Crime News

ಹಣದ ವಿಚಾರ, ಕೊಲೆ ಬೆದರಿಕೆ:

ಬೆಂಗಳೂರು ನಗರದ ವಿದ್ಯಾರಣ್ಯಪುರಂ ನಿವಾಸಿ ಶ್ರೀಮತಿ ಅನಿತ ಎಂಬವರು 23-2-2018 ರಂದು ಸೋಮವಾರಪೇಟೆ ತಾಲೋಕು ತಲ್ತಾರಶೆಟ್ಟಳ್ಳಿ ಗ್ರಾಮದ ನಿವಾಸಿ ಬಿ.ಪಿ. ಕುಶಾಲಪ್ಪ ಎಂಬವರಿಗೆ 7 ಲಕ್ಷ ಹಣವನ್ನು ಸಾಲದ ರೂಪದಲ್ಲಿ ನೀಡಿದ್ದು, ಸದರಿ ಹಣವನ್ನು ಮರಳಿಸುವಂತೆ ಕೇಳಿದ ವಿಚಾರದಲ್ಲಿ ಕುಶಾಲಪ್ಪನವರು ಕೋವಿಯನ್ನು ತೋರಿಸಿ ಕೊಲೆ ಮಾಡುವುದಾಗಿ ಬೆದರಿಸಿರುತ್ತಾರೆಂದು ಹಾಗೂ ಅವರೊಂದಿಗಿದ್ದ ಕನ್ನಿಮಣಿ ಮತ್ತು ತೇಜಸ್ವಿನಿ ಎಂಬವರು ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ:

ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಗುಡ್ಡಹೊಸುರು ಗ್ರಾಮದ ಎಂ.ಆರ್. ಗಣೇಶ ಎಂಬವರು ದಿನಾಂಕ 20-5-2018 ರಂದು ತಮ್ಮ ಪತ್ನಿಯೊಂದಿಗೆ ಮನೆಯಲ್ಲಿರುವಾಗ್ಗೆ ಆರೋಪಿಗಳಾದ ರಾಜೇಶ, ಹೇಮಾವತಿ ಮತ್ತು ಶೇಖರ ಎಂಬವರು ಅಲ್ಲಿಗೆ ಬಂದು ಹೊಲದಲ್ಲಿ ದನಗಳನ್ನು ಮೇಯಿಸಿದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ:

ಪೊನ್ನಂಪೇಟೆ ಠಾಣಾ ಸರಹದ್ದಿನ ನಲ್ಲೂರು ಗ್ರಾಮದ ನಿವಾಸಿ ದಯಾನಂದ ಎಂಬವರು ದಿನಾಂಕ 26-5-2018 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಶ್ರೀಮತಿ ಹೆಚ್.ಪಿ. ಸುಜಾತ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Crime News

ಕೊಡಲಿಯಿಂದ ಗಾಯವಾಗಿ ವ್ಯಕ್ತಿಯ ಮೃತ

ದಿನಾಂಕ 25-05-2018 ರಂದು ಹೊದ್ದೂರು ಗ್ರಾಮದ ವಾಟೆಕಾಡು ಪೈಸಾರಿಯ ನಿವಾಸಿಯಾದ ವಸಂತಿಯವರ ಮಗ ಸುರೇಶನು ಸೌದೆಯನ್ನು ಒಡೆಯುತ್ತಿರುವಾಗ ಕೊಡಲಿ ಕಾಲಿಗೆ ತಾಗಿ ತೀವ್ರತರಹದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮಡಿಕೇರಿಗೆ ಕರೆದುಕೊಂಡು ಬರುವಾಗ ಮೃತಪಟ್ಟಿದ್ದು, ಈ ಬಗ್ಗೆ ವಸಂತಿಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ  ಅಸಹಜಸಾವು ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ವರದಿಯಾಗಿದೆ. ಬಿಳಿಗೇರಿ ಗ್ರಾಮದ ನಿವಾಸಿಯಾದ ಜೇನುಕುರುಬರ ರಾಜು ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದವರು ದಿನಾಂಕ 25-05-2018 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಪತ್ನಿ ಲಲಿತಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 25-05-2018 ರಂದು ಮಡಿಕೇರಿಯ ಗಣಪತಿ ಬೀದಿಯ ನಿವಾಸಿಯಾದ ಉಮ್ಮರ್ ಉಲ್ ಫಾರೂಕ್ ಎಂಬುವವರು ಕಾರಿನಲ್ಲಿ ಪಾರಾಣೆಗೆ ಹೋಗಿದ್ದವರು ವಾಪಾಸ್ಸು ಬರುತ್ತಿರುವಾಗ ಕಗ್ಗೋಡ್ಲು ಎಂಬಲ್ಲಿ ಎದುರಿನಿಂದ ಬಂದ ಕಾರನ್ನು ಚಾಲಕ ಅಜಾಗರೂಕತೆಯಿಂಧ ಚಾಲನೆ ಮಾಡಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರುಗಳು ಜಖಂಗೊಂಡು ಅಪಘಾತಪಡಿಸಿದ ಕಾರಿನಲ್ಲಿದ್ದವರಿಗೆ ಗಾಯವಾಗಿದ್ದು ಈ ಬಗ್ಗೆ ಉಮ್ಮರ್ ಉಲ್ ಫಾರೂಕ್ ರವರು ನೀಡಿದ ಪುಕಾರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಬಾವಲಿ ಗ್ರಾಮದಲ್ಲಿ ವರದಿಯಾಗಿದೆ. ಬಾವಲಿ ಗ್ರಾಮದ ಬೆಳ್ಯಪ್ಪ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದವರು ದಿನಾಂಕ 24-05-2018 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಗ ಬೋಪಣ್ಣನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾಳುಮೆಣಸು ಬಳ್ಳಿ ಕಡಿದು ನಷ್ಟ

ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ನಿವಾಸಿಯಾದ ಯೋಗೇಂದ್ರ ಎಂಬುವವರ ತೋಟದಲ್ಲಿರುವ 100 ರಿಂದ 150 ಕಾಳು ಮೆಣಸಿನ ಬಳ್ಳಿಗಳನ್ನು ಅದೇ ಗ್ರಾಮದವರಾದ ದರ್ಶನ್ ಎಂಬುವವರು ಕಡಿದು ನಷ್ಟಪಡಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ನಾಪೋಕ್ಲುವಿನ ಚೋನಕೆರೆ ಎಂಬಲ್ಲಿ ವರದಿಯಾಗಿದೆ. ಚೋನಕೆರೆಯ ನಿವಾಸಿಯಾದ ಉತ್ತಪ್ಪನವರು ಅನಾರೋಗ್ಯದಿಂದ ಬಳಲುತ್ತಿದ್ದವರು ದಿನಾಂಕ 25-05-2018 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಬಿದ್ದಪ್ಪನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೆಬ್ಬೆಟ್ಟಗೇರಿ ಗ್ರಾಮದ ನಿವಾಸಿ ಶ್ರೀಮತಿ ಲಲಿತ ಎಂಬವರ ಪತಿ ಪೂವಪ್ಪ ಎಂಬವರು ಮೂರ್ಛೆ ರೋಗದಿಂದ ಬಳಲುತ್ತಿದ್ದು ಇದೇ ವಿಚಾರವಾಗಿ ಮನನೊಂದು ದಿನಾಂಕ 23-5-2018 ರಂದು ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದರಿಯವರನ್ನು ಚಿಕಿತ್ಸೆಗಾಗಿ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 24-5-2018 ರಂದು ಸದರಿಯವರು ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಬೈಕ್ ಡಿಕ್ಕಿ:

ಮಡಿಕೇರಿ ತಾಲೋಕು ಮೇಕೇರಿ ಗ್ರಾಮದ ನಿವಾಸಿ ಲೋಕೇಶ್ ಎಂಬವರಲ್ಲಿ ಕೆಲಸ ಮಾಡಿಕೊಂಡಿರುವ ರಾಮೇಗೌಡ ಎಂಬವರು ದಿನಾಂಕ      23-5-2018 ರಂದು ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಮೋಟಾರ್ ಸೈಕಲ್ ಸವಾರ ವಿನೋದ್ ಎಂಬವರು ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ದುಡುಕಿನಿಂದ ಚಾಲನೆ ಮಾಡಿಕೊಂಡು ಬಂದು ರಾಮೇಗೌಡರವರಿಗೆ ಡಿಕ್ಕಿಪಡಿಸಿದ ಪರಿಣಾಮ ರಾಮೇಗೌಡ ರವರು ಗಾಯಗೊಂಡು ಸವಾರ ವಿನೋದ್ ರವರಿಗೂ ಗಾಯಗಳಾಗಿದ್ದು, ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಕ್ಷಾ ಅಪಘಾತ ಒಬ್ಬನ ಸಾವು:

ವಿರಾಜಪೇಟೆ ತಾಲೋಕು ಬಾಳೆಲೆ ಎಪಿಸಿಎಂಎಸ್ ನಲ್ಲಿ ಕೆಲಸ ಮಾಡಿಕೊಂಡಿರುವ ಹೆಚ್.ಎಂ. ಚಂದ್ರ ಎಂಬವರು ದಿನಾಂಕ 23-5-2018 ರಂದು ತನ್ನ ಸ್ನೇಹಿತರಾದ ರವೀಂದ್ರ, ಹರೀಶ, ರವಿ, ರಾಜು ರವರೊಂದಿಗೆ ಹರೀಶನ ಬಾಪ್ತು ಆಟೋ ರಿಕ್ಷಾದಲ್ಲಿ ಪರಿಯಾಪಟ್ಟಣಕ್ಕೆ ಹೋಗಿ ಸಿನಿಮಾ ನೋಡಿ ವಾಪಾಸು ಬಾಲೆಳೆ ಗ್ರಾಮಕ್ಕೆ ಬರುತ್ತಿರುವಾಗ್ಗೆ ಹರೀಶ ರಿಕ್ಷಾವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ರಿಕ್ಷಾ ಮಗುಚಿ ರಸ್ತೆಯ ಮೇಲೆ ಬಿದ್ದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೆ ಗಾಯಗಳಾಗಿ ಅವರ ಪೈಕಿ ರಾಜುರವರು ಮೃತಪಟ್ಟಿದ್ದು ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:

ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಇಗ್ಗೋಡ್ಲು ಗ್ರಾಮದ ನಿವಾಸಿ ವೆಳ್ಳಂಪಾಡಿ ಎಂಬವರು ದಿನಾಂಕ 24-5-2018 ರಂದು ಮನೆಯಲ್ಲಿ ಯಾರು ಇಲ್ಲದೆ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime News

ಹಲ್ಲೆ ಪ್ರಕರಣ

ದಿನಾಂಕ 22-05-2018 ರಂದು ಮಡಿಕೇರಿ ತಾಲೂಕಿನ ತಣ್ಣಿಮಾನಿ ಗ್ರಾಮದ ನಿವಾಸಿಯಾದ ಮೊಣ್ಣಿಯವರು ಮನೆಯಲ್ಲಿರುವಾಗ ಮಗ ರಾಜುರರವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಕತ್ತಿಯಿಂದ ಕಾಲಿಗೆ ಕಡಿದು ಗಾಯಪಡಿಸಿದ್ದು ಈ ಬಗ್ಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ಶವ ಪತ್ತೆ

