Crime News

ಗುದ್ದಲಿಯಿಂದ ಹಲ್ಲೆ ಕೊಲೆಗೆ ಯತ್ನ:

ವಿರಾಜಪೇಟೆ ನಗರ ಠಾಣಾ ಸರಹದ್ದಿನ ಮೀನುಪೇಟೆ ನಿವಾಸಿ ಪಟ್ಟಡ ವಿಕ್ರಮ್ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಜೇನುಕುರುಬರ ರಾಜು ಎಂಬವರು ದಿನಾಂಕ 16-5-2018 ರಂದು ಪಟ್ಟಡ ವಿಕ್ರಮ್ ರವರ ಮನೆಯ ಮುಂದಿನ ಹೂ ತೋಟದಲ್ಲಿ ಕೆಲಸ ಮಾಡಿಕೊಂಡಿರುವಾಗ್ಗೆ ಆರೋಪಿ ಎರವರ ಮುತ್ತ ಎಂಬವರು ತನ್ನ ಹೆಂಡತಿಯನ್ನು ರಾಜು ಬೈದ ವಿಚಾರದಲ್ಲಿ ಜಗಳ ಮಾಡಿ ಗುದ್ದಲಿಯಿಂದ ರಾಜುರವರ ತಲೆಯ ಭಾಗಕ್ಕೆ ಕಡಿದು ಗಾಯಪಡಿಸಿ ಕೊಲೆಗೆ ಯತ್ನ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಶಾಮತ್ತ ವ್ಯಕ್ತಿಯಿಂದ ಹಲ್ಲೆ:

ವಿರಾಜಪೇಟೆ ನಗರ ಠಾಣಾ ಸರಹದ್ದಿನ ಮಹಿಳಾ ಸಮಾಜ ರಸ್ತೆ, ವಿರಾಜಪೇಟೆ ನಿವಾಸಿ ಬಿ.ಆರ್. ಶ್ರೀಧರ್ ಎಂಬವರು ದಿನಾಂಕ 16-5-2018 ರಂದು ಸಂಜೆ 5-30 ಗಂಟೆ ಸಮಯದಲ್ಲಿ ವಿರಾಜಪೇಟೆ ನಗರದ ಬೋಪಯ್ಯ ಎಂಬವರ ಅಂಗಡಿಯ ಮುಂದುಗಡೆ ನಿಂತುಕೊಂಡಿರುವಾಗ್ಗೆ ರಾಜು ಎಂಬ ವ್ಯಕ್ತಿ ನಿಶಾಮತ್ತನಾಗಿ ಬಂದು ವಿನಾ ಕಾರಣ ಕತ್ತಿಯಿಂದ ಚುಚ್ಚಲು ಪ್ರಯತ್ನಿಸಿ ಬಳಿಕ ಕತ್ತಿಯನ್ನು ಬೀಸಿ ಕಾಲಿಗೆ ಗಾಯಪಡಿಸಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime News

ಹಲ್ಲೆ ಪ್ರಕರಣ

ಹಳೇ ದ್ವೇಷದಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರಸಂತೆ ನಗರದಲ್ಲಿ ವರದಿಯಾಗಿದೆ. ದಿನಾಂಕ 13-05-2018 ರಂದು ಕೊಡ್ಲಿಪೇಟೆಯ ಹುಲಸೆ ಗ್ರಾಮದ ನಿವಾಸಿ ಬಸವರಾಜುರವರು ಶನಿವಾರಸಂತೆಯ ಮಾರುಕಟ್ಟೆಯ ಬಳಿ ನಿಂತಿರುವಾಗ ಪೃಥ್ವಿ ಎಂಬುವವರು ಹಳೇ ದ್ವೇಷದಿಂದ ಹಲ್ಲೆ ನಡೆಸಿದ್ದು ಈ ಬಗ್ಗೆ ಬಸವರಾಜುರವರು ದಿನಾಂಕ 15-05-2015 ರಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗಾಯಗೊಂಡಿದ್ದ ವ್ಯಕ್ತಿಯ ಸಾವು

ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟ ಘಟನೆ ಮಾದಾಪುರದಲ್ಲಿ ನಡೆದಿದೆ. ಸಿದ್ದಾಪುರದ ನಿವಾಸಿ ಕುಮಾರ ಎಂಬುವವರು ದಿನಾಂಕ 08-03-2018 ರಂದು ತೋಟವೊಂದರಲ್ಲಿ ಮರ ಹತ್ತಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾಯಗೊಂಡು ಚಿಕಿತ್ಸೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 15-05-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

