Crime News

ಗಾಂಜಾ ಮಾರುತ್ತಿದ್ದ ವ್ಯಕ್ತಿಯ ಬಂಧನ

ವಿರಾಜಪೇಟೆ ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ವಿರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದಿನಾಂಕ 01-08-2018 ರಂದು ವಿರಾಜಪೇಟೆ ನಗರ ಠಾಣಾಧಿಕಾರಿಯವರಿಗೆ ಬಂದ ಮಾಹಿತಿ ಮೇರೆಗೆ ವಿರಾಜಪೇಟೆ ವೃತ್ತದ ವೃತ್ತ ನಿರೀಕ್ಷಕರಾದ ಕುಮಾರ್ ಆರಾಧ್ಯ, ವಿರಾಜಪೇಟೆ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಹಾಗು ಸಿಬ್ಬಂದಿಗಳ ತಂಡ ವಿರಾಜಪೇಟೆ ತಾಲೋಕು ದಂಡಾಧಿಕಾರಿ ಗೋವಿಂದರಾಜು ಹಾಗು ಕಂದಾಯ ನಿರೀಕ್ಷಕರಾದ ಪಳಂಗಪ್ಪನವರೊಂದಿಗೆ  ವಿರಾಜಪೇಟೆ ನಗರದ ಮೀನುಪೇಟೆಯಲ್ಲಿರುವ ಹಿಂದೂ ರುದ್ರಭೂಮಿಯ ಗೇಟಿನ ಮುಂಭಾಗ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವಿರಾಜಪೇಟೆ ಕಲ್ಲುಬಾಣೆಯ ನಿವಾಸಿ ಪ್ರಸ್ತುತ ಕೇರಳ ರಾಜ್ಯದ ಇರಿಟ್ಟಿ ನಗರದಲ್ಲಿ ವಾಸವಾಗಿರುವ ಮೊಹಮ್ಮದ್ ಆಲಿ, ತಂದೆ ಲೇಟ್ ಅಬು, ಪ್ರಾಯ 48 ವರ್ಷ ಎಂಬಾತನನ್ನು ಪತ್ತೆಹಚ್ಚಿ  ಆತನಿಂದ ಅಕ್ರಮವಾಗಿ ಹೊಂದಿದ್ದ ಸುಮಾರು ರೂ.25,000/- ಮೌಲ್ಯದ 1.5 ಕೆ.ಜಿ. ತೂಕದ  ಗಾಂಜಾವನ್ನು ಮತ್ತು ಗಾಂಜಾ ಮಾರಾಟ ಮಾಡಿ ಇಟ್ಟುಕೊಂಡ ನಗದು ಹಣ ರೂ. 1,000/- ಗಳನ್ನು ವಶಪಡಿಸಿಕೊಂಡು ಆತನನ್ನು ಬಂಧನಕ್ಕೊಳಪಡಿಸಿರುತ್ತಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ನಗರ ಠಾಣೆಯಲ್ಲಿ ಮೊಕದ್ದಮೆಯನ್ನು ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.

ಪ್ರಕರಣದಲ್ಲಿ ಬಂಧಿನಾದ ಆರೋಪಿ ಮೊಹಮ್ಮದ್ ಅಲಿಯ ಮೇಲೆ ಈ ಹಿಂದೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಅಕ್ರಮ ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ   ಎನ್.ಡಿ.ಪಿ.ಎಸ್. ಕಾಯ್ದೆಯಡಿಯಲ್ಲಿ 6 ಪ್ರಕರಣಗಳು ದಾಖಲಾಗಿದ್ದು ಈ ಎಲ್ಲಾ ಪ್ರಕರಣಗಳು ವಿರಾಜಪೇಟೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಸುಮನ್ ಡಿ. ಪೆನ್ನೇಕರ್, ಐ.ಪಿ.ಎಸ್. ರವರ ಮಾರ್ಗದರ್ಶದಲ್ಲಿ, ವಿರಾಜಪೇಟೆ ಉಪ ವಿಭಾಗದ ಡಿವೈ.ಎಸ್.ಪಿ. ನಾಗಪ್ಪರವರ ಉಸ್ತುವಾರಿಯಲ್ಲಿ ಕಾಯರ್ಾಚರಣೆ ನಡೆಸಿದ ವಿರಾಜಪೇಟೆ ವೃತ್ತ ನಿರೀಕ್ಷಕ ಕುಮಾರ ಆರಾಧ್ಯರವರ ನೇತೃತ್ವದ ತಂಡದಲ್ಲಿ ವಿರಾಜಪೇಟೆ ನಗರ ಠಾಣೆಯ ಪಿ.ಎಸ್.ಐ. ಸಂತೋಷ್ ಕಶ್ಯಪ್ ಹಾಗು ಸಿಬ್ಬಂದಿಗಳಾದ ಸುಬ್ರಮಣಿ, ಸುನಿಲ್, ರಜನ್ ಕುಮಾರ್, ಸತೀಶ್, ಮುನೀರ್ ಹಾಗು ಚಾಲಕ ಯೋಗೇಶ್ ರವರು ಪಾಗ್ಗೊಂಡಿದ್ದು ತಂಡದ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಸುಮನ್ ಡಿ.ಪೆನ್ನೇಕರ್ ರವರು ಶ್ಲಾಘಿಸಿದ್ದಾರೆ.

