ದಿನಾಂಕ 22/01/2021ರಂದು ವಿರಾಜಪೇಟೆ ಬಳಿಯ ಚೆನ್ನಯ್ಯನಕೋಟೆ ನಿವಾಸಿ ಹೆಚ್.ಬಿ.ಹರೀಶ ಎಂಬವರು ಅವರ ತಂದೆ ಬಸವ ಎಂಬವರೊಡನೆ ಚೆನ್ನಯ್ಯನಕೋಟೆ ಪಟ್ಟಣದಿಂದ ಅವರ ಮನೆಗೆ ಹೋಗುತ್ತಿರುವಾಗ ಪಾಲಿಬೆಟ್ಟ ಸಿದ್ದಾಪುರ ರಸ್ತೆಯ ಬಳಿ ಪಾಲಿಬೆಟ್ಟ ಕಡೆಯಿಂದ ಒಂದು ಐಷರ್ ಲಾರಿಯನ್ನು ಅದರ ಚಾಲಕ ಪ್ರವೀಣ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಹರೀಶ್ರವರ ತಂದೆ ಬಸವರವರಿಗೆ ಡಿಕ್ಕಿಪಡಿಸಿದ ಪರಿಣಾಮ ಬಸವರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.