ಬಿಳುಗುಂದ ಗ್ರಾಮದ ವಾಸಿಯಾದ ಸುಬ್ಬಯ್ಯ ಎಂಬುವವರು ಬೆಂಗಳೂರಿನಲ್ಲಿ ವಾಸವಿದ್ದು. ಇವರಿಗೆ ಸೇರಿದ ಬಿಳುಗುಂದ ಗ್ರಾಮದಲ್ಲಿರುವ ಮನೆಗೆ ಯಾರೋ ಕಳ್ಳರು ಬೀಗ ಮುರಿದು ನುಗ್ಗಿ ಮನೆಯಲ್ಲಿದ್ದ ಪೀಚೆಕತ್ತಿ, ಎಲ್.ಇ.ಡಿ, ಟಿ.ವಿ ತೂಗುದೀಪ, 25 ಕೆ ಜಿ ಕರಿಮೆಣಸನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಸುಬ್ಬಯ್ಯನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ:

ತೋಟದಲ್ಲಿದ್ದ ಮರದ ಕೊಂಬೆ ಕಡಿದ ವಿಚಾರದಲ್ಲಿ ಜಗಳ ಮಾಡಿ ವ್ಯಕ್ತಿ ಮೇಲೆ ಹಲ್ಲೆನಡೆಸಿದ ಘಟನೆ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರಪೇಟೆ ತಾಲೋಕು ಚಿಕ್ಕತೊಳೂರು ಗ್ರಾಮದ ನಿವಾಸಿ ಸಿ.ಕೆ. ಚಂದ್ರಪ್ಪ ಎಂಬವರು ದಿನಾಂಕ 13-5-2018 ರಂದು ಬೆಳಗ್ಗೆ ತಮ್ಮ ಗದ್ದೆಯಲ್ಲಿ ಬೆಳೆದ ತರಕಾರಿಯನ್ನು ಸೋಮವಾರಪೇಟೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾಗ ಸಮಯ ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಅವರ ಚಿಕ್ಕಪ್ಪನ ಮಗ ಆರೋಪಿ ಕಿರಣ್ ಎಂಬವರು ಅಲ್ಲಿಗೆ ಬಂದು ತೋಟದಲ್ಲಿದ್ದ ಸಿಲ್ವರ್ ಮರದ ಕೊಂಬೆಯನ್ನು ಕಡೆದ ವಿಚಾರವಾಗಿ ಜಗಳ ಮಾಡಿ ಕಲ್ಲಿನಿಂದ ಹಲ್ಲೆ ಮಾಡಿ ಗಾಯಪಡಿಸಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹಚ್ಚಿನಾಡು ಗ್ರಾಮದಲ್ಲಿ ಟಿ.ಪಿ. ಮೇದಪ್ಪ ಎಂಬವರು ಅಂಗಡಿಯನ್ನು ನಡೆಸುತ್ತಿದ್ದು ದಿನಾಂಕ 13-5-2018 ರಂದು ಆರೋಪಿಗಳಾದ ತಂಬುಕುತ್ತೀರ ಈರಪ್ಪ, ತಂಬುಕುತ್ತೀರ ವಿಠಲ, ತಂಬುಕುತ್ತೀರ ವಿಜು ರವರು ಅಲ್ಲಿಗೆ ಬಂದು ವ್ಯಾಪಾರಕ್ಕೆ ಅಡ್ಡಿಪಡಿಸಿ, ಪ್ರತಿದಿನಕ್ಕೆ ಇಂತಿಷ್ಟು ಹಣವನ್ನು ನೀಡಬೇಕಂದು ತಾಕೀತು ಮಾಡಿ ಹಣ ನೀಡಲು ಸಾಧ್ಯವಿಲ್ಲವೆಂದು ಹೇಳಿದ ವಿಚಾರದಲ್ಲಿ ಜಗಳ ಮಾಡಿ ಟಿ.ಪಿ.ಮೇದಪ್ಪನವರ ಮೇಲೆ ಮೂವರು ಸೇರಿ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Crime News

