Crime News

ಅಪಘಾತ ಪ್ರಕರಣ

ದಿನಾಂಕ 05-08-2018 ರಂದು ಕಂಬಿಬಾಣೆಯ ಸನಿಲ್ ಕುಮಾರ್ ಎಂಬುವವರು ಮೋಟಾರು ಸೈಕಲಿನಲ್ಲಿ ಸುಭಾಷ್ ರವರನ್ನು  ಕರೆದುಕೊಂಡು ಗುಡ್ಡೆಹೊಸೂರು ಕಡೆಯಿಂದ ಬಸವನಹಳ್ಳಿಗೆ ಹೋಗುತ್ತಿರುವಾಗ ಎದುರುಗಡೆ ಹೋಗುತ್ತಿದ್ದ ಸ್ಕೂಟರನ್ನು ಅದರ ಸವಾರ ಬಲಬದಿಗೆ ತಿರುಗಿಸಿದ ಪರಿಣಾಮ ಮೋಟಾರು ಸೈಕಲಿಗೆ ಡಿಕ್ಕಿಯಾಗಿ ಎರಡೂ ವಾಹನದವರು ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬರು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಪೊನ್ನಂಪೇಟೆಯ ನಿಸರ್ಗ ನಗರದಲ್ಲಿ ವರದಿಯಾಗಿದೆ. ಪೊನ್ನಂಪೇಟೆಯ ನಿಸರ್ಗ ನಗರದ ನಿವಾಸಿ ಮಾಸ್ತಿಗೌಡ ಎಂಬುವವರು ದಿನಾಂಕ 02-08-2018 ರಂದು ಕಾಣೆಯಾಗಿದ್ದವರು ಜೀವನದಲ್ಲಿ ಜುಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 05-08-2018 ರಂದು ಹಚ್ಚಿನಾಡು ಗ್ರಾಮದ ಯಡೂರುವಿನ ನಿವಾಸಿಯಾದ ಮಂಜು ಎಂಬುವವರಿಗೆ ಪಕ್ಕದ ನಿವಾಸಿಯಾದ ಕರಿಯಾ, ಅಯ್ಯಪ್ಪ ಹಾಗೂ ಇನ್ನಿಬ್ಬರು ಸೇರಿ  ಹಲ್ಲೆ ನಡೆಸಿದ್ದು ಗಾಯಗೊಂಡ ಮಂಜುರವರು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಮಂಜುರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಶೇಖರಣೆ

ದಿನಾಂಕ 06-08-2018 ರಂದು ಸಿದ್ದಾಪುರ ಠಾಣಾ ಸರಹದ್ದಿಗೆ ಸೇರಿದ ಬಾಡಗ ಬಾಣಂಗಾಲ ಗ್ರಾಮದಲ್ಲಿ ಹರಿಯುವ ಕಿರು ತೋಡಿನಿಂದ ಯಾರೋ ಅಕ್ರಮವಾಗಿ ಮರಳು ತೆಗೆದು ಶೇಖರಿಸಿಟ್ಟಿರುವುದಾಗಿ ಬಂದ ಮಾಹಿತಿ ಮೇರೆಗೆ ಪರಿಶೀಲಿಸಲಾಗಿ ಸುಮಾರು ಒಂದು ಪಿಕ್ ಅಪ್ ನಷ್ಟು ಮರಳು ಕಂಡು ಬಂದಿದ್ದು, ಮರಳನ್ನು ವಶಕ್ಕೆ ಪಡೆದುಕೊಂಡು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.