Crime News

ಕರಿ ಮೆಣಸು ಕಳವು

        ಮಡಿಕೇರಿ ತಾಲೋಕಿನ ಮೂರ್ನಾಡು ನಗರದ ನಿವಾಸಿ ನವೀನ ಎಂಬುವವರಿಗೆ ಮುತ್ತಾರ್ಮುಡಿ ಎಂಬಲ್ಲಿ ತೋಟ ಇದ್ದು, ದಿನಾಂಕ 16-03-2019 ರಂದು ಅಂದಾಜು 100 ಕೆ ಜಿ ಯಷ್ಟು ಕುಯಿದ ಕರಿಮೆಣಸನ್ನು ತೋಟದಲ್ಲಿರುವ ಲೈನ್ ಮನೆಯಲ್ಲಿ ಇಟ್ಟಿದ್ದು, ದಿನಾಂಕ 20-03-2019 ರಂದು ಬೆಳಿಗ್ಗೆ ಹೋಗಿ ನೋಡುವಾಗ ಲೈನ್ ಮನೆಯ ಬೀಗವನ್ನು ಯಾರೋ ಒಡೆದು ಒಳನುಗ್ಗಿ ಕರಿಮೆಣಸನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜಾಗದ ವಿಚಾರದಲ್ಲಿ ಹಲ್ಲೆ

           ಕಾಲೂರು ಗ್ರಾಮದ ನಿವಾಸಿ ಪೊನ್ನಪ್ಪ ಎಂಬುವವರು ಕೆ ಬಾಡಗ ಗ್ರಾಮದಲ್ಲಿ 10 ಸೆಂಟ್ ಜಾಗವನ್ನು ಹೊಂದಿದ್ದು, ಪಕ್ಕದ ಜಾಗದವರಾದ ಅರವಿಂದ ಮತ್ತು ಪೊನ್ನಪ್ಪನವರಿಗೂ ಜಾಗದ ವಿಚಾರದಲ್ಲಿ ತಕರಾರು ಇದ್ದು ಇದೇ ವಿಚಾರದಲ್ಲಿ ದಿನಾಂಕ 21-03-2019 ರಂದು ಉಭಯ ಕಡೆಯವರು ಹಲ್ಲೆ ಮಾಡಿಕೊಂಡಿದ್ದು ಉಭಯ ಕಡೆಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

          ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೋಕಿನ ಆರ್ಜಿ ಗ್ರಾಮದ ಇಂದಿರಾ ನಗರದಲ್ಲಿ ವರದಿಯಾಗಿದೆ. ಇಂದಿರಾ ನಗರದ ನಿವಾಸಿಯಾದ ಗಿರಿಯಪ್ಪ ಎಂಬುವವರು ದಿನಾಂಕ 20-03-2019 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಪತ್ನಿ ಜಯಮ್ಮನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ

            ದಿನಾಂಕ 21-03-2019 ರಂದು ಸೋಮವಾರಪೇಟೆ ಠಾಣೆಯ ಪಿಎಸ್ಐ ರವರಿಗೆ ತೊಳೂರು ಶೆಟ್ಟಳ್ಳಿ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಲಿಂಗರಾಜು ಎಂಬುವವರನ್ನು ವಶಕ್ಕೆ ಪಡೆದುಕೊಂಡು ಅವರ ಮನೆಯಿಂದ 14 ಲೀಟರ್ ಕಳ್ಳಭಟ್ಟಿ ಸರಾಯಿ, 24 ಲೀಟರ್ ಪುಳಿಗಂಜಿ ಮತ್ತು 3 ಬಾಟಲ್ ಕೋಡೆಸ್ ರಮ್ ನ್ನು ವಶಪಡಿಸಿಕೊಂಡು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣ

            ದಿನಾಂಕ 21-03-2019 ರಂದು ಸೋಮವಾರಪೇಟೆ ತಾಲೋಕಿನ ದೊಡ್ಡಬ್ಬೂರು ಗ್ರಾಮದ ನಿವಾಸಿಯಾದ ಪ್ರದೀಪ, ಗಜ ಮತ್ತು ಶಶಿ ಹಾಗೂ ಅದೇ ಗ್ರಾಮದವರಾದ ಸುಬ್ಬಯ್ಯ ಮತ್ತು ಪೆಮ್ಮಯ್ಯನವರು ಹಳೇ ದ್ವೇಷದಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಉಭಯ ಕಡೆಯವರು ನೀಡಿದ ದೂರಿನ ಮೇರೆಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಲಾಟರಿ ಮಾರಾಟ ಪತ್ತೆ

            ದಿನಾಂಕ 21-03-2019 ರಂದು ಕುಶಾಲನಗರದ ಮಾರುಕಟ್ಟೆ ಹತ್ತಿರ ಸಹರ ಹೊಟೆಲ್ ಪಕ್ಕದಲ್ಲಿ ಕೇರಳ ರಾಜ್ಯದ ಲಾಟರಿ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ತೆರಳಿ ಲಾಟರಿ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿದ್ದ ಕೂಡುಮಂಗಳೂರುವಿನ ನಿವಾಸಿ ವೇಣುಗೋಪಾಲರವರನ್ನು ವಶಕ್ಕೆ ತೆಗೆದುಕೊಂಡು ಆತನಿಂದ ಕೇರಳ ರಾಜ್ಯದ ಲಾಟರಿ ಟಿಕೆಟ್ ಗಳನ್ನು ವಶಪಡಿಸಿಕೊಂಡು ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಜೂಜಾಟ ಪ್ರಕರಣ

            ದಿನಾಂಕ 21-03-2019 ರಂದು ಗುಡ್ಡೆಹೊಸೂರುವಿನ ಪೆಟ್ರೋಲ್ ಬಂಕ್ ಹತ್ತಿರ ಕಾವೇರಿ ಹೊಳೆ ದಡದಲ್ಲಿ ಇಸ್ಪೀಟು ಎಲೆಗಳಿಂದ ಜೂಜಾಟ ಆಡುತ್ತಿರುವುದಾಗಿ ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್ಐ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿದಾಗ ಆಟವಾಡುತ್ತಿದ್ದ  ಅನಿ, ಸತೀಶ್, ರಹಮತುಲ್ಲಾ, ರವಿ, ಆಶಿಕ್, ಹರ್ಷ, ಕಿರಣ್ ಮತ್ತು ರಘುರವರು ಓಡಿ ಹೋಗಿದ್ದು, ಗಣೇಶ ಎಂಬುವವರನ್ನು ವಶಕ್ಕೆ ಪಡೆದುಕೊಂಡು ಆಟಕ್ಕೆ ಬಳಸಿದ 1820 ರೂ ನಗದು, ಒಂದು ಆಟೋ, ಒಂದು ಕಾರು ಹಾಗೂ ಒಂದು ಮೋಟಾರು ಸೈಕಲನ್ನ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಗಾಂಜಾ ಮಾರಾಟ, ವ್ಯಕ್ತಿಯ ಬಂಧನ

           ದಿನಾಂಕ 21-03-2019 ರಂದು ಕೂಡ್ಲೂರು ಗ್ರಾಮದ ಯೂನಿಕ್ ಅಕಾಡಮಿ ಶಾಲೆಯ ಹತ್ತಿರ ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್ಐ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದ ಪಿರಿಯಾಪಟ್ಟಣದ ನಿವಾಸಿಯಾದ ತಾಸಿನ್ ಬೇಗ್ ಎಂಬುವವರನ್ನು ವಶಕ್ಕೆ ಪಡೆದುಕೊಂಡು ಆತನಿಂದ 1 ಕೆ ಜಿ 184 ಗ್ರಾಂ ನಷ್ಟು ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

1 2 3 4 350