ಕ್ಷುಲ್ಲಕ ಕಾರಣಕ್ಕೆ ಹಲ್ಲೆ: 
     ಸಿದ್ದಾಪುರ ಠಾಣಾ ಸರಹದ್ದಿನ ಟಾಟಾ ಕಾಫಿ ತೋಟ ಎಮ್ಮೆಗುಂಡಿ ವಿಭಾಗದಲ್ಲಿ ವಾಸವಾಗಿರುವ ಬಾಬು ಮತ್ತು ಅವರ ಪಕ್ಕದ ಮನೆಯ ನಿವಾಸಿ ಸಂಜಯ್ ಹಲ್ ದಾರ್ ಎಂಬವರ ನಡುವೆ ಟಿ.ವಿ.ಯ ಸೌಂಡ್ ನ್ನು ಜೋರಾಗಿ ಹಾಕಿ ನೋಡುತ್ತಿದ್ದ ವಿಚಾರದಲ್ಲಿ ಜಗಳವಾಗಿದ್ದು ಬಾಬುರವರ ಮೇಲೆ ಸಂಜಯ್ ಹಲ್ ದಾರ್ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತಿಯಿಂದ ಪತ್ನಿ ಮೇಲೆ ಹಲ್ಲೆ:
     ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಮಸಗೋಡು ಗ್ರಾಮದ ನಿವಾಸಿ ಶ್ರೀಮತಿ ಎಂ.ಎಸ್. ಜಯಮ್ಮ ಎಂಬವರು ದಿನಾಂಕ 9-4-2018 ರಂದು ತಮ್ಮ ಮನೆಯಲ್ಲಿದ್ದ ವೇಳೆಯಲ್ಲಿ ಅವರ ಪತಿ ಶಿವರಾಜುರವರು ಮದ್ಯಸೇವಿಸಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕ: 
     ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಕೂಗೆಕೋಡಿ ಗ್ರಾಮದ ನಿವಾಸಿ ಕಿರಣ್ ಕುಮಾರ್ ಎಂಬವರು ತನ್ನ ಸ್ನೇಹಿತರಾದ ಸಂತೋಷ್, ಅವಿನಾಶ್, ಸಂದರ್ಶ್, ಪುನಿತ್ ಮತ್ತು ಅಭಿಷೇಕ್ ರವರೊಂದಿಗೆ 3 ಬೈಕಿನಲ್ಲಿ 11:45 ಗಂಟೆಗೆ ಮಲ್ಲಳ್ಳಿ ಫಾಲ್ಸ್ ನೋಡಲೆಂದು ಹೋಗಿದ್ದು, ಎಲ್ಲರೂ ಜಲಪಾತದ ಗುಂಡಿಯ ಪಕ್ಕ ನೀರಿನಲ್ಲಿ ಆಟವಾಡುತ್ತಿದ್ದಾಗ ಸ್ನೇಹಿತ ಪ್ರಾಯ 19 ವರ್ಷದ ಅಭಿಶೇಕ್ ನೀರಿನಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
ಮೋಟಾರ್ ಸೈಕಲಿಗೆ ಕಾರು ಡಿಕ್ಕಿ: 
     ಹಾಸನ ಜಿಲ್ಲೆಯ ಗಂಗೂರು ರಾಮನಾಥಪುರ ನಿವಾಸಿ ಚೇತನ್ ಎಂಬವರು ತನ್ನ ಸ್ನೇಹಿತ ಗಂದಾಧರ ಎಂಬವರೊಂದಿಗೆ ಮೋಟಾರ್ ಸೈಕಲಿನಲ್ಲಿ ಕುಶಾಲನಗರಕ್ಕೆ ಬಂದು ವಾಪಾಸು ಹೋಗುತ್ತಿದ್ದಾಗ ಬೈಚನಳ್ಳಿ ಕುಶಾಲ್ ಲಾಡ್ಜ್ ಬಳಿ ಎದುರಿನಿಂದ ಬಂದ ಕಾರೊಂದು ಮೋಟಾರ್ ಸೈಕಲಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಚೇತನ್ ರವರು ಗಾಯಗೊಂಡಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime News

ಬಸ್ಸುಗಳು ಡಿಕ್ಕಿ

ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿ ಎರಡೂ ಬಸ್ಸುಗಳು ಜಖಂಗೊಂಡ ಘಟನೆ ಮಡಿಕೇರಿ ಮೈಸೂರು ರಾಜ್ಯ ಹೆದ್ದಾರಿಯ ಬೋಯಿಕೇರಿ ಎಂಬಲ್ಲಿಂದ ವರದಿಯಾಗಿದೆ. ದಿನಾಂಕ 07-05-2018 ರಂದು ಮಡಿಕೇರಿಯ ಕೆ.ಎಸ್.ಆರ್.ಟಿ.ಸಿ ಡಿಪೋಕ್ಕೆ ಸೇರಿದ ಕೆಎ-21-ಎಫ್-0025 ರ ಕೆ.ಎಸ್.ಆರ್.ಟಿ.ಸಿ ಬಸ್ಸು ಬೆಂಗಳೂರಿನಿಂದ ಮಡಿಕೇರಿಗೆ ಬರುತ್ತಿರುವಾಗ ಬೋಯಿಕೇರಿ ಗ್ರಾಮದ ಸಿಂಕೋನ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬಂದ ವಿ.ಆರ್.ಎಲ್ ಬಸ್ಸನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಬಸ್ಸುಗಳು ಜಖಂಗೊಂಡಿದ್ದು, ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕ ಧನರಾಜ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಟ್ಟಡದಿಂದ ಬಿದ್ದು ಸಾವು

