Crime News

ಏರಟೆಲ್ ಟವರಿನ DG ಆಲ್ಟ್ರಾರೇಟ್ ರೂಟರ್ ಕಳವು:

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಶಿರಂಗಾಲ ಗ್ರಾಮದಲ್ಲಿ ಅಳವಡಿಸಿರುವ ಏರಟೆಲ್ ಟವರಿನ DG ಆಲ್ಟ್ರಾ  ರೇಟ್ ರೂಟರ್ ಅನ್ನು ಯಾರೋ ಕಳ್ಳರು ದಿನಾಂಕ 3-7-2018 ರಂದು ಕಳವು ಮಾಡಿಕೊಂಡು ಹೋಗಿದ್ದು ಈ ಸಂಬಂಧ ಏರಟೆಲ್ ಎಸ್ಟೇಟ್ ಅಧಿಕಾರಿಯವರಾದ ಬಿ.ಎಸ್. ಕೃಷ್ಣಶೆಟ್ಟಿಯವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಾದಚಾರಿಗೆ ಬೈಕ್ ಡಿಕ್ಕಿ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮೇಕೇರಿ ಗ್ರಾಮದ ನಿವಾಸಿ ಕೆ.ಆರ್. ಕಮಲಾಕ್ಷಿ ಎಂಬವರು ದಿನಾಂಕ 1-8-2018 ರಂದು ಮೇಕೇರಿ ಗ್ರಾಮ ಪಂಚಾಯ್ತಿ ಕಛೇರಿಗೆ ಮೇಕೇರಿ ಗ್ರಾಮದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಮೋಟಾರ್ ಸೈಕಲೊಂದು ಅವರಿಗೆ ಡಿಕ್ಕಿಯಾದ ಪರಿಣಾಮವಾಗಿ ಸದರಿಯವರು ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಸ್ವಸ್ಥಗೊಂಡು ಮಹಿಳೆ ಸಾವು:

ಮಡಿಕೇರಿ ತಾಲೋಕು ಕಟ್ಟೆಮಾಡು ಗ್ರಾಮದ ನಿವಾಸಿ ಎಂ.ಜಿ. ಶೇಷಪ್ಪ ಎಂಬವರ ಪತ್ನಿ ಶ್ರೀಮತಿ ಪ್ರಮೀಳ ಎಂಬವರು ದಿನಾಂಕ 1-8-2018 ರಂದು ಸಂಜೆ ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅಸ್ವಸ್ಥಗೊಂಡು ಕೆಳಗೆ ಬಿದ್ದುಹೋಗಿದ್ದು, ನಂತರ ಅವರನ್ನು ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ಸದರಿಯವರು ಚಿಕಿತ್ಸೆವೇಳೆ ಮೃತಪಪಟ್ಟಿದ್ದು ಈ ಸಂಬಂಧ ಎಂ.ಜಿ. ಶೇಷಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನುಷ್ಯ ಕಾಣೆ:

ಮಡಿಕೇರಿ ನಗರದಲ್ಲಿರುವ ಶಕ್ತಿದಾಮ ಕೇಂದ್ರದಲ್ಲಿ ಮದ್ಯವ್ಯಸನಿಯಾಗಿದ್ದ ಯಶವಂತ್ ಎಂಬ ವ್ಯಕ್ತಿ ಚಿಕಿತ್ಸೆಗೆ ದಾಖಲಾಗಿದ್ದು ಸದರಿ ವ್ಯಕ್ತಿ ದಿನಾಂಕ 1-8-2018 ರಂದು ಸಮಯ ಬೆಳಗ್ಗೆ 8-00 ಗಂಟೆಗೆ ಹೂಗಳನ್ನು ತರಲೆಂದು ಕೇಂದ್ರದ ಬಾಗಿಲನ್ನು ತೆರೆದು ಹೊರಗೆ ಹೋಗಿದ್ದು ಮತ್ತೆ ಕೇಂದ್ರಕ್ಕೆ ಬಾರದೆ ಕಾಣೆಯಾಗಿದ್ದು ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.