Crime News

ಹಳೆ ದ್ವೇಷ ಹಲ್ಲೆ

ದಿನಾಂಕ 04-07-2018 ರಂದು ವಿರಾಜಪೇಟೆ ತಾಲೂಕಿನ ಅವರೆಗುಂದ ಗ್ರಾಮದ ನಿವಾಸಿಯಾದ ಪ್ರಕಾಶ್ ಮತ್ತು ಅದೇ ಗ್ರಾಮದ ನಿವಾಸಿಯಾದ ಪುಷ್ಪ ರೈ @ ಬಾಬಿರವರಿಗೆ ಹಳೇ ದ್ವೇಷದಿಂದ ಜಗಳವಾಗಿ ಹಲ್ಲೆ ನಡೆಸಿಕೊಂಡಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಉಭಯ ಕಡೆಯವರು ನೀಡಿದ ದೂರಿನ ಮೇರೆಗೆ ಎರಡು ಪ್ರಕರಣ ದಾಖಲಾಗಿರುತ್ತದೆ.

ಅನುಮಾನಾಸ್ಪದ ವ್ಯಕ್ತಿಗಳ ಬಂಧನ

ದಿನಾಂಕ 03-08-2018 ರಂದು ವಿರಾಜಪೇಟೆ ನಗರ ಠಾಣೆಯ ಸಿಬ್ಬಂದಿಯವರಾದ ಸುನಿಲ್ ಮತ್ತು ರಜನ್ ಕುಮಾರ್ ಎಂಬುವವರು ಠಾಣಾ ಸರಹದ್ದಿನ ಮಗ್ಗುಲ ಗ್ರಾಮದ ಕಡೆ ರಾತ್ರಿ ಗಸ್ತು ಹೋಗುತ್ತಿರುವಾಗ ಹಾಲಿ ಹಾಕತ್ತೂರು ಗ್ರಾಮದಲ್ಲಿ ವಾಸವಿರುವ ಕೇರಳ ರಾಜ್ಯದ ಕಣ್ಣನೂರಿನ ನಿವಾಸಿಗಳಾದ ಪ್ರವೀಣ್ ಚಂದ್ರನ್ ಮತ್ತು ಅರುಣ್ ಮೋಹನ್ ಎಂಬುವವರು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದವನ್ನು ವಶಕ್ಕೆ ಪಡೆದುಕೊಂಡು ನೀಡಿದ ಪುಕಾರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಚಿನ್ನದ ಸರ ಸುಲಿಗೆ

ದಿನಾಂಕ 04-08-2018 ರಂದು ನೆಲ್ಲಿಹುದಿಕೇರಿ ಗ್ರಾಮದ ಮಾದಪ್ಪ ಕಾಲೋನಿಯ ನಿವಾಸಿಯಾದ ವಿಲ್ಮ ಎಂಬುವವರು ಮನೆಯಲ್ಲಿರುವಾಗ ಮನೆಯ ಹಿಂಬದಿಯಿಂದ ಯಾರೋ ಅಪರಿಚಿತರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮನೆಯೊಳಗಡೆ ನುಗ್ಗಿ ವಿಲ್ಮರವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಣ ಸುಲಿಗೆ ಪ್ರಕರಣ

ದಿನಾಂಕ 04-08-2018 ರಂದು ಜೀವನ್ ಎಂಬುವವರು ಮಡಿಕೇರಿ ನಗರದಲ್ಲಿ ಅಹಿಲಿ ಚಿಟ್ ಫಂಡ್ ಸಂಸ್ಥೆಗೆ ಸೇರಿದ ಸದಸ್ಯರುಗಳ ಹಣವನ್ನು ವಸೂಲಿ ಮಾಡಿ ರಾಣಿಪೇಟೆಯಿಂದ ಕಾನ್ವೆಂಟ್ ಜಂಕ್ಷನ್ ಕಡೆಗೆ ಹೋಗುತ್ತಿರುವಾಗ ಮೂತ್ರ ವಿಸರ್ಜನೆ ಮಾಡುತ್ತಿರುವಾಗ ಯಾರೋ ಬೆನ್ನನ್ನು ತಟ್ಟಿದಾಗ ಹಿಂದಿರುಗಿ ನೋಡಿದಾಗ ಕಣ್ಣಿಗೆ ಕಾರದ ಪುಡಿ ಎರಚಿ ಇಬ್ಬರು ಅಪರಿಚಿರು ಕೈಯಲ್ಲಿದ್ದ 18,850 ರೂ ನಗದು ಹಣ ಇದ್ದ ಬ್ಯಾಗನ್ನು ಕಿತ್ತುಕೊಂಡು ಹೋಗಿದ್ದು, ಈ ಬಗ್ಗೆ ಜೀವನ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.