Crime News

ಕಾರು-ಮಾರುತಿ ವ್ಯಾನ್ ಅಪಘಾತ:

ಕಾರು ಹಾಗು ಮಾರುತಿ ವ್ಯಾನ್ ನಡುವೆ ಅಪಘಾತ ಸಂಭವಿಸಿ ಎರಡೂ ವಾಹನಗಳು ಜಖಂಗೊಂಡ ಘಟನೆ ಮಡಿಕೇರಿ ಸಮಿಪದ ದೇವರಕೊಲ್ಲಿ ಗ್ರಾಮದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಇಲವಾಲ ನಿವಾಸಿ ಎಸ್. ಮೋಹನಕುಮಾರ ಎಂಬವರು ದಿನಾಂಕ 11-8-2018 ರಂದು ತಮ್ಮ ಬಾಪ್ತು ಕಾರಿನಲ್ಲಿ ಇಲವಾಲದಿಂದ ಮಡಿಕೇರಿ ಮಾರ್ಗವಾಗಿ ಉಜಿರೆಗೆ ಹೋಗುತ್ತಿದ್ದಾಗ ಮಡಿಕೇರಿ ಸಮೀಪಕ ದೇವರಕೊಲ್ಲಿ ಎಂಬಲ್ಲಿ ಎದುರುಗಡೆಯಿಂದ ಬಂದ ಮಾರುತಿ ವ್ಯಾನಿನ ಚಾಲಕ ಸದರಿ ವ್ಯಾನನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿ ಮುಂದೆ ಹೋಗುತ್ತಿದ್ದ ಲಾರಿಯೊಂದನ್ನು ಒವರ್‍ಟೇಕ್ ಮಾಡಿಕೊಂಡು ಬಂದು ಎನ್. ಮೋಹನ್ ಕುಮಾರ್‍ರವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು, ಮಾರುತಿ ವ್ಯಾನಿನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಸಂಬಂಧ ಕಾರಿನ ಚಾಲಕ ಎಸ್. ಮೋಹನ್‍ಕುಮಾರ್‍ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಅಪಘಾತ.

ಕಾರೊಂದು ಚಾಲಕನ ನಿರ್ಲಕ್ಷ್ಯದಿಂದ ರಸ್ತೆ ಬದಿ ಮಗುಚಿಬಿದ್ದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಬೆಟ್ಟಗೇರಿ ಎಂಬಲ್ಲಿ ನಡೆದಿದೆ. ದಿನಾಂಕ 11-8-2018 ರಂದು ಜೇವರ್ಗಿ ತಾಲೋಕಿನ ಹಿಪ್ಪರಗಾ ಗ್ರಾಮದ ನಿವಾಸಿ ಎಸ್. ವಿಶ್ವನಾಥ ಎಂಬವರು ತನ್ನ ಸ್ನೇಹಿತರೊಂದಿಗೆ ಮಡಿಕೇರಿಗೆ ತಮ್ಮ ಬಾಪ್ತು ಕಾರಿನಲ್ಲಿ ಪ್ರವಾಸ ಬಂದಿದ್ದು ದಿನಾಂಕ 12-8-2018 ರಂದು  ಭಾಗಮಂಡಲಕ್ಕೆ ಹೋಗಿ ಮಡಿಕೇರಿ ಕಡೆಗೆ ಬರುತ್ತಿದ್ದಾಗ ಚಾಲಕ ನಿರಂಜನ್‍ರೆಡ್ಡಿ ರವರು ಸದರಿ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ  ಬೆಟ್ಟಗೇರಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಕಾರು ಮಗುಚಿ ಬಿದ್ದು ಕಾರು ಜಖಂಗೊಂಡು ಕಾರಿನಲ್ಲಿ ಸಂಚರಿಸುತ್ತಿದ್ದವರು ಅಪಾಯದಿಂದ ಪಾರಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಗದ ವಿಚಾರದಲ್ಲಿ ಜಗಳ

ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ತಣ್ಣಿಮಾನಿ ಗ್ರಾಮದ ನಿವಾಸಿ ಎಸ್.ಎಸ್. ಮೋಹನ್ ಹಾಗು ಅವರ ಮನೆಯವರೇ ಆದ ಸೂರ್ತಲೆ ಹರೀಶ್ @ ಕಾಶಿ ಎಂಬವರ ನಡುವೆ  ದಿನಾಂಕ 12-8-2018 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಅವರ ಗದ್ದೆಯಲ್ಲಿ ಬೇಲಿಯ ವಿಚಾರದಲ್ಲಿ ಜಗಳವಾಗಿ  ಪಪರಸ್ಪರ ಅವಾಚ್ಯವಾಗಿ ಬೈದಾಡಿಕೊಂಡು ಹಲ್ಲೆ ಮಾಡಿದ್ದು  ನಂತರ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದು ನಡೆದಿದ್ದು  ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರುಗಳನ್ನು ನೀಡಿದ್ದು ಅದರಂತೆ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅನಾಥ ವ್ಯಕ್ತಿ ಸಾವು:

ಶನಿವಾರಸಂತೆ ಠಾಣಾ ಸರಹದ್ದಿನ ಕೊಡ್ಲಿಪೇಟೆ ಟೌನ್‍ನಲ್ಲಿ ಕೆಲವು ದಿನಗಳಿಂದ ರವಿ ಎಂಬ ವ್ಯಕ್ತಿ ಬಂದು ಕೂಲಿ ಕೆಲಸವನ್ನು ಮಾಡಿಕೊಂಡಿದ್ದು ಆತನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ಇದ್ದು, ದಿನಾಂಕ 6-7-2018 ರಂದು ನಿಶಕ್ತನಾಗಿ ಬಿದ್ದಿದ್ದ ಆತನನ್ನು ಕೊಡ್ಲಿಪೇಟೆ ಘಟಕದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಡಿ.ಪಿ. ಭೂಪಾಲ್ ರವರು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಸದರಿ ವ್ಯಕ್ತಿ ದಿನಾಂಕ 12-8-2018 ರಂದು ಮೃತಪಟ್ಟಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.