ವ್ಯಕ್ತಿಯೊಬ್ಬರು ಕಟ್ಟಡದಿಂದ ಬಿದ್ದು ಮೃತಪಟ್ಟ ಘಟನೆ ಸಿದ್ದಾಪುರದ ನೆಲ್ಲಿಹುದಿಕೇರಿ ಗ್ರಾಮದಲ್ಲಿ ವರದಿಯಾಗಿದೆ. ಕೇರಳ ರಾಜ್ಯದ ಮಲಪುರಂ ಜಿಲ್ಲೆಯ ನಿವಾಸಿ ಸುದೀರ್ ಎಂಬುವವರು ನೆಲ್ಲಿಹುದಿಕೇರಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡಲ್ಲಿ ಗಾರೆ ಕೆಲಸ ಮಾಡಿಕೊಂಡು ಅದೇ ಕಟ್ಟಡದಲ್ಲಿ ಇತರೆ ಇಬ್ಬರೊಂದಿಗೆ ಮಲಗುತ್ತಿದ್ದು, ದಿನಾಂಕ 07-05-2018 ರಂದು ರಾತ್ರಿ ಕಟ್ಟಡದ ಮೇಲ್ಬಾಗಕ್ಕೆ ಹೋದವರು ಆಕಸ್ಮಿಕವಾಗಿ ಕೆಳಗೆ ಬಿದ್ದು ಗಂಬೀರ ಗಾಯಗೊಂಡು ಮೃತಪಟ್ಟಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ಬೈಕ್‌ ಕಳವು ಪ್ರಕರಣ

                     ಸೋಮವಾರಪೇಟೆ ಬಳಿಯ ಕುಂದಳ್ಳಿ ನಿವಾಸಿ ದರ್ಶನ್‌ ಎಂಬವರು ದಿನಾಂಕ 06/05/2018ರಂದು ಅವರ ಕೆಎ-21-ಕೆ-6467ರ ಮೋಟಾರು ಬೈಕನ್ನು ಸೋಮವಾರಪೇಟೆ ನಗರದ ಕ್ಲಬ್‌ ರಸ್ತೆಯಲ್ಲಿರುವ ಬೇಕರಿ ಒಂದರ ಮುಂಭಾಗ ನಿಲ್ಲಿಸಿ ಸ್ನೇಹಿತನನ್ನು ಬಸ್‌ಗೆ ಹತ್ತಿಸಲು ಬಸ್‌ ನಿಲ್ದಾಣಕ್ಕೆ ಹೋಗಿ ನಂತರ ಮರಳಿ ಬಂದು ನೋಡುವಾಗ ಬೈಕ್‌ ಕಾಣೆಯಾಗಿದ್ದು ಯಾರೋ ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

Crime News

ವ್ಯಕ್ತಿಯ ಆಕಸ್ಮಿಕ ಸಾವು

                       ದಿನಾಂಕ 05/05/2018ರಂದು ಮಡಿಕೇರಿ ನಗರದ ನಿವಾಸಿ ಸಿದ್ದನಾಯಕ ಎಂಬವರು ವಿಪರೀತ ಮದ್ಯಪಾನ ಮಾಡಿ ನಗರದ ಖಾಸಗಿ ಬಸ್‌ ನಿಲ್ದಾಣದ ಮುಂದಿನ ಕಟ್ಟೆಯ ಮೇಲೆ ಕುಳಿತುಕೊಳ್ಲಲೆತ್ನಿಸಿದಾಗ ಆಯ ತಪ್ಪಿ ಕೆಳಗೆ ಹರಿಯುತ್ತಿರುವ ಚರಂಡಿಗೆ ಬಿದ್ದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 

ವ್ಯಕ್ತಿ ಆತ್ಮಹತ್ಯೆ 

                       ದಿನಾಂಕ 06/05/2018ರಂದು ಸೋಮವಾರಪೇಟೆ ಬಳಿಯ ಚೌಡ್ಲು ನಿವಾಸಿ ನಂದ ಎಂಬವರು ಮನೆಯ ಬಳಿಯ ಕಾಡಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಯಾವುದೋ ವೈಯುಕ್ತಿಕ ವಿಷಯಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ   ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 

