Crime News

ಹಣದ ವಿಚಾರ ವ್ಯಕ್ತಿ ಮೇಲೆ ಹಲ್ಲೆ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕೋಡ್ಲು ಗ್ರಾಮದ ಶ್ರೀಮತಿ ಪೂವಮ್ಮ ರವರು ತಮ್ಮ ತಂದೆಯ ಪಾಲಿನ ಜಾಗವನ್ನು ಒಂದು ಲಕ್ಷ ರೂ;ಗಳಿಗೆ ಮಾರಾಟ ಮಾಡಿದ್ದು ಅದರಲ್ಲಿ 71 ಸಾವಿರ ರೂಪಾಯಿಗಳನ್ನು ತಮ್ಮ ಸಹೋದರ ಮಂದಣ್ಣನವರಿಗೆ ನೀಡಿದ್ದು, ದಿನಾಂಕ 22-7-2018 ರಂದು ಬೆಳಗ್ಗೆ ಶ್ರೀಮತಿ ಪೂವಮ್ಮನವರು ತಮ್ಮ ಮನೆಯಲ್ಲಿರುವಾಗ್ಗೆ ಆರೋಪಿ ಮಂದಣ್ಣನವರು ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ 1 ಲಕ್ಷದಲ್ಲಿ ಉಳಿದ ಹಣವನ್ನು ನೀಡುವಂತೆ ಜಗಳ ಮಾಡಿ ದೊಣ್ಣೆಯಿಂದ ಶ್ರೀಮತಿ ಪೂವಮ್ಮನವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಲ್ಲಿಸಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ:

ದಿನಾಂಕ 22-7-2018ರಂದು ಥಾಮಸ್ ಡಿಸೋಜಾ ಎಂಬವರು ತಮ್ಮ ಕಾರನ್ನು ಮಡಿಕೇರಿ ನಗರದ ಎಂ.ಎಂ. ವೃತ್ತದಲ್ಲಿ ನಿಲ್ಲಿಸಿದ್ದು ಸದರಿ ಕಾರಿಗೆ ಬಾಲಚಂದ್ರ ಎಂಬವರು ತಮ್ಮ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದಿಸೋಜಾರವರು ನಿಲ್ಲಿಸಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳು ಜಖಂಗೊಂಡಿದ್ದು, ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರುಗಳ ಮುಖಾಮುಖಿ ಅಪಘಾತ:

ದಿನಾಂಕ 22-7-2018 ರಂದು ಮಡಿಕೇರಿ ತಾಲೋಕು ಇಬ್ನಿವಳವಾಡಿ ಗ್ರಾಮದ ನಿವಾಸಿ ಎಂ.ಯು.ಮುತ್ತಪ್ಪ ಎಂಬವರು ತಮ್ಮ ಬಾಪ್ತು ಕಾರಿನಲ್ಲಿ ಸುಂಟಿಕೊಪ್ಪ ಕಡೆಯಿಂದ ಬೋಯಿಕೇರಿಯಲ್ಲಿರುವ ತಮ್ಮ ಮನೆಗೆ ಬರುತ್ತಿರುವಾಗ ಇಬ್ನಿವಳವಾಡಿ ಗ್ರಾಮದ ಕುಶಾಲನಗರ-ಮಡಿಕೇರಿ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎಂ.ಯು. ಮುತ್ತಪ್ಪನವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳು ಜಖಂಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.