Crime News

ರಸ್ತೆ ಅಪಘಾತ
ದಿನಾಂಕ 29/05/2020ರಂದು ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರದ ನಿವಾಸಿ ಕಿಶನ್ ಎಂಬವರು ಅವರ ಆಟೋ ರಿಕ್ಷಾವನ್ನು ಮಡಿಕೇರಿ ನಗರದ ಆಜಾದ್ ನಗರದ ಬಳಿ ಉಕ್ಕುಡ ರಸ್ತೆಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ರಿಕ್ಷಾವು ಕಿಶನ್‌ರವರ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿಕೊಂಡ ಪರಿಣಾಮ ಕಿಶನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ; ಸಾವು
ದಿನಾಂಕ 30/05/2020ರಂದು ಸುಂಟಿಕೊಪ್ಪ ಬಳಿಯ ಕೆದಕಲ್ ಗ್ರಾಮದ ಬಳಿ ಮಡಿಕೇರಿ ಕಡೆಯಿಂದ ಕೆಎ-19-ಎಎ-4870ರ ಕಂಟೈನರ್ ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಎದುರಿನಿಂದ ಮೈಸೂರಿನ ಅನಿಲ್‌ ಕುಮಾರ್ ಎಂಬವರು ಚಾಲಿಸಿಕೊಂಡು ಬರುತ್ತಿದ್ದ ಕೆಎ-09-ಹೆಚ್‌ಯು-8148ರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‌ ಸವಾರ ಅನಿಲ್‌ ಕುಮಾರ್‌ರವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ
ದಿನಾಂಕ 29/05/2020ರಂದು ಶನಿವಾರಸಂತೆ ಬಳಿಯ ನೀರುಗುಂದ ಗ್ರಾಮದ ನಿವಾಸಿ ಎನ್‌.ಈ.ತಿಮ್ಮಯ್ಯ ಎಂಬವರು ಮನೆಯಲ್ಲಿರುವಾಗ ಕೇಶವೇಗೌಡ ಮತ್ತು ತೇಜ ಕುಮಾರ್ ಎಂಬವರು ಕಾರಿನಲ್ಲಿ ಬಂದು ಎನ್‌.ಈ.ತಿಮ್ಮಯ್ಯರವರ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ವೈಯುಕ್ತಿಕ ವಿಚಾರಕ್ಕೆ ಜಗಳವಾಡಿ ಯಾವುದೋ ದಾಖಲಾತಿಗಳನ್ನು ಕೇಳಿ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿ ಕೈಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸುಳ್ಳು ದೂರು; ಪ್ರಕರಣ ದಾಖಲು
ಕುಶಾಲನಗರದ ನೆಹರೂ ಬಡಾವಣೆಯ ನಿವಾಸಿ ಸರ್ಕಾರಿ ನೌಕರರಾಗಿರುವ ಹೆಚ್‌.ಜೆ.ದೊಡ್ಡಯ್ಯ ಎಂಬವರು ಈ ಹಿಂದೆ ಪ್ರಕರಣವೊಂದನ್ನು ದಾಖಲಿಸಿದ್ದು ಪೊಲೀಸ್ ತನಿಖೆಯ ವೇಳೆಯಲ್ಲಿ ಹೆಚ್‌.ಜೆ.ದೊಡ್ಡಯ್ಯನವರು ಸುಳ್ಳು ದೂರು ನೀಡಿರುವುದಾಗಿ ಸಾಬೀತಾಗಿದ್ದು ಸುಳ್ಳು ದೂರು ನೀಡಿ ಸಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ಅವರ ವಿರುದ್ದ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

1 2 3 4 5 766