ದಿನಾಂಕ 23-05-2018 ರಂದು ಮಡಿಕೇರಿ ತಾಲೂಕಿನ ಯವಕಪಾಡಿ ಗ್ರಾಮದಲ್ಲಿ ಅಂದಾಜು 30-35 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸದರಿ ಮೃತದೇಹದ ಮೇಲೆ ನೀಲಿ ಜೀನ್ಸ್ ಪ್ಯಾಂಟ್, ತುಂಬುತೋಳಿನ ಹಸಿರು ಕಪ್ಪು ಬಿಳಿ ಚೌಕಳಿಗಳಿರುವ ಶರ್ಟ್ ಮತ್ತು ಬೆಲ್ಟ್ ಇದ್ದು ಈ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅನುಮಾನಾಸ್ಪದ ವ್ಯಕ್ತಿಗಳ ಬಂಧನ

ದಿನಾಂಕ 22-05-2018 ರಂದು ರಾತ್ರಿ ಕುಶಾಲನಗರ ಪಟ್ಟಣ ಠಾಣೆಯ ಸಿಬ್ಬಂದಿಯವರಾದ ಸುದೀಶ್ ಕುಮಾರ್ ಮತ್ತು ಮುಸ್ತಾಫರವರು ಗಸ್ತು ಕರ್ತವ್ಯದಲ್ಲಿರುವಾಗ ಸಮಯ 12-30 ಎ.ಎಂ ಗೆ 4 ನೇ ಬ್ಲಾಕ್ ನ ಸರ್ಕಾರಿ ಜೂನಿಯರ್ ಕಾಲೇಜು ಬಳಿ ವಿರಾಜಪೇಟೆಯ ನಿವಾಸಿಗಳಾದ ನಜೀರ್ ಹಾಗೂ ನೌಶಾದ್ ಎಂಬುವವರು ನಿಂತುಕೊಂಡಿದ್ದು ವಿಚಾರಿಸಲಾಗಿ ಸಮರ್ಪಕ ಉತ್ತರ ನೀಡದೇ ಇದ್ದು ಯಾವುದೋ ಕೃತ್ಯ ಎಸಗಲು ಹೊಂಚು ಹಾಕುತ್ತಿರುವುದಾಗಿ ಅನುಮಾನ ಬಂದು ಠಾಣೆಗೆ ಹಾಜರುಪಡಿಸಿದ್ದು, ಈ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಬೈಕ್ ಡಿಕ್ಕಿ

ದಿನಾಂಕ 21-05-2018 ರಂದು ಕುಶಾಲನಗರದ ಕುಡ್ಲೂರು ಗ್ರಾಮದ ನಿವಾಸಿಯಾದ ಕುಸುಮರವರು ಮಗಳಾದ ಸ್ಮಿತಾಳೊಂದಿಗೆ ಅಂಗಡಿಯಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಕೂಡ್ಲೂರು ಸರ್ಕಾರಿ ಶಾಲೆಯ ಬಳಿ ತಲುಪುವಾಗ ವೀರಭೂಮಿ ಕಡೆಯಿಂದ ಕೂಡ್ಲೂರು ಗ್ರಾಮದ ನಿವಾಸಿಯಾದ ಶಿವಕುಮಾರ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಡೆದುಕೊಂಡು ಹೋಗುತ್ತಿದ್ದ ಸ್ಮಿತಾಳಿಗೆ ಡಿಕ್ಕಿಪಡಿಸಿದ್ದು ಈ ಬಗ್ಗೆ ಕುಸುಮರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆಯಿಂದ ಗಾಯಗೊಂಡಿದ್ದ ಮಹಿಳೆಯ ಸಾವು

ದಿನಾಂಕ 21-05-2018 ರಂದು ಸೋಮವಾರಪೇಟೆ ತಾಲೂಕಿನ ಮಸಗೋಡು ಗ್ರಾಮದ ನಿವಾಸಿಯಾದ ರಾಜುರವರು ತನ್ನ ಪತ್ನಿ ಉಮಾವತಿಯವರೊಂದಿಗೆ ಮನೆಯಲ್ಲಿರುವಾಗ ಪಕ್ಕದ ಮನೆಯವರಾದ ಪುಷ್ಪರವರು ಹಳೇ ದ್ವೇಷದಿಂದ ಜಗಳ ತೆಗೆದು ಉಮಾವತಿಯರ ತಲೆಗೆ ಕತ್ತಿಯಿಂದ ಕಡಿದು ಗಾಯಪಡಿಸಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಾಯಾಳು ಉಮಾವತಿಯವರು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 23-05-2018 ರಂದು ಮೃತಪಟ್ಟಿರುತ್ತಾರೆ.

