲಕನಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

1 130 131 132 133 134 250