Crime News

ಮಹಿಳೆ ಕಾಣೆ:

ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಕುಂದ ಈಚೂರು ಗ್ರಾಮದ ಎ.ಕೆ. ನಾಚಪ್ಪ ಎಂಬವರ ಪತ್ನಿ ಶ್ರೀಮತಿ ಲೀಲಾವತಿ ಎಂಬವರು ದಿನಾಂಕ 18-8-2018 ರಂದು ರಾತ್ರಿ ಮನೆಯಿಂದ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು ಎ.ಕೆ. ನಾಚಪ್ಪನವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ಕಾಣೆ:

ಸೋಮವಾರಪೇಟೆ ಠಾಣೆ ಸರಹದ್ದಿನ ಮೂವತ್ತೊಕ್ಲು ಗ್ರಾಮದ ನಿವಾಸಿ ಮುಕ್ಕಾಟಿರ ಸಾಬು ಉತ್ತಪ್ಪ ಎಂಬವರು ತಮ್ಮ ವಾಸದ ಮನೆಯಲ್ಲಿದ್ದು ಆ ಸಂದರ್ಭದಲ್ಲಿ ನಡೆದ ಮಳೆ ಮತ್ತು ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡಿದ್ದು ದಿನಾಂಕ 16-8-2018 ರಿಂದ ಸದರಿಯವರು ಕಾಣೆಯಾಗಿರುತ್ತಾರೆಂದು  ಕಾಣೆಯಾದವರ ಬಾವ ಪಿ.ಎ. ಚಿಣ್ಣಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ:

ಮಡಿಕೇರಿ ನಗರದ ಸಂಪಿಗೆಕಟ್ಟೆ ಯಲ್ಲಿ ವಾಸವಿರುವ ಎನ್.ಎ.ರವಿ ಎಂಬವರು ದಿನಾಂಕ 19-8-2018 ರಂದು ಕರ್ಣಂಗೇರಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ರೇವತಿ ಮತ್ತು ಇತರರು ರಾಜೇಶ್ವರಿನಗರದ ಮುಖ್ಯ ರಸ್ತೆಯ ಮದ್ಯದಲ್ಲಿ ಕಾರನ್ನು ನಿಲ್ಲಿಸಿಕೊಂಡಿದ್ದು ಅದನ್ನು ವಿಚಾರಿಸಿದ ವಿಚಾರದಲ್ಲಿ  ಸದರಿ ರೇವರಿಯವರು  ಎನ್.ಎ. ರವಿ ರವರನ್ನು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಬೈಕಿಗೆ ಆಟೋ ಡಿಕ್ಕಿ:

ಸೋಮವಾರಪೇಟೆ ತಾಲೋಕು ತ್ಯಾಗತ್ತೂರು ಗ್ರಾಮದ ನಿವಾಸಿ ಸತೀಶ್ ಎಂಬವರು ದಿನಾಂಕ 20-8-2018 ರಂದು ತಮ್ಮ ಮೋಟಾರ್ ಸೈಕಲಿನಲ್ಲಿ ಸಮೀರ್ ಎಂಬವರೊಂದಿಗೆ ತ್ಯಾಗತ್ತೂರು ಗ್ರಾಮದ ಕಡೆಯಿಂದ ಅಭ್ಯತ್‍ಮಂಗಲ ಕಡೆಗೆ ಹೋಗುತ್ತಿದ್ದಾಗ ಅಭ್ಯತ್‍ಮಂಗಲ ಜಂಕ್ಚನ್‍ನಲ್ಲಿ ಎದುರುಗಡೆಯಿಂದ ಬಂದ ಆಟೋ ರಿಕ್ಷಾವನ್ನು ಅದರ ಚಾಲಕ ಅತೀ ವೇಗ ಮತ್ತು ದುಡುಕುತನದಿಂದ ಚಲಾಯಿಸಿಕೊಂಡು ಬಂದು ಸತೀಶ್ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಮೋಟಾರ್ ಸೈಕಲ್ ರಸ್ತೆಯ ಮೇಲೆ ಬಿದ್ದು ಸವಾರ ಸತೀಶ ಹಾಗು ಹಿಂಬದಿ ಸವಾರ ಸಮೀರ್ ರವರುಗಳಿಗೆ ಗಾಯಗಳಾಗಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.