Crime News

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ:

ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಭದ್ರಗೊಳ ಗ್ರಾಮದ ನಿವಾಸಿ ಹೆಚ್.ಟಿ.ಪ್ರವೀಣ್ ಕುಮಾರ್ ಎಂಬವರ ಪತ್ನಿ ಮಂಗಳ ಎಂಬವರು ಕೆಲವು ಸಮಯದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ದಿನಾಂಕ 11-7-2018 ರಂದು ಮನೆಯಿಂದ ಹೋಗಿದ್ದು ನಂತರ ಮನೆಗೆ ಬಾರದೆ ಕಾಣೆಯಾಗಿದ್ದು, ದಿನಾಂಕ 15-7-2018 ರಂದು ಸದರಿ ಮಂಗಳರವರ ಮೃತದೇಹವು ಅವರ ಮನೆಯ ಹತ್ತಿರದ ಬಾವಿಯಲ್ಲಿ ದೊರೆತಿದ್ದು, ಆಕೆ ಸದರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆಂದು ಆಕೆಯ ಪತಿ ಹೆಚ್.ಟಿ. ಪ್ರವೀಣ್ ಕುಮಾರ್ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನುಷ್ಯ ಕಾಣೆ:

ಮಡಿಕೇರಿ ನಗರದ ಪುಟಾಣಿನಗರದ ನಿವಾಸಿ ಕೆ.ಎನ್. ರವಿಚಂದ್ರ ಎಂಬವರ ಸಹೋದರ ಕೆ.ಎನ್. ಸ್ವಾಮಿ ಎಂಬವರು ಆಟೋ ಚಾಲಕ ವೃತ್ತಿಯನ್ನು ಮಾಡಿಕೊಂಡಿದ್ದು ದಿನಾಂಕ 9-7-2018 ರಂದು ಬೆಳಗ್ಗೆ 11-00 ಗಂಟೆಗೆ ಮನೆಯಿಂದ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು ಈ ಸಂಬಂಧ ಕೆ.ಎನ್. ರವಿಚಂದ್ರರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಲಾರಿ ಡಿಕ್ಕಿ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಯನಾಡು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ದಿನಾಂಕ 15-7-2018 ರಂದು ಬೆಳಗ್ಗೆ 7-30 ಗಂಟೆಯ ಸಮಯದಲ್ಲಿ ಮಡಿಕೇರಿ ಕಡೆಯಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಮಡಿಕೇರಿ ಕಡೆಗೆ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿ, ಪರಿಣಾಂ ಕಾರು ಜಖಂಗೊಂಡು ಕಾರು ಚಾಲಕ ಇರ್ಷಾದ್ ರವರಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ಮಹಿಳೆ ಸಾವು:

ಮಡಿಕೇರಿ ತಾಲೋಕು ಬೇಂಗೂರು ಗ್ರಾಮದ ನಿವಾಸಿ ಶ್ರೀಮತಿ ವಿಶಾಲಾಕ್ಷಿ ಎಂಬವರ ಪತಿ ಮಣಿ ಎಂಬವರು ಕೆಲವು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ದಿನಾಂಕ 15-7-2018 ರಂದು ತನ್ನ ವಾಸದ ಮನೆಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಪಾದಚಾರಿಗೆ ಕಾರು ಡಿಕ್ಕಿ:

ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಕೈಕೇರಿ ಗ್ರಾಮದ ನಿವಾಸಿ ಡ್ಯಾನಿಯಲ್ ಪೌಲ್ ಎಂಬವರು ದಿನಾಂಕ 15-7-2018 ರಂದು ಕೈಕೇರಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗೋಣಿಕೊಪ್ಪದ ಕಡೆಯಿಂದ ವಿರಾಜಪೇಟೆ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದು ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.