Crime News

ಅಕ್ರಮ ಮರಳು ಸಾಗಾಟ

ದಿನಾಂಕ 21-05-2018 ರಂದು ರಾತ್ರಿ ಸಮಯದಲ್ಲಿ ಬಿ ಬಾಡಗ ಗ್ರಾಮದಿಂದ ಅಕ್ರಮವಾಗಿ ಪಿಕ್ ಅಪ್ ಜೀಪಿನಲ್ಲಿ ಮರಳು ಸಾಗಾಟ ಮಾಡುತ್ತಿದ್ದ ವಿನುಕುಮಾರ್ ಮತ್ತು ನಾಗರಾಜ ಎಂಬುವವರ ವಿರುದ್ದ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ  ಎಂ ಬಾಗಡ ಗ್ರಾಮದಲ್ಲಿ ವರದಿಯಾಗಿದೆ. ಎಂ ಬಾಡಗ ಗ್ರಾಮದ ನಿವಾಸಿಯಾದ ತಿಮ್ಮಯ್ಯ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 21-05-2018 ರ ರಾತ್ರಿ ಸಮಯದಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಗ ಭೀಮಯ್ಯನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 22-05-2018 ರಂದು ಸುಳ್ಯದ ನಿವಾಸಿಯಾದ ಕೃಷ್ಣಪ್ಪ ಎಂಬುವವರು ಮಡಿಕೇರಿಯಿಂದ ಸುಳ್ಯಕ್ಕೆ ಲಾರಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಕೊಯನಾಡು ಎಂಬಲ್ಲಿ ಹಿಂದಿನಿಂದ ಬಂದ ಕಾರನ್ನು ಅದರ ಚಾಲಕ ನಟರಾಜ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಲಾರಿಯ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡು ಕಾರಿನ ಚಾಲಕನಿಗೆ ಗಾಯವಾಗಿದ್ದು, ಈ ಬಗ್ಗೆ ಲಾರಿಯ ಚಾಲಕ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

ಮಡಿಕೇರಿ ನಗರದ ಸುದರ್ಶನ ಬಡಾವಣೆಯ ನಿವಾಸಿಯಾದ ಕಮಲರವರು ದಿನಾಂಕ 14-05-2018 ರಂದು ಚಿಕಿತ್ಸೆಯ ಬಗ್ಗೆ ಬೆಂಗಳೂರಿಗೆ ಹೋಗಿದ್ದವರು ದಿನಾಂಕ 22-05-2018 ರಂದು ವಾಪಾಸ್ಸು ಮನೆಗೆ ಬಂದು ನೋಡುವಾಗ ಮನೆಯ ಮುಂಭಾಗದ ಬಾಗಿಲಿನ ಮೂಲಕ ಯಾರೋ ಕಳ್ಳರು ಒಳಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ 2,40,000 ರೂ ಮೌಲ್ಯದ ಚಿನ್ನಾಭರಣ ಹಾಗೂ 2000 ರೂ ನಗದು ಹಣವನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ

ರಸ್ತೆ ಅಪಘಾತವಾಗಿ ವ್ಯಕ್ತಿಯೊಬ್ಬರು ಮರಣ ಹೊಂದಿರುವ ಘಟನೆ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 22-05-2018 ರಂದು ಶನಿವಾರಸಂತೆ ಗುಡುಗಳಲೆಯ ನಿವಾಸಿ ತೇಜ್ ಪ್ರಕಾಶ್ ಎಂಬುವವರು ಗರಗಂದೂರು ಗ್ರಾಮದಿಂದ ಓಮಿನಿ ವ್ಯಾನಿನಲ್ಲಿ ಮನೆಗೆ ಹೋಗುತ್ತಿರುವಾಗ ಸೋಮವಾರಪೇಟೆಯ ಕುವೆಂಪು ಶಾಲೆಯ ಬಳಿ ಅಪಘಾತವಾಗಿ ಗಾಯಗೊಂಡು ಮೃತಪಟ್ಟಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 21-05-2018 ರಂದು ಸೋಮವಾರಪೇಟೆ ತಾಲೂಕಿನ ಮಸಗೋಡು ಗ್ರಾಮದ ನಿವಾಸಿಯಾದ ರಾಜುರವರು ತನ್ನ ಪತ್ನಿ ಉಮಾವತಿಯವರೊಂದಿಗೆ ಮನೆಯಲ್ಲಿರುವಾಗ ಪಕ್ಕದ ಮನೆಯವರಾದ ಪುಷ್ಪರವರು ಹಳೇ ದ್ವೇಷದಿಂದ ಜಗಳ ತೆಗೆದು ಉಮಾವತಿಯರ ತಲೆಗೆ ಕತ್ತಿಯಿಂದ  ಕಡಿದು ಗಾಯಪಡಿಸಿದ್ದು, ಈ ಬಗ್ಗೆ ರಾಜುರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಾಹನ ಅಪಘಾತ

ದಿನಾಂಕ 22-05-2018 ರಂದು ಮಡಿಕೇರಿ ಡಿಫೋ ಗೆ ಸೇರಿದ ಕೆ.ಎಸ್.ಆರ್.ಟಿ ಸಿ ಬಸ್ಸು ಕುಶಾಲನಗರದಿಂದ ಮಡಿಕೇರಿಗೆ ಹೋಗುತ್ತಿರುವಾಗ ಗುಡ್ಡೆಹೊಸೂರುವಿನ ಉದ್ಗಂ ಶಾಲೆಯ ಹತ್ತಿರ ಎದುರಿನಿಂದ ಬಂದ ಬೈಕನ್ನು ಚಾಲಕ ನೇತಾಜ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಬಸ್ಸಿನ ಕೆಳಗೆ ನುಗ್ಗಿದ ಪರಿಣಾಮ ಬಸ್ಸಿಗೆ ಬೆಂಕಿ ಹತ್ತಿಕೊಂಡಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾಳು ಮೆಣಸು ಕಳವು

ದಿನಾಂಕ 22-05-2018 ರಂದು ವಿ. ಬಾಡಗ ಗ್ರಾಮದ ನಿವಾಸಿಯಾದ ನವೀನ್ ರವರು ತಮ್ಮ ಗೋಡಾನಿನಲ್ಲಿ ಶೇಖರಿಸಿಟ್ಟಿದ್ದ ಕಾಳುಮೆಣಸಿನ ಪೈಕಿ ಅಂದಾಜು 35 ಕೆ.ಜಿ ತೂಕದ ಕರಿಮೆಣಸನ್ನು ಯಾರೋ ಕಳವು ಮಾಡಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ಅಪಘಾತದಿಂದ ಗಾಯಗೊಂಡಿದ್ದ ಮಹಿಳೆಯ ಸಾವು

