Crime News

ಕ್ಷುಲ್ಲಕ ಕಾರಣಕ್ಕೆ ಹಲ್ಲೆ:

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ದೇವಣಗೇರಿ ಗ್ರಾಮದ ಹೆಚ್.ಎ. ಶಾಂತಪ್ಪ ಎಂಬವರು ದಿನಾಂಕ 19-7-2018 ರಂದು ಸಂಜೆ 5-00 ಗಂಟೆಯ ಸಮಯದಲ್ಲಿ ತಮ್ಮ ಮನೆಗೆ ಹೋಗುತ್ತಿದ್ದಾಗ ತಮ್ಮ ಮನೆಯ ಅಂಗಳದಲ್ಲಿ ವಿನು ಎಂಬವರ ತಂಗಿ ಪ್ಲಾಸ್ಟಿಕ್ ಹಾಕಿದ ಬಗ್ಗೆ ಬೈದ ವಿಚಾರದಲ್ಲಿ ಆರೋಪಿ ವಿನು ಶಾಂತಪ್ಪನವರನ್ನು ದೂಡಿ ದೊಣ್ಣೆಯಿಂದ ಹಲ್ಲೆ ಮಾಡಿ ನೋವನ್ನುಂಟುಮಾಡಿದ ಬಗ್ಗೆ ಹೆಚ್.ಎ. ಶಾಂತಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರದಲ್ಲಿ ಪ್ರಕರಣ ದಾಖಲಾಗಿದೆ.

ಮನುಷ್ಯ ಕಾಣೆ:

ಮಡಿಕೇರಿ ನಗರದ ಎಫ್.ಎಂ.ಸಿ. ಕಾಲೇಜು ಹಿಂಭಾಗ, ಮಡಿಕೇರಿ ವಾಸಿ ಶ್ರೀಮತಿ ಸರೋಜಿನಿ ಎಂಬವರ ಪತಿ ಬಿ.ಡಿ.ಗಂಗಾಧರ ಎಂಬವರು ದಿನಾಂಕ 19-7-2018 ರಂದು ಬೆಳಗ್ಗೆ ಮನೆಯಿಂದ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಶ್ರೀಮತಿ ಸರೋಜಿನಿಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದೇವಾಲಯದ ಬಾಗಿಲು ಮುರಿದು ಕಳವು.

ದಿನಾಂಕ 20-7-2018 ರಂದು ರಾತ್ರಿ ಮಡಿಕೇರಿ ನಗರದ ಬ್ರಾಹ್ಮಣದ ಬೀದಿಯಲ್ಲಿರುವ ಆಂಜನೇಯ ದೇವಾಲಯದ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು ದೇವಾಲಯದ ಕಾಣಿಕೆ ಹುಂಡಿಯ ಬೀಗವನ್ನು ಮುರಿದು ರೂ. 15,000 ರಿಂದ 20000 ರೂ ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ್ ಸೈಕಲ್ ಕಳವು:

ಮಡಿಕೇರಿ ನಗರದ ಬ್ರಾಹ್ಮಣದ ಬೀದಿ ನಿವಾಸಿ ದಿ: ಕರಿಶೆಟ್ಟಿ ಎಂಬವರ ಮಗ ಕೆ.ಕೆ. ದಾಮೋದರ ರವರು ದಿನಾಂಕ 20-7-2018 ರಂದು ವ್ಯಾಂಡಮ್ ಎಂಟರ್ ಪ್ರೈಸೆಸ್ ಬಳಿನಿಲ್ಲಿಸಿದ ಅವರ ಬಾಪ್ತು ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.