Crime News

ಬಸ್ಸಿನಿಂದ ಬಿದ್ದು ವ್ಯಕ್ತಿಗೆ ಗಾಯ

ದಿನಾಂಕ 20-08-2018 ರಂದು ಪೊನ್ನಂಪೇಟೆಯ ಹಳ್ಳಿಗಟ್ಟು ಗ್ರಾಮದ ನಿವಾಸಿಯಾದ  ಬೋಪಣ್ಣ ಎಂಬುವವರು ಶಿವ ಲೈನ್ಸ್ ಎಂಬ ಖಾಸಗಿ ಬಸ್ಸಿನಲ್ಲಿ ವಿರಾಜಪೇಟೆಯಿಂದ ಗೋಣಿಕೊಪ್ಪಲುವಿಗೆ ಹೋಗುತ್ತಿರುವಾಗ ಕೊಳ್ತೋಡು ಬೈಗೋಡು ಎಂಬಲ್ಲಿಗೆ ತಲುಪುವಾಗ ಬಸ್ಸಿನ ಚಾಲಕ ಬಸ್ಸನ್ನು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು, ಬಸ್ಸಿನ ನಿರ್ವಾಹಕ ಹಿಂಬಾಗದ ಡೋರನ್ನು ಹಾಕದೇ ಇದ್ದುದ್ದರಿಂದ ಹಿಂಭಾಗದ ಡೋರಿನಿಂದ ಬೋಪಣ್ಣನವರು ಕೆಳಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 20-08-2018 ರಂದು ಸೋಮವಾರಪೇಟೆ ತಾಲೂಕಿನ ಹಾನಗಲ್ ಗ್ರಾಮದ ನಿವಾಸಿಯಾದ ದರ್ಶನ್ ಕುಮಾರ್ ಎಂಬುವವರು ಮಲಗುವ ಕೋಣೆಯ ಹಾಸಿಗೆಯ ಮೇಲೆ ಇಟ್ಟಿದ್ದ ಮೊಬೈಲನ್ನು ಪಕ್ಕದ ಮನೆಯ ನಿವಾಸಿಗಳಾದ ರಾಜು ಮತ್ತು ಜಾನಕಿಯವರು ಸೇರಿ ಕಳವು ಮಾಡಿದ್ದು, ವಿಚಾರಿಸಿದಾಗ ಇಬ್ಬರೂ ಸೇರಿ ದರ್ಶನ್ ಕುಮಾರ್ ರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.