Crime News

ಅಪರಿಚಿತ ವ್ಯಕ್ತಿ ಮೃತ ದೇಹ ಪತ್ತೆ:

ದಿನಾಂಕ 18-7-2018 ರಂದು ಕುಶಾಲನಗರ ಅರಣ್ಯ ವಲಯದ ಆನೆಕಾಡು ಶಾಖೆಯ ಅರಣ್ಯ ವೀಕ್ಷಕರಾದ ಟಿ.ಕೆ. ದಿನೇಶ್ ರವರು ಅರಣ್ಯ ಗಸ್ತಿನಲ್ಲಿರುವಾಗ್ಗೆ ಬಸವನಳ್ಳಿಯ ಮ್ಯಾಗ್‍ದೋರ್ ಎಸ್ಟೇಟಿನ ಬಳಿ ಮೀಸಲು ಅರಣ್ಯದಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯ ಕೊಳೆತ ಮೃತದೇಹ ಪತ್ತೆಯಾಗಿದ್ದು ಪಕ್ಕದಲ್ಲಿ ಒಂದು ರೌಂಡ್ ಅಪ್ ಕಳೆನಾಶಕದ ಬಾಟಲ್ ಪತ್ತೆಯಾಗಿದ್ದು ಸದರಿ ಅಪರಿಚಿತ ವ್ಯಕ್ತಿ ಕಳೆನಾಶಕವನ್ನು ಕುಡಿದು ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿ ಮಹಿಳೆಗೆ ಕಾರು ಡಿಕ್ಕಿ:

ದಿನಾಂಕ 16-7-2018 ರಂದು ಸಮಯ 11-30 ಗಂಟೆ ಸಮಯದಲ್ಲಿ ವಿರಾಜಪೇಟೆ ನಗರದ ಶಿವಕೇರಿಯಲ್ಲಿ ವಾಸವಾಗಿರುವ ಶ್ರೀಮತಿ ಜವರಮ್ಮ ಎಂಬವರು ವಿರಾಜಪೇಟೆ ಸರಕಾರಿ ಆಸ್ಪತ್ರೆಯಿಂದ ತಮ್ಮ ಮನೆಯ ಕಡೆಗೆ ಕೋರ್ಟ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಕಾರು ಅವರಿಗೆ ಡಿಕ್ಕಯಾಗಿದ್ದು, ಪರಿಣಾಮವಾಗಿ ಸದರಿ ಜವರಮ್ಮನವರು ಕೆಳಗೆ ಬಿದ್ದು ಸೊಂಟಕ್ಕೆ ಪೆಟ್ಟಾಗಿದ್ದು, ಸದರಿ ಅಪಘಾತಪಡಿಸಿದ ಕಾರನ್ನು ಚಾಲಕ ನಿಲ್ಲಿಸದೇ ಸ್ಥಳದಿಂದ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.