ದಿನಾಂಕ 19-05-2018 ರಂದು ಅರಕಲಗೋಡುವಿನ ಅಜ್ಜೂರು ಗ್ರಾಮದ ರಾಮೇಗೌಡ ಎಂಬುವವರು ಮೋಟಾರು ಸೈಕಲಿನ ಹಿಂಬದಿ ಸೀಟಿನಲ್ಲಿ ಪತ್ನಿ ಗಾಯತ್ರಿಯವರನ್ನು ಕೂರಿಸಿಕೊಂಡು ಕಣಿವೆ ಗ್ರಾಮದ ರಾಮಸ್ವಾಮಿ ದೇವಸ್ಥಾನದ ಹತ್ತಿರ ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಹಂಪನ್ನು ಹತ್ತಿಸಿದ ಪರಿಣಾಮ ಬೈಕ್ ಹಿಂಬದಿ ಕುಳಿತ್ತಿದ್ದ ಪತ್ನಿ ಗಾಯತ್ರಿಯವರು ಕೆಳಗೆ ಬಿದ್ದು ಗಾಯಗೊಂಡವರನ್ನು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 21-05-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 21-05-2018 ರಂದು ಶ್ರೀನಿವಾಸ ಮತ್ತು ಗಣೇಶ ಎಂಬುವವರು ಮೋಟಾರು ಸೈಕಲಿನಲ್ಲಿ ಕುಶಾಲನಗರದ ಕಡೆಗೆ ಹೋಗುತ್ತಿರುವಾಗ ಕೂಡ್ಲೂರು ಗ್ರಾಮದ ಕೈಗಾರಿಕಾ ಬಡಾವಣೆಯ ಹೊಟೆಲ್ ಮುಂದೆ ತಲುಪುವಾಗ ಎದುರುಗಡೆಯಿಂದ ವಿ.ಆರ್.ಎಲ್ ಲಾರಿಯನ್ನು ಅದರ ಚಾಲಕ ಉಮೇಶ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

ದಿನಾಂಕ 20-05-2018 ರಂದು ಕುಶಾಲನಗರ ಹೌಸಿಂಗ್ ಬೋರ್ಡ್ ನ ನಿವಾಸಿ ಮಂಜುನಾಥ ಎಂಬುವವರು ಕೆಲಸದ ನಿಮಿತ್ತ ತೊರೆನೂರು ಗ್ರಾಮಕ್ಕೆ ಹೋಗಿ ದಿನಾಂಕ 21-05-2018 ರಂದು ವಾಪಾಸ್ಸು ಬಂದು ನೋಡುವಾಗ ಮನೆಯ ಹಿಂಬದಿ ಬಾಗಿಲಿನ ಲಾಕನ್ನು ಯಾರೋ ಮುರಿದು ಒಳನುಗ್ಗಿ ಮನೆಯೊಳಗಡೆ ಇಟ್ಟಿದ್ದ 70,000 ರೂ ಬೆಲೆ ಬಾಳುವ ಚಿನ್ನಾಭರಣ ಹಾಗೂ 4,000 ರೂ ನಗದು ಹಣವನ್ನು ಕಳ್ಳತನ ಮಾಡಿರುವು ಕಂಡುಬಂದು ಮಂಜುನಾಥರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಸ್ತಿ ವಿಚಾರದಲ್ಲಿ ಜಗಳ

ದಿನಾಂಕ 21-05-2018 ರಂದು ಕುಶಾಲನಗರದ ಮುಳ್ಳುಸೋಗೆ ಗ್ರಾಮದ ನಿವಾಸಿಯಾದ ಸ್ವಾಮಿನಾಯ್ಕರವರು ಮನೆಯಲ್ಲಿರುವಾಗ ಹನುಮಮ್ಮ, ಹನುಮರಾಜು, ವನಿತಾ, ಜೀವನ್ ಹಾಗೂ ಕಿರಣರವರು ಮನೆಗೆ ಹೋಗಿ ಆಸ್ತಿ ವಿಚಾರದಲ್ಲಿ ಜಗಳ ತೆಗೆದು ಸ್ವಾಮಿನಾಯ್ಕ, ಜಯಮ್ಮ ಮತ್ತು ಅರುಣ ನಾಯ್ಕ ರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಅರುಣನಾಯ್ಕರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಚಿನ್ನಾಭರಣ ಕಳವು

ದಿನಾಂಕ 20-05-2018 ರಂದು ಮೂರ್ನಾಡುವಿನ ಸುಭಾಷ್ ನಗರದ ನಿವಾಸಿ ವೆಂಕಟರಮಣ ಭಟ್ ಎಂಬುವವರು ಮನೆಗೆ ಬೀಗ ಹಾಕಿ ಬಿ. ಸಿ ರೋಡುವಿಗೆ ಸಂಬಂಧಿಕರ ಸಮಾರಂಭಕ್ಕೆ ಹೋಗಿ ಸಾಯಂಕಾಲ ವಾಪಾಸ್ಸು ಬಂದು ನೋಡುವಾಗ ಮನೆಯೊಳಗೆ ಇಟ್ಟಿದ್ದ ಅಂದಾಜು  3,64,000 ರೂ ಬೆಲೆಬಾಳುವ ಚಿನ್ನಾಭರಣಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದು ವೆಂಕಟಪಮಣ ಭಟ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 19-05-2018 ರಂದು ಕೇರಳ ರಾಜ್ಯದ ಕಣ್ಣನೂರು ಜಿಲ್ಲೆಯ ನಿವಾಸಿಯಾದ ಮಹಮ್ಮದ್ ಎಂಬುವವರು ಕೇರಳ ರಾಜ್ಯದಿಂದ ವಿರಾಜಪೇಟೆ ನಗರದ ಕೆಲವು ಹೊಟೆಲ್ ಮತ್ತು ಬೇಕರಿಗಳಿಗೆ ತಿಂಡಿಗಳನ್ನು ಸರಬರಾಜು ಮಾಡುವ ಸಲುವಾಗಿ ಮಾರುತಿ ಓಮಿನಿ ವ್ಯಾನಲ್ಲಿ ವಿರಾಜಪೇಟೆಗೆ ಬರುತ್ತಿರುವಾಗ ಮಾಕುಟ್ಟದ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಓಮಿನಿ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನಿನಿ ಮುಂಭಾಗ ಜಖಂಗೊಂಡು ಚಾಲನೆ ಮಾಡುತ್ತಿದ್ದು ಮಹಮ್ಮದ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ದಿನಾಂಕ 21-05-2018 ರಂದು ಮಹಮ್ಮದ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ಗುಂಡು ಹಾರಿಸಿ ಬೆದರಿಕೆ