ಕಾರಿಗೆ ಹಾನಿ, ಹಲ್ಲೆ ಪ್ರಕರಣ

                        ದಿನಾಂಕ 05/05/2018ರಂದು ಶನಿವಾರಸಂತೆ ಬಳಿಯ ಹಾರೆಹೊಸೂರು ಗ್ರಾಮದ ನಿವಾಸಿ ದಿನೇಶ ಎಂಬವರು ಅವರ ಕಾರಿನಲ್ಲಿ ಬಂದು ಅವರ ಬ್ರಾಂದಿ ಅಂಗಡಿಯ ಬಳಿ ಶೆಡ್ಡಿನಲ್ಲಿ ನಿಲ್ಲಿಸುತ್ತಿರುವಾಗ ದೊಡ್ಡಕುಂದ ನಿವಾಸಿ ತೇಜ ಕುಮಾರ್ ಎಂಬಾತನು ಅಲ್ಲಿಗೆ ಒಂದು ಬಲೇನೋ ಕಾರಿನಲ್ಲಿ ಬಂದು ಏಕಾ ಏಕಿ ದಿನೇಶರವರ ಕಾರಿನ ಗಾಜಿಗೆ ದೊಣ್ಣೆಯಿಂದ ಹೊಡೆದು ಹಾನಿಗೊಳಿಸಿದ್ದು ಈ ಬಗ್ಗೆ ವಿಚಾರಿಸಿದ ಬ್ರಾಂದಿ ಅಂಗಡಿಯ ಕೆಲಸಗಾರ ಧರ್ಮಪ್ಪ ಎಂಬಾತನಿಗೂ ಸಹಾ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 

ರಸ್ತೆ ಅಪಘಾತ

                      ದಿನಾಂಕ 06/05/2018ರಂದು ಗೋಣಿಕೊಪ್ಪ ನಿವಾಸಿ ಉಸ್ಮಾನ್ ಎಂಬವರು ನಗರದ ಹರಿಶ್ಚಂದ್ರಪುರದಲ್ಲಿನ ಅವರ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಕೆಎ-12-ಬಿ-6165ರ ಟಾಟಾ ಏಸ್ ವಾಹನವನ್ನು ಅದರ ಚಾಲಕ ನಿತಿನ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಉಸ್ಮಾನ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಉಸ್ಮಾನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 

ಅಪರಿಚಿತರಿಂದ ಹಲ್ಲೆ

                      ದಿನಾಂಕ 05/05/2018ರಂದು ಪೊನ್ನಂಪೇಟೆ ನಿವಾಸಿ ಕೆ.ಎಂ.ಮುತ್ತಪ್ಪ ಎಂಬವರು ಕುಂದ ಗ್ರಾಮದ ಸಿಲ್ವರ್ ಓಕ್ ಹೋಂ ಸ್ಟೇ ಬಳಿ ಅವರ ಜೀಪಿನಲ್ಲಿ ಬರುತ್ತಿರುವಾಗ ಹಿಂದಿನಿಂದ ಒಂದು ಮಾರುತಿ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ಮುತ್ತಪ್ಪನವರ ಜೀಪನ್ನು ಅಡ್ಡಗಟ್ಟಿ ನಿಲ್ಲಿಸಿ ರಾಡಿನಿಂದ ಮುತ್ತಪ್ಪನವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 

ಕಳವು ಪ್ರಕರಣ

                   05/05/2018ರಂದು ಗೋಣಿಕೊಪ್ಪ ಬಳಿಯ ಅತ್ತೂರು ನಿವಾಸಿ ಎಸ್‌.ಎಸ್.ಕಾವೇರಪ್ಪ ಎಂಬವರು ಕೆಲಸದ ನಿಮಿತ್ತ ಗೋಣಿಕೊಪ್ಪ ನಗರಕ್ಕೆ ಬಂದು ಮರಳಿ ಮನೆಗೆ ಹೋದಾಗ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ ಒಳಗಿದ್ದ ಡಿವಿಡಿ ಪ್ಲೇಯರ್, ಎರಡು ಚಿನ್ನದ ಉಂಗುರ ಸೇರಿದಂತೆ ಒಟ್ಟು ರೂ.24,000/- ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.   

