Crime News

ಕಾರು ಡಿಕ್ಕಿ, ಯುವಕ ಸಾವು

ದಿನಾಂಕ 02/04/3018ರಂದು ವಿರಾಜಪೇಟೆ ಬಳಿಯ ನಾಲ್ಕೇರಿ ನಿವಾಸಿ ಅರೆಯಂಡ ಮಿಥುನ್ ಎಂಬ ಯುವಕನು ಕೆಎ-12-9969ರ ಬುಲೆಟ್ ಬೈಕಿನಲ್ಲಿ ಕಾಕೋಟುಪರಂಬುವಿನ ಬಳಿ ಹೋಗುತ್ತಿರುವಾಗ ಎದುರಿನಿಂದ ಕೆಎ-12-ಪಿ-4897ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಿಥುನ್‌ ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಿಥುನ್ ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ

ದಿನಾಂಕ 13/03/2018ರಂದು ವಿರಾಜಪೇಟೆ ಬಳಿಯ ಗುಹ್ಯ ಗ್ರಾಮದ ನಿವಾಸಿ ಮಣಿ ಎಂಬವರು ಕಾರಿನಲ್ಲಿ ಸ್ನೇಹಿತರಾದ ಅದೀಶ್ ಮತ್ತು ಅಜು ಎಂಬವರೊಂದಿಗೆ ಪುಲಿಯೇರಿ ಗ್ರಾಮದ ರದೀಶ್‌ ಎಂಬವರ ಮನೆಗೆ ಹೋಗುತ್ತಿರುವಾಗ ಅಮ್ಮತ್ತಿ ಬಳಿ ಕಂಬೀರಂಡ ಬೋಜ, ಚಕ್ರವರ್ತಿ ಮತ್ತಿತರರು ದಾರಿ ಮಧ್ಯೆ ಮಾತನಾಡುತ್ತಾ ನಿಂತಿದ್ದು ಮಣಿರವರು ದಾರಿ ಬಿಡುವಂತೆ ಕೇಳಿದ ಕಾರಣಕ್ಕೆ ಮಣಿರವರೊಂದಿಗೆ ಜಗಳವಾಡಿ ಬೋಜ ಮತ್ತು ಚಕ್ರವರ್ತಿ ಮತ್ತಿತರರು ಸೇರಿಕೊಂಡು ಮಣಿರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ

ದಿನಾಂಕ 02/04/2018ರಂದು ತಿತಿಮತಿ ಬಳಿಯ ಚೇನಿಹಡ್ಲು ಹಾಡಿಯ ನಿವಾಸಿ ಪಂಜರಿಎರವರ ಮಂಜುನಾಥ ಎಂಬವರು ನೆರೆಮನೆಯ ಪಿ.ಸಿ.ರಾಮು ಎಂಬವರೊಂದಿಗೆ ತಿತಿಮತಿಗೆ ಹೋಗುತ್ತಿರುವಾಗ ದಾರಿಯಲ್ಲಿ ಮಣಿ, ರವೀಣಾ, ಬೋಜ, ರಮೇಶ್, ಕಪ್ಪಡಿ ಮತ್ತು ರಘು ಎಂಬವರು ಸೇರಿಕೊಂಡು ಹಣದ ವಿಚಾರದಲ್ಲಿ ಜಗಳವಾಡಿ ದೊಣ್ಣೆಯಿಂದ ಮಂಜುನಾಥರವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 01/04/2018ರಂದು ಕುಶಾಲನಗರ ಪಟ್ಟಣದ ಕಾಳಮ್ಮ ಕಾಲೋನಿ ನಿವಾಸಿ ಸುರೇಶ ಕೆ.ಸಿ. ಎಂಬವರೊಂದಿಗೆ ಅದೇ ಕಾಲೋನಿ ನಿವಾಸಿ ಶಿವರಾಜ್, ಅಪ್ಪು ಮತ್ತು ಅನುಸೂಯ ಎಂಬವರು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ಸುರೇಶ್‌ ರವರು ಶಿವರಾಜ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ಪ್ರತಿ ದೂರು ನೀಡಿದ್ದು ಕುಶಾಲನಗರ ಪಟ್ಟಣ ಪೊಲೀಸರು ಎರಡೂ ದೂರುಗಳನ್ನು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರಿಮೆಣಸು ಮತ್ತು ಕಾಫಿ ಕಳವು

ಸೋಮವಾರಪೇಟೆ ಬಳಿಯ ಜಂಬೂರು ನಿವಾಸಿ ಮಜೀದ್ ಎಂಬವರು ಅವರ ಗೋದಾಮಿನಲ್ಲಿ ಅವರಿಗೆ ಸೇರಿದ ಕಾಫಿ ಮತ್ತು ಕರಿ ಮೆಣಸನ್ನು ಚೀಲದಲ್ಲಿ ಶೇಖರಿಸಿಟ್ಟಿದ್ದು ದಿನಾಂಕ 02/04/2018ರಂದು ಬೆಳಿಗ್ಗೆ ಹೋಗಿ ನೋಡುವಾಗ ಯಾರೋ ಕಳ್ಳರು ಗೋದಾಮಿನ ಬೀಗ ಮುರಿದು ಒಳ ಪ್ರವೇಶಿಸಿ ಅಲ್ಲಿದ್ದ ಸುಮಾರು ರೂ.2,18,560/- ಮೌಲ್ಯದ 32 ಕೆ.ಜಿ.ತೂಕದ 18 ಚೀಲ ಕರಿಮೆಣಸು ಹಾಗೂ 50 ಕೆ.ಜಿ. ತೂಕದ 4 ಚೀಲ ಕಾಫಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ, ಕೊಲೆ ಬೆದರಿಕೆ

ದಿನಾಂಕ 02/04/2018ರಂದು ಬೆಟ್ಟಗೇರಿ ಬಳಿಯ ಅರುವತೊಕ್ಲು ನಿವಾಸಿ ಬಿ.ಎಂ.ಪ್ರಸನ್ನ ಎಂಬವರು ಅವರ ಮತ್ತು ಅವರ ಚಿಕ್ಕಪ್ಪನವರ ಮನೆಗೆ ಹೋಗುವ ದಾರಿಯ ಕೈ ತೊರೆಗೆ ಜೆ.ಸಿ.ಬಿ. ಯಂತ್ರದಿಂದ ಮಣ್ಣು ಹಾಕುವ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬಂದ ಕಡ್ಯದ ಜಯಕುಮಾರ್ ಎಂಬವರು ಜಾಗದ ವಿಚಾರವಾಗಿ ಜಗಳವಾಡಿ ಪ್ರಸನ್ನರವರಿಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೃಷಿ ಸಲಕರಣೆ ಕಳವು

ಪಾಲೆಬೆಟ್ಟ ಬಳಿಯ ಹೊಸೂರು ಬೆಟ್ಟಗೇರಿ ಗ್ರಾಮದಲ್ಲಿರುವ ಟಾಟಾ ಕಾಫಿ ತೋಟದ ಗೋದಾಮಿಗೆ ಯಾರೋ ಕಳ್ಳರು ನುಗ್ಗಿ ಸುಮಾರು ರೂ.23,000/- ಮೌಲ್ಯದ ಹಳೆಯ ಗೀಸರ್ ಸಿಲಿಂಡರ್ ಡ್ರಂತಾಮ್ರದ ಹಂಡೆಗಳು ಮತ್ತು ಔಷಧಿ ಸಿಂಪರಣೆಯ ಸಲಕರಣೆಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published.