                      ದಿನಾಂಕ 19/05/2018ರಂದು ಪೊನ್ನಂಪೇಟೆ ಬಳಿಯ ಕುಂದ ನಿವಾಸಿ ಎಂ.ಎಂ.ಕೃಷ್ಣ ಎಂಬವರಿಗೆ ಸೇರಿದ ಈಚೂರು ಕುಂದ ಗ್ರಾಮದಲ್ಲಿರುವ ಹೋಂ ಸ್ಟೇಯಲ್ಲಿ ಪ್ರವಾಸಿಗರಿರುವಾಗ ಯಾರೋ ಅಪರಿಚಿತ ದುಷ್ಕರ್ಮಿಗಳು ಬಂದು ಹೋಂ ಸ್ಟೇಯ ಗೋಡೆಗೆ ಸುಮಾರು 6 ಸುತ್ತು ಗುಂಡು ಹಾರಿಸಿ ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Crime News

ಅಪಘಾತ ಪ್ರಕರಣ 
           ಸ್ಕೂಟರಿಗೆ ಜೀಪು ಡಿಕ್ಕಿಯಾಗಿ ಗಾಯಗೊಂಡ ಘಟನೆ ಮಡಿಕೇರಿ ತಾಲೂಕಿನ ಕರ್ಣಂಗೇರಿ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 18-05-2018 ರಂದು ಮೈಸೂರಿನ ಕುವೆಂಪು ನಗರದ ನಿವಾಸಿ ಶಿವಕುಮಾರರವರು ಮಡಿಕೇರಿಯಿಂದ ಕರ್ಣಂಗೇರಿಗೆ ಸ್ಕೂಟರಿನಲ್ಲಿ ಹೋಗುತ್ತಿರುವಾಗ ಮೂರನೇ ಮೈಲು ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಜಿಪ್ಸಿ ಜೀಪನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಶಿವಕುಮಾರರವರಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 
ಕಳವು ಪ್ರಕರಣ 
           ಮನೆಯ ಬೀಗ ಮುರಿದು ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ತಣ್ಣೀರಹಳ್ಳ ಗ್ರಾಮದಲ್ಲಿ ವರದಿಯಾಗಿದೆ. ತಣ್ಣೀರಹಳ್ಳ ಗ್ರಾಮದ ನಿವಾಸಿಯಾದ ಜಯಮ್ಮ ಎಂಬುವವರು ದಿನಾಂಕ 15-05-2018 ರಂದು ಮನೆಗೆ ಬೀಗ ಹಾಕಿ ಕುಶಾಲನಗರದಲ್ಲಿರುವ ಮಗಳ ಮನೆಗೆ ಹೋಗಿದ್ದು ಈ ಸಮಯದಲ್ಲಿ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ ಬೀರುವಿನಲ್ಲಿ ಇಟ್ಟಿದ್ದ ಅಂದಾಜು ಒಂದು ಲಕ್ಷ ಬೆಲೆಯ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಜಯಮ್ಮನವರು ದಿನಾಂಕ 19-05-2018 ರಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಪಾದಚಾರಿಗೆ ಕಾರು ಡಿಕ್ಕಿ 
              ಪಾದಚಾರಿಗೆ ಕಾರು ಡಿಕ್ಕಿಯಾಗಿ ಗಾಯಗೊಂಡ ಘಟನೆ ಕುಶಾಲನಗರದಲ್ಲಿ ವರದಿಯಾಗಿದೆ. ಕುಶಾಲನಗರದ ಕೂಡುಮಂಗಳೂರುವಿನ ನಿವಾಸಿಯಾದ ಶಿವಲಿಂಗರವರು ದಿನಾಂಕ 18-05-2018 ರಂದು ತನ್ನ ಸಂಸಾರದೊಂದಿಗೆ ಬೈಚನಹಳ್ಳಿಯಲ್ಲಿರುವ ಬಾವನ ಮನೆಗೆ ಹೋಗಿ ವಾಪಾಸ್ಸು ಸಮಯ ರಾತ್ರಿ 10-35 ಗಂಟೆಗೆ ಕುಶಾಲನಗರದ ಬಸ್ಸು ನಿಲ್ದಾಣದ ಕಡೆ ನಡೆದುಕೊಂಡು ಹೋಗುತ್ತಿರುವಾಗ ಅಥಿತಿ ಹೊಟೆಲ್ ಹತ್ತಿರ ತಲುಪುವಾಗ ಕಾರನ್ನು ಅದರ ಚಾಲಕ ಕುಶಾಲನಗರದ ನಿವಾಸಿಯಾದ ಮಂಜುನಾಥರವರು ಅಜಾಗರೂಕತೆಯಿಂದ ಚಾಲನೆ ಮಾಡಿ ನಡೆದುಕೊಂಡು ಹೋಗುತ್ತಿದ್ದ ಶಿವಲಿಂಗರವರ ಮಗಳು ಇಂಚರಳಿಗೆ ಡಿಕ್ಕಿ ಪಡಿಸಿದ ಪರಿಣಾಮ ಇಂಚರಳಿಗೆ ಗಾಯವಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ವ್ಯಕ್ತಿಯ ಆತ್ಮಹತ್ಯೆ 
            ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆಯ ಚಿಕ್ಕಪೇಟೆ ಎಂಬಲ್ಲಿ ವರದಿಯಾಗಿದೆ. ಬೇಟೋಳಿ ಗ್ರಾಮದ ನಿವಾಸಿಯಾದ ರಾಮಚಂದ್ರರವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 19-05-2018 ರಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಗ ಶ್ರೀನಿವಾಸರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಪಘಾತ ಪ್ರಕರಣ 
           ಸ್ಕೂಟರಿಗೆ ಜೀಪು ಡಿಕ್ಕಿಯಾಗಿ ಗಾಯಗೊಂಡ ಘಟನೆ ವಿರಾಜಪೇಟೆ ನಗರದಲ್ಲಿ ವರದಿಯಾಗಿದೆ. ದಿನಾಂಕ 17-05-2018 ರಂದು ವಿರಾಜಪೇಟೆ ತಾಲೂಕಿನ ಕೋಣಂಗಾಲ ಗ್ರಾಮದ ನಿವಾಸಿಯಾದ ನಾಚಪ್ಪನವರು ತನ್ನ ತಂದೆ ಲತೇಶ್ ರವರೊಂದಿಗೆ ಸ್ಕೂಟರಿನಲ್ಲಿ ವಿರಾಜಪೇಟೆಗೆ ಸಂಬಂದಿಕರ ಮದುವೆಗೆ ಹೋಗಿ ವಾಪಾಸ್ಸು ಮನೆಗೆ ಹೋಗುತ್ತಿದ್ದಾಗ ಚಿಕ್ಕಪೇಟೆ ಜಂಕ್ಷನ್ ತಲುಪುವಾಗ ಎದುರುಗಡೆಯಿಂದ ಬೊಲೆರೋ ಪಿಕ್ ಅಪ್ ಜೀಪನ್ನು ಅದರ ಚಾಲಕ ರಘು ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರಿನ ಹಿಂಭಾಗದಲ್ಲಿ ಕುಳಿತ್ತಿದ್ದ ಲತೇಶ್ ರವರ ತಲೆಗೆ ಗಾಯವಾಗಿದ್ದು, ಲತೇಶ್ ರವರನ್ನು ಚಿಕಿತ್ಸೆಯ ಬಗ್ಗೆ ಮೈಸೂರಿನ ನಾರಾಯಣ ಆಸ್ಪತ್ರೆಗೆ ದಾಖಲಿಸಿದ್ದು, ನಾಚಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ವ್ಯಕ್ತಿ ಆತ್ಮಹತ್ಯೆ

