Crime News

ನೀರಿಗೆ ಬಿದ್ದು ಯುವಕ ಸಾವು:

ಹಾಸನನಿಂದ ಪ್ರವಾಸಕ್ಕೆಂದು ಬಂದ ವ್ಯಕ್ತಿಯೋರ್ವ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ಮಲ್ಲಳ್ಳಿ ಫಾಲ್ಸ್ ನಲ್ಲಿ ನಡೆದಿದೆ. ದಿನಾಂಕ 9-10-2018 ರಂದು ಹಾಸನ ಜಿಲ್ಲೆಯ ಅರೆಹಳ್ಳಿ ಗ್ರಾಮದ ನಿವಾಸಿ ಅಬ್ದುಲ್  ಜಲೀಲ್ ರವರ ಮಗ ಜಾವಿದ್ ಪಾಷಾ ಎಂಬವರು ತನ್ನ ಸ್ನೇಹಿತರೊಂದಿಗೆ ಸೋಮವಾರಪೇಟೆ ಠಾಣಾ ಸರಹದ್ದಿನ ಮಲ್ಲಳ್ಳಿ ಫಾಲ್ಸ್ ‍ ವೀಕ್ಷಣೆಗೆಂದು ಬಂದಿದ್ದು ಅವರುಗಳು ಸಾಯಂಕಾಲ ಸದರಿ ಫಾಲ್ಸ್ ‍ನ ಹೊಳೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಜಾವಿದ್ ಪಾಷಾರವರು ಆಕಸ್ಮಿಕ ಕಾಲುಜಾರಿ ನೀರಿಗೆ ಬಿದ್ದು ಸಾವನಪ್ಪಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲ್ ಕಳವು:

ವಿರಾಜಪೇಟೆ ಸಮೀಪದ ಕುಕ್ಲೂರು ಗ್ರಾಮದ ನಿವಾಸಿ ಪಿ.ಬಿ. ಮೋಹನ್ ಎಂಬವರು ದಿನಾಂಕ 8-10-2018 ರಂದು ರಾತ್ರಿ 9-00 ಗಂಟೆಗೆ ತಾನು ವಾಸವಾಗಿರುವ ಕುಕ್ಲೂರು ಗ್ರಾಮದ ಮಾಳೇಟ್ಟೀರ ಚಿಣ್ಣಪ್ಪ ಎಂಬವರ ಲೈನು ಮನೆಯ ಮುಂಭಾಗದಲ್ಲಿ ತನ್ನ ಬಾಪ್ತು ಪಲ್‍ಸರ್  ಮೋಟಾರ್ ಸೈಕಲನ್ನು ನಿಲ್ಲಿಸಿದ್ದು, ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಅದರ ಮೌಲ್ಯ ಅಂದಾಜು ರೂ.49,000/- ಗಳಾಗಬಹುದೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗಂಭೀರವಾಗಿ ಗಾಯಗೊಂಡ ಹೋರಿ ಸಾವು:

ದಿನಾಂಕ 7-10-2018 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಮಲಬಾರ್ ರಸ್ತೆಯಲ್ಲಿರುವ ಡಿಲಕ್ಸ್ ಹೋಟೇಲ್ ಮುಂಭಾಗ ವಿರಾಜಪೇಟೆ ವಿದ್ಯಾನಗರ ನಿವಾಸಿ ಗಫೂರ್ ಎಂಬವರ ಬಾಪ್ತು ಹೋರಿಯೊಂದು ಗಂಭೀರವಾಗಿ ಗಾಯಗೊಂಡು ಬಿದ್ದಿದ್ದನ್ನು ವಿರಾಜಪೇಟೆ ಪೊಲೀಸರು ಸಾರ್ವಜನಿಕರ ಸಹಾಯದಿಂದ ಪೊಲೀಸ್ ಠಾಣಾ ಆವರಣಕ್ಕೆ ತಂದು ಪಶುವೈದ್ಯರಿಂದ ಚಿಕಿತ್ಸೆ ನೀಡುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಸದರಿ ಹೋರಿ 10-10-2018 ರಂದು ಮೃತಪಟ್ಟಿದ್ದು, ಸದರಿ ಹೋರಿಗೆ ಗಂಭೀರ ಗಾಯವಾಗಲು ಕಾರಣವೇನು ಎನ್ನುವುದರ ಬಗ್ಗೆ ತನಿಖೆಗಾಗಿ ಗಫೂರ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಪರಿಚಿರ ವ್ಯಕ್ತಿಯಿಂದ ಅನುಚಿತ ವರ್ತನೆ:

ಅಪರಿಚಿತ ವ್ಯಕ್ತಿಯೋರ್ವ ದಿನಾಂಕ 9-10-2018 ರಂದು ಸಂಜೆ 7-00 ಗಂಟೆಯ ಸಮಯದಲ್ಲಿ ಮೋಟಾರ್ ಬೈಕಿನಲ್ಲಿ ವಿರಾಜಪೇಟೆ ನಗರದಲ್ಲಿರುವ ಅಶೋಕ್ ಮೆಡಿಕಲ್ಸ್ ಗೆ ಬಂದು ಗರ್ಭನಿರೋಧಕ ಸಾಧನ ಬೇಕೆಂದು ಕೇಳಿ ಮೆಡಿಕಲ್ ಶಾಫಿನಲ್ಲಿದ್ದ ಮಾಯಾ ಬನ್ಸಿ ಎಂಬ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಈ ಸಂಬಂಧ ಸದರಿ ಮಾಯಾ ಬನ್ಸಿರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಕೂಟಿಗೆ ಜೀಪು ಡಿಕ್ಕಿ:

ನಾಪೋಕ್ಲು ಠಾಣಾ ಸರಹದ್ದಿನ ಕಕ್ಕಬೆ ಗ್ರಾಮದ ನಿವಾಸಿ ಕೆ.ಎಂ. ಮಾಚಯ್ಯ ಎಂಬವರು ದಿನಾಂಕ 9-10-2018 ರಂದು ತಮ್ಮ ಬಾಪ್ತು ಸ್ಕೂಟಿಯಲ್ಲಿ ಕಕ್ಕಬೆ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಸಚಿನ್ ಎಂಬವರು ತಮ್ಮ ಬಾಪ್ತು ಜೀಪನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೆ.ಎಂ. ಮಾಚಯ್ಯನವರು ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಅವರ ಬಲಕಾಲಿನ ಮಂಡಿಯ ಕೆಳಬಾಗದ ಮೂಳೆ ಮುರಿದುಹೋಗಿದ್ದು, ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

1 3 4 5 6 7 189