Crime News

ಅಂಗನವಾಡಿ ಕಳವು

ಕುಶಾಲನಗರ ಬಳಿಯ ಶಿರಂಗಾಲ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ದಿನಾಂಕ 13/07/2018 ರಿಂದ 15/07/2018ರ ವರೆಗೆ ಮಳೆಯ ಕಾರಣ ರಜೆ ಇದ್ದು ದಿನಾಂಕ 16/07/2018ರಂದು ಕೇಂದ್ರದ ಸಹಾಯಕಿ ಲತಾ ಎಂಬವರು ಅಂಗನವಾಡಿಯನ್ನು ತೆರೆಯಲೆಂದು ಹೋದಾಗ ಯಾರೋ ಕಳ್ಳರು ಅಂಗನವಾಡಿ ಕೇಂದ್ರದ ಬಾಗಿಲಿನ ಬೀಗ ಒಡೆದು ಒಳ ಪ್ರವೇಶಿಸಿ ಒಳಗಿರಿಸಿದ್ದ ಸುಮಾರು ರೂ.2000/- ಮೌಲ್ಯದ ಅನಿಲ ಸಿಲಿಂಡರ್ ಹಾಗೂ ಪೂರಕ ಪೌಷ್ಠಿಕ ಆಹಾರವನ್ನು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ 

ದಿನಾಂಕ 16/07/2018ರಂದು ಕುಶಾಲನಗರ ಬಳಿಯ ರಂಗ ಸಮುದ್ರ ನಿವಾಸಿ ಮುತ್ತಪ್ಪ ಎಂಬವರು ಅವರ ರಿಕ್ಷಾದಲ್ಲಿ ಕುಶಾಲನಗರದ ಐಬಿ ರಸ್ತೆಯಿಂದ ಬಿ.ಎಂ.ರಸ್ತೆಗೆ ಪ್ರವೇಶಿಸುತ್ತಿರುವಾಗ ಕುಶಾಲನಗರದ ಬಸ್ ನಿಲ್ದಾಣದ ಕಡೆಯಿಂದ ಒಂದು ಬೈಕನ್ನು ಅದರ ಸವಾರ ತಿಮ್ಮಯ್ಯ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮುತ್ತಪ್ಪನವರ ರಿಕ್ಷಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಮುತ್ತಪ್ಪನವರು ರಿಕ್ಷಾದಿಂದ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರದಿಂದ ಬಿದ್ದು ವ್ಯಕ್ತಿ ಸಾವು

ದಿನಾಂಕ 16/07/2018ರಂದು ಸುಂಟಿಕೊಪ್ಪ ಬಳಿಯ ಅಂದಗೋವೆಯ ನಿವಾಸಿ ಪಿ.ಎಸ್.ಗಣೇಶ್ ಎಂಬವರು ಅವರ ತೋಟದ ದಾರಿಯಲ್ಲಿದ್ದ ಹಲಸಿನ ಹಣ್ಣಿನ ಮರಕ್ಕೆ ಬಿದಿರಿನ ಏಣಿಯ ಮೂಲಕ ಏರಿ ಹಲಸಿನ ಹಣ್ಣನ್ನು ಕಡಿದು ಕೆಳಕ್ಕೆ ಇಳಿಯುತ್ತಿರುವಾಗ ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಆತ್ಮಹತ್ಯೆ

ದಿನಾಂಕ 16/07/2018ರಂದು ಕುಟ್ಟ ಬಳಿಯ ಪೈತ್ ತೋಟದ ಕಾರ್ಮಿಕ ಮಲ್ಲಿಕಾರ್ಜುನ ಎಂಬವರ ಮಗಳು ಮಾಲ ಎಂಬಾಕೆಯು ಕುಟ್ಟದ ತಂದೆಯ ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮ,ಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತೆ ಮಾಲಳ ಪತಿ ಇತ್ತೀಚೆಗೆ ನಿಧನಹೊಂದಿದ್ದು  ಪತಿಯ ಸಾವಿನ ದುಃಖವನ್ನು ಭರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿದೆ. ಘಟನೆ ಸಂಬಂಧ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.