Crime News

 ಬೀಗ ಮುರಿದು ಕಳ್ಳತನಕ್ಕೆ ಯತ್ನ:

ಸರ್ಕಾರಿ ಶಾಲೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ಮಡಿಕೇರಿ ನಗರದ ಜೂನಿಯರ್ ಕಾಲೇಜು ಹಾಗು ಪಕ್ಕದ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ದಿನಾಂಕ 4-8-2018 ರ ಸಂಜೆ 7-00 ಗಂಟೆ ಮತ್ತು ದಿನಾಂಕ 5-8-2018 ರ ಬೆಳಗ್ಗೆ 8-00 ನಡುವಿನ ಅವಧಿಯಲ್ಲಿ ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜಿನ ಮತ್ತು ಪಕ್ಕದ ಸರ್ಕಾರಿ ಪ್ರಾಥಮಿಕ ಶಾಲೆಯ ಬೀಗವನ್ನು ಯಾರೋ ಕಳ್ಳತು ಮುರಿದು ಒಳ ಪ್ರವೇಶಿಸಿ ದಾಖಲೆಗಳನ್ನು ಚೆಲ್ಲಾಲಿಪ್ಪಿ ಮಾಡಿ ಹೋಗಿದ್ದು ಈ ಸಂಬಂಧ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗುರುರಾಜ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದು ಯುವಕನ ಆತ್ಮಹತ್ಯೆ:

ಜೀವನದಲ್ಲಿ ಜುಗುಪ್ಸೆಗೊಂಡು ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಕೂರು ಹೊಸ್ಕೇರಿ ಗ್ರಾಮದಲ್ಲಿ ನಡೆದಿದೆ. ಮೋಕೂರು ಹೊಸ್ಕೇರಿ ಗ್ರಾಮದ ನಿವಾಸಿ ಮುತ್ತುರಾಮನ್ ಎಂಬವರ ಪುತ್ರ 25 ವರ್ಷ ಪ್ರಾಯದ ಶರವಣ ಎಂಬಾತ ದಿನಾಂಕ 4-8-2018 ರಂದು ರಾತ್ರಿ ತನ್ನ ಕುತ್ತಿಗೆಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಮೃತನ ತಂದೆ ಮುತ್ತುರಾಮನ್ ರವರು ನೀಡಿದ ದೂರಿನ ಮೇರೆಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮುನುಷ್ಯ ಕಾಣೆ:

ಕೆಲಸಕ್ಕೆ ಹೋದ ಯುವಕನೋರ್ವ ಮನೆಗೆ ಬಾರದೆ ಕಾಣೆಯಾದ ಘಟನೆ ಕುಶಾಲನಗರ ಸಮೀಪದ ಕೂಡ್ಲೂರು ಗ್ರಾಮದಿಂದ ವರದಿಯಾಗಿದೆ. ಕೂಡ್ಲೂರು ಗ್ರಾಮದ ನಿವಾಸಿ ಬಿ.ಎಸ್. ಪ್ರಕಾಶ್ ಎಂಬವರ ಮಗ ಪ್ರಾಯ 24 ವರ್ಷದ ಸುನಿಲ್ ಎಂಬವರು ಎಸ್ಎಲ್ಎನ್ ಕಾಫಿ ವರ್ಕ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 01.08.2018 ರಂದು ಬೆಳಿಗ್ಗೆ ಸಮಯ 11.00 ಗಂಟೆಗೆ ತನ್ನ ತಂದೆಯ ಬಾಪ್ತು ಕೆಎ-12-ಎಂಎ-0944 ರ ಸ್ವಿಪ್ಟ್ ಕಾರಿನಲ್ಲಿ ಮನೆಯಿಂದ ಹೋಗಿದ್ದು ಮತ್ತೆ ವಾಪಾಸ್ಸು ಬಾರದೆ ಕಾಣೆಯಾಗಿದ್ದು ಈ ಸಂಬಂಧ ಬಿ.ಎಸ್. ಪ್ರಕಾಶ್‍ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:

ಅಪರಿಚಿತ ವ್ಯಕ್ತಿಯೊಬ್ಬರ ಮೃತ ದೇಹವು ಗೋಣಿಕೊಪ್ಪ ಬಸ್‍ ನಿಲ್ದಾಣದಲ್ಲಿ ಪತ್ತೆಯಾದ ಬಗ್ಗೆ ವರದಿಯಾಗಿದೆ. ದಿನಾಂಕ 5-8-2018 ರಂದು ಗೋಣಿಕೊಪ್ಪ ನಗರದಲ್ಲಿ ವ್ಯಾಪಾರ ವೃತ್ತಿ ಮಾಡಿಕೊಂಡಿರುವ ಬಿ.ವಿ. ರಾಜ ಎಂಬವರು ಗೋಣಿಕೊಪ್ಪ ಬಸ್‍ ನಿಲ್ದಾಣಕ್ಕೆ ಹೋಗಿದ್ದು ಸಾರ್ವಜನಿಕರಿಗೆ ಕೂರಲು ಇರುವ ಕುರ್ಚಿಗಳ ನಡುವೆ ಅಂದಾಜು 75-80 ವರ್ಷ ಪ್ರಾಯದ ಗಂಡಸಿನ ಮೃತದೇಹ ಪತ್ತೆಯಾಗಿದ್ದು ಸದರಿ ವ್ಯಕ್ತಿ ಅಲ್ಲಿ ಬಿಕ್ಷೆ ಬೇಡಿಕೊಂಡು ಸಿಕ್ಕಿದ ಕಡೆಗಳಲ್ಲಿ ಮಲಗುತ್ತಿದ್ದುದಾಗಿ ತಿಳಿದು ಬಂದಿದ್ದು ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣ ಇಬ್ಬರ ಮೇಲೆ ಹಲ್ಲೆ:

ದಿನಾಂಕ 5-8-2018 ರಂದು ಸುಂಟಿಕೊಪ್ಪ ಠಾಣಾ ಸರಹದ್ದಿನ ಸುಂಟಿಕೊಪ್ಪ ಸಂತೆಗೆ ಬಂದ 7ನೇ ಹೊಸಕೋಟೆ ನಿವಾಸಿ ಬಿ.ರವಿ ಹಾಗು ಜನಾರ್ಧನ ಎಂಬವರ ಮೇಲೆ ಸುಂಟಿಕೊಪ್ಪದ ಪುನೀತ್ ಮತ್ತು ಅಶ್ವತ್ ರವರುಗಳು ಹಲ್ಲಿನಿಂದ ಹಲ್ಲೆ ನಡೆಸಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.