ಕಳವು ಪ್ರಕರಣ

ದಿನಾಂಕ 17-07-2017 ರಂದು ಮಡಿಕೇರಿ ನಗರದ ಸಿಎಂಸಿ ಕಾಂಪ್ಲೆಕ್ಸ್ ನಲ್ಲಿರುವ ನಾಚಪ್ಪನವರ ಆಗ್ರೋ ಇನ್ಪುಟ್       ಕನ್ಸ್ ಲ್ಟೆನ್ಸಿ ಅಂಗಡಿಗೆ ಅಪರಿಚಿತರು ಹೋಗಿ 10 ರೂಪಾಯಿಯ ಹೊಸ ನೋಟುಗಳು ಬೇಕು ಎಂದು ಹೇಳಿ ಅಂಗಡಿಯವರಿಗೆ ಅರಿವಿಲ್ಲದಂತೆ 8500 ರೂಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಕಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸ್ಕೂಟರ್ ಕಳವು

ಕುಶಾಲನಗರದ ಹುಲುಗುಂದ ಗ್ರಾಮದ ನಿವಾಸಿಯಾದ ಅಮೀರ ಜಾನ್ಎಂಬುವರು ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ದಿನಾಂಕ 18-07-2018 ರಂದು ಎಂದಿನಂತೆ ಕರ್ತವ್ಯಕ್ಕೆ ಹೋಗುವಾಗ ಕಾರು ನಿಲ್ದಾಣದಲ್ಲಿ ಸ್ಕೂಟರನ್ನು ನಿಲ್ಲಿಸಿ ಹೋಗಿದ್ದು ದಿನಾಂಕ 19-07-2018 ರಂದು ವಾಪಾಸ್ಸು ಬಂದು ನೋಡುವಾಗ ಸ್ಕೂಟರ್ ಕಾಣೆಯಾಗಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅನುಮಾನಾಸ್ಪದ ವ್ಯಕ್ತಿಯ ಬಂಧನ

ದಿನಾಂಕ 30-07-2018 ರಂದು ಕುಶಾಲನಗರ ಗ್ರಾಮಾಂತರ ಠಾಣೆಯ ಸಿಬ್ಬಂದಿಯವರಾದ ದಿವೇಶ್ ಎಂಬುವವರು ಠಾಣಾ ಸರಹದ್ದಿನ ದೊಡ್ಡತ್ತೂರು ಗ್ರಾಮದ ಕಡೆ ರಾತ್ರಿ ಗಸ್ತು ಹೋಗುತ್ತಿರುವಾಗ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಹತ್ತಿರ ಸೋಮವಾರಪೇಟೆಯ ಬೆಟ್ಟದಹಳ್ಳಿ ಗ್ರಾಮದ ಅಭಿಜಿತ್ ಎಂಬುವವರು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದವನ್ನು ವಶಕ್ಕೆ ಪಡೆದುಕೊಂಡು ನೀಡಿದ ಪುಕಾರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಟೋ ರಿಕ್ಷಾಕ್ಕೆ ಬೆಂಕಿ

ಹಳೇ ದ್ವೇಷದಿಂದ ಆಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿ ನಷ್ಟ ಪಡಿಸಿರುವ ಘಟನೆ ಸುಂಟಿಕೊಪ್ಪ ನಗರದಲ್ಲಿ ವರದಿಯಾಗಿದೆ. ದಿನಾಂಕ 30-07-2017 ರಂದು ಸುಂಟಿಕೊಪ್ಪದ ನಿವಾಸಿ ಪ್ರಕಾಶ್ ರವರು ಎಂದಿನಂತೆ ಆಟೋ ರಿಕ್ಷಾವನ್ನು ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದು, ಸಮಯ 1-45 ಎಂ ಗೆ ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ಸುಂಟಿಕೊಪ್ಪನಗರದವರೇ ಆದ ಪ್ರಕಾಶ್ ಮತ್ತು ಪ್ರಸನ್ನ ಎಂಬುವವರು ಬೆಂಕಿಹಚ್ಚಿ ನಷ್ಟ ಪಡಿಸಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.