                    ದಿನಾಂಕ 18/05/2018ರಂದು ಪೊನ್ನಂಪೇಟೆ ಬಳಿಯ ಮತ್ತೂರು ನಿವಾಸಿ ಪಣಿ ಎರವರ ಮಣಿ ಎಂಬಾತನು ಯಾವುದೋ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸುಮಾರು ಆರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಣಿ ಅದೇ  ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ದೂರು ನೀಡಲಾಗಿದ್ದು ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ಶವ ಪತ್ತೆ

                     ದಿನಾಂಕ 18/05/2018ರಂದು ಪೊನ್ನಂಪೇಟೆ ನಗರದ ಕುಂದ ರಸ್ತೆಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಎದುರು ಒಂದು ಅಪರಿಚಿತ ಪುರುಷನ ಶವ ಪತ್ತೆಯಾಗಿರುವುದಾಗಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸುರೇಶ್‌ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

                  ದಿನಾಂಕ 18/05/2018ರಂದು ವಿರಾಜಪೇಟೆ ನಗರದ ಮಹಿಳಾ ಸಮಾಜದಲ್ಲಿ ನಡೆಯುತ್ತಿದ್ದ ಮದುವೆಯೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗನ್ ಎಂಬಾತನು ಹೆಚ್‌.ಎನ್‌.ರಮೇಶ್‌ ಎಂಬವರ ಮೇಲೆ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ

                ಮಡಿಕೇರಿ ಬಳಿಯ ಬೆಟ್ಟತ್ತೂರು ನಿವಾಸಿ ಸಿ.ಜೆ.ಗೋಪಾಲ ಎಂಬವರು ಮಡಿಕೇರಿಯಲ್ಲಿ ರಿಕ್ಷಾ ಓಡಿಸುತ್ತಿದ್ದು, ದಿನಾಂಕ 16/05/2018ರಂದು ಮಡಿಕೇರಿಗೆ ಬಂದಿದ್ದು ಮರಳಿ ಮನೆಗೆ ಬಂದಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ವ್ಯಕ್ತಿ ಆಕಸ್ಮಿಕ ಸಾವು

                 ದಿನಾಂಕ 18/05/2018ರಂದು ಮಡಿಕೇರಿ ಬಳಿಯ ಈರೆಳವಳಮುಡಿ ನಿವಾಸಿ ಶಾಮು ಎಂಬವರು ತೋಟದಲ್ಲಿ ಹಲಸಿನ ಮಿಡಿಯನ್ನು ಕುಯ್ಯಲು ಮರ ಹತ್ತಿದ್ದು ಮರದಿಂದ ಕಾಲು ಜಾರಿ ಕೆಳಗೆ ಬಿದ್ದು ತೀವ್ರ ಗಾಯಗಳಿಂದ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಪಾದಚಾರಿಗೆ ಕಾರು ಡಿಕ್ಕಿ