Crime News

ಕಳವು ಪ್ರಕರಣ

ಮಡಿಕೇರಿ ನಗರದ ದೇಚೂರು ಎಂಬಲ್ಲಿ ಮನೆಗೆ ಕಳ್ಳರು ನುಗ್ಗಿ ಕಳವು ಮಾಡಿರುವ ಘಟನೆ ವರದಿಯಾಗಿದೆ. ದಿನಾಂಕ 14-04-2018 ರಂದು ದೇಚೂರುವಿನ ನಿವಾಸಿ ಜಯ ಅಪ್ಪಚ್ಚು ಗಣಪತಿಯವರು ಬೆಂಗಳೂರಿಗೆ ಹೋಗಿದ್ದು, ಅವರ ಮನೆಯಲ್ಲಿ ಬಾಡಿಗೆಗೆ ಇರುವ ನಾಗರಾಜುರವರು ಸಹಾ ಮಂಡ್ಯ ಜಿಲ್ಲೆಗೆ ಹೋಗಿದ್ದು, ದಿನಾಂಕ 03-05-2018 ರ ನಡುವೆ ಯಾರೊ ಕಳ್ಳರು ನಾಗರಾಜುರವರ ಮನೆಯ ಬಾಗಿಲಿನ ಚಿಲಕವನ್ನು ಮುರಿದು ಒಳನುಗ್ಗಿ ನಾಗರಾಜುರವರ ಮನೆಯಿಂದ 40,000 ರೂ ನಗದು ಹಣವನ್ನು ಹಾಗು ನಾಗರಾಜುರವರ ಮನೆಯ ಒಳಗಿನಿಂದ ಜಯಅಪ್ಪಚ್ಚು ಗಣಪತಿಯವರ ಮನೆಗೆ ಬಾಗಿಲಿನ ಮೂಲಕ ಒಳ ಹೋಗಿ ಹಾಲ್‍ ನ ಮುಂಭಾಗದಲ್ಲಿ ಇಟ್ಟಿದ್ದ 6 ಬಂದೂಕುಗಳ ಪೈಕಿ ಒಂದು .22 ರೈಫಲ್, ಒಂದು ಡಿ.ಬಿ.ಬಿ.ಎಲ್ ಬಂದೂಕು ಹಾಗೂ 2 ಮದ್ಯದ ಬಾಟಲಿಗಳನ್ನು ಕಳವುಮಾಡಿಕೊಂಡು ಹೋಗಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಬ್ಯಾಂಕ್ ಮಾಹಿತಿ ಪಡೆದು ವಂಚನೆ

ದಿನಾಂಕ 27-04-2018 ರಂದು ಸಿದ್ದಾಪುರದ ಕರಡಿಗೊಡುವಿನ ನಿವಾಸಿ ಜೋಸೆಫ್ ಕಿರಣ್ ಎಂಬುವವರಿಗೆ ಅನಾಮಧೇಯ ನಂಬರಿನಿಂದ ಕರೆ ಮಾಡಿ ತಾನು ಬೆಂಗಳೂರಿನ ಶಾಂತಿ ನಗರದ ಕೆನರಾ ಬ್ಯಾಂಕ್ ಶಾಖೆಯಿಂದ ಕರೆ ಮಾಡುತ್ತಿದ್ದು ನಿಮ್ಮ ಡೆಬಿಟ್ ಕಾರ್ಡ್ ನಲ್ಲಿ ತೊಂದರೆ ಇದ್ದು ಸರಿಪಡಿಸುವುದಾಗಿ ಹೇಳಿ ಡೆಬಿಟ್ ಕಾರ್ಡ್ ನ ಹಿಂಭಾಗದಲ್ಲಿರುವ CVV ನಂಬರನ್ನು ಪಡೆದುಕೊಂಡು ಖಾತೆಯಿಂದ 83,000 ರೂ ನಗದು ಹಣವನ್ನು ಡ್ರಾ ಮಾಡಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮ ಹತ್ಯೆ

ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಎಂ.ಬಾಡಗ ಗ್ರಾಮದಲ್ಲಿ ವರದಿಯಾಗಿದೆ. ಎಂ.ಬಾಡಗ ಗ್ರಾಮದ ನಿವಾಸಿಯಾದ ಕರುಂಬಯ್ಯ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ವಿಚಾರದಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 05-05-2018 ರಂದು ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಟೋ ರಿಕ್ಷಾ ಅಪಘಾತ

ದಿನಾಂಕ 05-05-2018 ರಂದು ಮಡಿಕೇರಿ ಪಟ್ಟಣದ ಇಂದಿರಾ ನಗರದ ನಿವಾಸಿ ಸಜನ ಎಂಬುವವರು ತಾಯಿ ಮರಿಯಮ್ಮನವರೊಂದಿಗೆ ಕೆಎ-12-ಬಿ-2903ರ ಆಟೋ ರಿಕ್ಷಾದಲ್ಲಿ ಮಡಿಕೇರಿ ನಗರದಿಂದ ಮನೆಗೆ ಹೋಗುತ್ತಿರುವಾಗ ಲಿವಾ ಕ್ಲೀನಿಕ್ ಬಳಿ ಆಟೋವನ್ನು ಚಾಲಕ ಅಜಾಗರುಕತೆಯಿಂದ ಚಾಲನೆ ಮಾಡಿ ಮಗುಚಿ ಬಿದ್ದ ಪರಿಣಾಮ ಸಜನ ಮತ್ತು ಮರಿಯಮ್ಮನವರಿಗೆ ಗಾಯಗಳಾಗಿದ್ದು ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಅನಾಮದೇಯ ವ್ಯಕ್ತಿಯ ಸಾವು

