Crime News

ಜಿಂಕೆಗೆ ವಾಹನ ಡಿಕ್ಕಿ

ದಿನಾಂಕ 03-08-2018 ರಂದು ಅತ್ತೂರು-ಆನೆಕಾಡು ಮೀಸಲು ಅರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 257 ರಲ್ಲಿ ಮಡಿಕೇರಿಯಿಂದ ಕುಶಾಲನಗರದ ಕಡೆಗೆ ಹೋಗುತ್ತಿದ್ದ ಯಾವುದೋ ವಾಹನ ರಸ್ತೆ ದಾಟುತ್ತಿದ್ದ ವನ್ಯಪ್ರಾಣಿಯಾದ ಜಿಂಕೆಗೆ ಡಿಕ್ಕಿಪಡಿಸಿ ಹೋಗಿದ್ದು, ಅಪಘಾತದಂದ ಜಿಂಕೆಯು ಗಾಯಗೊಂಡಿದ್ದು ಈ ಬಗ್ಗೆ ಕುಶಾಲನಗರ ವಲಯದ ಡಿ.ಆರ್.ಎಫ್ ಓ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 29-07-2018 ರಂದು ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಸುಂಟಿಕೊಪ್ಪ ನಗರದಿಂದ ವರದಿಯಾಗಿದೆ. ಸುಂಟಿಕೊಪ್ಪ ನಗರದ ಮದುರಮ್ಮ ಬಡಾವಣೆಯ ನಿವಾಸಿ ಪ್ರಕಾಶರವರು ಮನೆ ಪಕ್ಕ ಇರುವ ಅಂಗಡಿಯಲ್ಲಿ ಜೂಸು ಕುಡಿದು ಖಾಲಿ ಬಾಟಲನ್ನು ಚರಂಡಿ ಬಳಿ ಬಿಸಾಕಿದಾಗ ಆಟೋ ಚಾಲಕನಾದ ಪ್ರಕಾಶ್ @ ಅನಿಯವರ ಕಾಲಿಗೆ ತಾಗಿದ್ದು, ಇದೇ ವಿಚಾರದಲ್ಲಿ ಸಹಚರರೊಂದಿಗೆ ಸೇರಿ ಹಲ್ಲೆ ನಡೆಸಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 03-07-2018 ರಂದು ಕಡಗದಾಳು ಗ್ರಾಮದ ಬಿದ್ದಪ್ಪ @ ಬಿಂದು ರವರು ಮನೆಯಲ್ಲಿರುವಾಗ ಅವರ ತಮ್ಮನಾದ ಮಂಜುಚಂಗಪ್ಪನವರು ಮದ್ಯ ಕುಡಿದು ಅಣ್ಣನೊಂದಿಗೆ ಜಗಳ ಮಾಡಿ ದೊಣ್ಣೆಯಿಂದ ಅಣ್ಣ ಬಿದ್ದಪ್ಪ @ ಬಿಂದುರವರ ತಲೆಗೆ ಹಲ್ಲೆ ನಡೆಸಿ ಗಾಯಪಡಿಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.