              ದಿನಾಂಕ 18/05/2018ರಂದು ಮಡಿಕೇರಿ ನಗರದ ರಾಣಿಪೇಟೆ ನಿವಾಸಿ ಇಸಾಕ್‌ ಎಂಬವರು ನಗರದ ಮಸೀದಿಯೊಂದರಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಹೋಗುತ್ತಿರುವಾಗ ಮೀನು ಮಾರುಕಟ್ಟೆಯ ಬಳಿ ಹಿಂದಿನಿಂದ ಕೆಎ-01-ಎಂ-9989ರ ಕಾರನ್ನು ಅದರ ಚಾಳಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಇಸಾಕ್‌ರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೊರಟು ಹೋಗಿದ್ದು ಇಸಾಕ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಹಲ್ಲೆ ಪ್ರಕರಣ

                  ದಿನಾಂಕ 18/05/2018ರಂದು ಸೋಮವಾರಪೇಟೆ ಬಳಿಯ ಅಡಿನಾಡೂರು ನಿವಾಸಿ ಸೋಮಶೇಖರ ಎಂಬವರು ಮನೆಯಲ್ಲಿರುವಾಗ ಅಲ್ಲಿಗೆ ಬಂದ ಅವರ ತಂದೆ ಬಸವ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಸೋಮಶೇಖರ್‌ರವರ ಮೇಲೆಲ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Crime News

ಲಾರಿಗಳು ಮುಖಾಮುಖಿ ಡಿಕ್ಕಿ

ದಿನಾಂಕ 17-05-2018 ರಂದು ನಂಜನಗೂಡಿನಿಂದ ಮಂಗಳೂರಿಗೆ ಹೋಗುತ್ತಿದ್ದ ಕಂಟೈನರ್ ಲಾರಿ ಬೋಯಿಕೇರಿ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬಂದ ಎಪಿ-20-ಟಿ.ಎ-2526 ರ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಎರಡೂ ಲಾರಿಗಳು ಜಖಂಗೊಂಡು ಕಂಟೈನರ್ ಲಾರಿಯ ಚಾಲಕನ ಕಾಲುಗಳು ಮುರಿದಿದ್ದು, ಮತ್ತೊಂದು ಲಾರಿಯ ಚಾಲಕನಿಗೆ ಗಾಯಗಳಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರದಲ್ಲಿ ವರದಿಯಾಗಿದೆ. ಮಲ್ಲಿಕಾರ್ಜುನ ನಗರದ ನಿವಾಸಿ ನಾಗರಾಜು ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 16-05-2018 ರಂದು ರಾತ್ರಿ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಗ ವಿಕ್ರಂರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೋಟಾರು ಸೈಕಲ್ ಗಳ ಡಿಕ್ಕಿ

ದಿನಾಂಕ 16-05-2018 ರಂದು ದೊಡ್ಡಹೊಸೂರು ಗ್ರಾಮದ ನಿವಾಸಿಯಾದ ಸಯ್ಯದ್ ಅಬ್ದುಲ್ ಎಂಬುವವರು ಮೋಟಾರು ಸೈಕಲಿನಲ್ಲಿ ಕುಶಾಲನಗರದಿಂದ ಕೊಪ್ಪ ಕಡೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಸಚಿನ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಸಯ್ಯದ್ ಅಬ್ದುಲ್ ರವರು ಚಾಲನೆ ಮಾಡುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ವ್ಯಕ್ತಿ ನಾಪತ್ತೆ

ಸೋಮವಾರಪೇಟೆ ತಾಲೂಕಿನ ಮದಲಾಪುರ ಗ್ರಾಮದ ನಿವಾಸಿಯಾದ 60 ವರ್ಷ ಪ್ರಾಯದ ಗಣೇಶ್ ಕುಮಾರ್ ಎಂಬುವವರು ದಿನಾಂಕ 16-05-2018 ರಂದು ಸಂಜೆ ಮನೆಯಿಂದ ಹೋದವರು ವಾಪಾಸ್ಸು ಬಾರದೇ ಕಾಣೆಯಾಗಿದ್ದು ಹುಡುಕಲಾಗಿ ಹಾರಂಗಿ ಹೊಳೆಯ ದಡದಲ್ಲಿ ಚಪ್ಪಲಿಗಳು ಇದ್ದು, ತಂದೆಯನ್ನು ಹುಡುಕಿಕೊಡಬೇಕಾಗಿ ಗಂಗಾಧರರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಏಣಿಗೆ ಕರೆಂಟ್ ವಯರ್ ತಾಗಿ ವ್ಯಕ್ತಿಯ ಸಾವು

ದಿನಾಂಕ 17-05-2018 ರಂದು ವಿರಾಜಪೇಟೆ ನಗರದ ಕಲ್ಲುಬಾಣಿಯ ನಿವಾಸಿ ರಾಜು ಎಂಬುವವರು ಬಿಟ್ಟಂಗಾಲ ಗ್ರಾಮದ ಪವಿತ್ರರವರ ತೋಟದಲ್ಲಿ ಮರ ಕಪಾತು ಮಾಡುವಾಗ ಕಬ್ಬಿಣದ ಏಣಿಯನ್ನು ತೋಟದ ಒಳಗಡೆ ತೆಗೆದುಕೊಂಡು ಹೋಗುವಾಗ ಏಣಿಯು ಮೇಲ್ಬಾಗದಲ್ಲಿ ಹಾದು ಹೋಗಿದ್ದ ಕರೆಂಟ್ ವಯರ್ ಗೆ ತಗುಲಿ ಮೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

1 2 3 6