ಗೋಣೀಕೊಪ್ಪ ನಗರದಲ್ಲಿ ಸುಮಾರು 5-6 ವರ್ಷಗಳಿಂದ ಹುಬ್ಬಳ್ಳಿಯ ವ್ಯಕ್ತಿ ಸಿಕ್ಕಿದ ಕಡೆ ಕೂಲಿ ಕೆಲಸ ಮಾಡಿಕೊಂಡು ನಗರದ ಹಳೇ ಗ್ರಾಮ ಪಂಚಾಯಿತಿ ಕಛೇರಿಯ ಆವರಣದಲ್ಲಿ ಮಲಗುತ್ತಿದ್ದು, ಸದರಿ ವ್ಯಕ್ತಿಯು 2 ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದವರು ದಿನಾಂಕ 04-05-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಹಲ್ಲೆ

ದಿನಾಂಕ 04-05-2018 ರಂದು ಕುಶಾಲನಗರದ ವೆಬ್ಸಾ ಶೋ ರೂಂ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿರುವ ಅಬ್ಬುರುಕಟ್ಟೆ ಗ್ರಾಮದ ನಿವಾಸಿ ಯೋಗೇಶ ಎಂಬುವವರು ಮನೆಯಿಂದ ನಡೆದುಕೊಂಡು ಹೋಗುತ್ತಿರುವಾಗ ವಳಗುಂದ ಗ್ರಾಮದ ಪ್ರೀತಮ್ ಎಂಬುವವರು ಇನ್ನೊಬ್ಬನೊಂದಿಗೆ ಬಂದು ಜಗಳ ತೆಗೆದು ಮೋಟಾರು ಸೈಕಲ್ ರಿಪೇರಿ ವಿಷಯದಲ್ಲಿ ಜಗಳ ಮಾಡಿ ಚಾಕುವಿನಿಂದ ಚುಚ್ಚಿ ಗಾಯಪಡಿಸಿದ್ದು ಈ ಬಗ್ಗೆ ಸೊಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ತಾಲೂಕಿನ ಮೂವತ್ತೋಕ್ಲು ಗ್ರಾಮದಿಂದ ವರದಿಯಾಗಿದೆ. ದಿನಾಂಕ 05-05-2018 ರಂದು ಮೂವತ್ತೋಕ್ಲು ಗ್ರಾಮದ ನಿವಾಸಿ ತಿಮ್ಮಯ್ಯ ಎಂಬುವವರು ಮನೆಗೆ ಬಾವಿಯಿಂದ ನೀರು ತರುತ್ತಿರುವಾಗ ಪಕ್ಕದ ಮನೆಯ ನಿವಾಸಿಗಳಾದ ಪದ್ಮ, ಪೊನ್ನಮ್ಮ, ಪವಿ, ಕಿಟ್ಟ ಹಾಗು ಅಪ್ಪಣ್ಣನವರು ಬಾವಿಯಿಂದ ನೀರು ತೆಗೆದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ತಿಮ್ಮಯ್ಯನವರು ನಿಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ವ್ಯಕ್ತಿಯ ಸಾವು ಪ್ರಕರಣ ದಾಖಲು: 
     ಬ್ಯಾಂಕ್ ಉದ್ಯೋಗಿಯೊಬ್ಬರು ತಮ್ಮ ಮನೆಯ ಬಾತ್ ರೂಂನಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಮಡಿಕೇರಿ ನಗರದ ಮಹದೇವಪೇಟೆಯಲ್ಲಿ ನಡೆದಿದೆ. ಮಡಿಕೇರಿ ನಗರ ಠಾಣಾ ಸರಹದ್ದಿನ ಮಹದೇವ ಪೇಟೆ ನಿವಾಸಿ ರವಿ ಎಂಬವರು ಮಡಿಕೇರಿ ನಗರದ ಟೌನ್ ಬ್ಯಾಂಕ್ ಉದ್ಯೋಗಿಯಾಗಿದ್ದು ದಿನಾಂಕ 4-5-2018 ರಂದು ತಮ್ಮ ಮನೆಯ ಬಾತ್ ರೂಂ ನಲ್ಲಿ ಮೃತಪಟ್ಟಿರುವುದು ಕಂಡು ಬಂದಿದ್ದು, ಆರೋಗ್ಯದ ತೊಂದರೆಯಿಂದಲೋ ಅಥವಾ ಜಾರಿಬಿದ್ದು ಮೃತಪಟ್ಟರಬಹುದೆಂದು ಸುರೇಶ್ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಮೇಲೆ ಹಲ್ಲೆ, ಕೊಲೆ ಬೆದರಿಕೆ: 
     ಮಡಿಕೇರಿ ಗ್ರಾಮಾಂತರ ಠಾಣೆ ಸರಹದ್ದಿನ ಯು.ಚೆಂಬು ಗ್ರಾಮದ ನಿವಾಸಿ ಕೆ.ಜಿ.ನಯನ ಎಂಬವರು ದಿನಾಂಕ 1-5-2018 ರಂದು ಚೆಂಬು ಗ್ರಾಮದಲ್ಲಿ ಜೀಪಿನಲ್ಲಿ ಹೋಗುತ್ತಿದ್ದಾಗ ಆರೋಪಿಗಳಾದ ದೀಕ್ಷಿತ್, ಮನೋಹರ, ಜಿತೇಶ್, ನಂದಕುಮಾರ್, ರವರುಗಳು ಜೀಪನ್ನು ನಿಲ್ಲಿಸಿ ಜೀಪಿನಿಂದ ಕೆ.ಜಿ.ನಯನರವರನ್ನು ಎಳೆದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ದಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಿಲು ಮುರಿದು ಕಳವು: 
     ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಬಸವೇಶ‍್ವರ ಬಡಾವಣೆಯಲ್ಲಿರುವ ಪ್ರದೀಪ್ ನರೋನ ಎಂಬವರ ಮನೆಯ ಹಿಂದಿನ ಬಾಗಿಲಿಗೆ ಹಾಕಿದ ಬೋಲ್ಟ್ ನ್ನು ಮುರಿದು ಒಳಗೆ ಪ್ರವೇಶಿಸಿ ಟಿ.ವಿ., ಪೋನ್, ಕೈಗಡಿಯಾರ, ಕ್ಯಾಮರಾ ಹಾಗು ಇತರೆ ಮನೆ ಸಾಮಾಗ್ರಿಗಳು ಒಟ್ಟು 21,000 ರೂ. ಬೆಲೆಬಾಳುವ ವಸ್ತುಗಳನ್ನು ಕಳವುಮಾಡಿಕೊಂಡು ಹೋಗಿದ್ದು, ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸು ತನಿಖೆ ನಡೆಸುತ್ತಿದ್ದಾರೆ.
ಮನೆ ಕಳವು: 
     ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ಸರಹದ್ದಿನ ಸ್ವಾಮಿ ಬಡಾವಣೆಯಲ್ಲಿರುವ ಫಿರ್ಯಾದಿ ಪಿ.ಬಿ. ನಾಚಪ್ಪ, ಎಂಬವರ ಮನೆಯ ಮುಂಬಾಗದ ಕಿಟಕಿಯ ಎರಡು ರಾಡುಗಳನ್ನು ಕತ್ತರಿಸಿ ತೆಗದು ಕಿಟಕಿ ಮೂಲಕ ಒಳಪ್ರವೇಶಿಸಿ ನಗದು ರೂ.37,000, 2 ಬೆಳ್ಳಿ ನಾಣ್ಯ, ಅರ್ಧ ಪವನಿನ 2 ಮುತ್ತಿನ ಸರ ಕೆನರಾ ಬ್ಯಾಂಕಿನ ಎ.ಟಿ.ಎಂ. ಕಾರ್ಡ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಸೇವಿಸಿ ವ್ಯಕ್ತಿ ಸಾವು: 
     ಶ್ರೀಮಂಗಲ ಠಾಣಾ ಸರಹದ್ದಿನ ಕುಮಟೂರು ಗ್ರಾಮದ ನಿವಾಸಿ ಕರ್ತಮಾಡ ಸುಬ್ರಮಣಿ ಎಂಬವರು ದಿನಾಂಕ 3-5-2018 ರಂದು ರಾತ್ರಿ ಯಾವುದೋ ವಿಷವನ್ನು ಸೇವಿಸಿ ಮೃತಪಟ್ಟಿದ್ದು, ಈ ಸಂಬಂಧ ಕರ್ತಮಾಡ ಎಸ್. ಬೋಪಣ್ಣ ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Crime News

ಪರಸ್ಪರ ಕಾರು ಡಿಕ್ಕಿ

                      ದಿನಾಂಕ 03/05/2018ರಂದು ಮಡಿಕೇರಿ ನಗರದ ವಿದ್ಯಾನಗರ ನಿವಾಸಿ ಬಿ.ಎಸ್.ಉಮೇಶ್ ಎಂಬವರು ಅವರ ಕೆಎ-12-ಬಿ-4313ರ ಕಾರಿನಲ್ಲಿ ಮನೆಗೆ ಹೋಗುತ್ತಿರುವಾಗ ಗಾಳಿಬೀಡು ಗ್ರಾಮದಲ್ಲಿ ಎದುರಿನಿಂದ ಕೆಎ-12-ಬಿ-0294ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಉಮೇಶ್‌ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳು ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

1 2 3 4 6