Crime News

ಕ್ಷುಲ್ಲಕ ಕಾರಣ ಹಲ್ಲೆ:

ವಿರಾಜಪೇಟೆ ನಗರ ಪೊಲೀಸ್ ಠಾಣಾ ಸರಹದ್ದಿನ ಪೆರುಂಬಾಡಿ ಗ್ರಾಮದಲ್ಲಿ ವಾಸವಾಗಿರುವ ಜಿ.ಕೆ. ಸುರೇಶ್ ರವರು ದಿನಾಂಕ 21-8-2018 ರಂದು ರಾತ್ರಿ ಮನೆಯಲ್ಲಿರುವಾಗ್ಗೆ ಅವರ ಮನೆಯ ಪಕ್ಕದ ನಿವಾಸಿ ಚಂದ್ರಬೋಸ್ ಎಂಬವರು ಕುಡಿದು ಗಲಾಟೆ ಮಾಡಿದ್ದು ಇದನ್ನು ವಿಚಾರಿಸಿದ ಕಾರಣಕ್ಕೆ ಸದರಿ ಚಂದ್ರಬೋಸ್  ಜಿ.ಕೆ. ಸುರೇಶ್ ರವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಅಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀಗ ಮುರಿದು ನಗನಾಣ್ಯ ಕಳವು:

ಜಿಲ್ಲೆಯಲ್ಲಿ ದಿನಾಂಕ 16-8-2018 ರಿಂದ ಸುರಿದ ಭಾರಿ ಮಳೆಯ ಸಂದರ್ಭದಲ್ಲಿ ಸೋಮವಾರಪೇಟೆ ತಾಲೋಕು ಹಟ್ಟಿಹೊಳೆ ನಿವಾಸಿ ಪೌಲಿನ ಡಿ’ಸೋಜ ರವರು ಹಟ್ಟಿಹೊಳೆಯಲ್ಲಿರುವ ತಮ್ಮ ಮನೆ ಮತ್ತು ಹೋಟೇಲಿಗೆ ಬೀಗ ಹಾಕಿ Rehabilitation ಕೇಂದ್ರಕ್ಕೆ ಬಂದು ನೆಲೆಸಿದ್ದು, ದಿನಾಂಕ 22-8-2018 ರಂದು ಮತ್ತೆ ಹಟ್ಟಿಹೊಳೆಯಲ್ಲಿರುವ ತಮ್ಮ ಮನೆಗೆ ಹೋದಾಗ ತಮ್ಮ ಹೊಟೇಲಿನ ಹಿಂಭಾಗದ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಅದರ ಮೂಲಕ ಮನೆಯೊಳಗೆ ನುಗ್ಗಿ ಮನೆಯಿಂದ 13 ಗ್ರಾಂ ತೂಕದ ಚಿನ್ನಾಭರಣ ಮತ್ತು 4,000/- ರೂ. ನಗದನ್ನು ಕಳ್ಳತನ ಮಾಡಿಕೊಂಡಿ ಹೋಗಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸು ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಉದಯಗಿರಿ ಮಕ್ಕಂದೂರು ಗ್ರಾಮದ ಒ.ಬಿ. ಶಿವರಾಂರವರು ತಮ್ಮ ಪತ್ನಿ ತಾಯಿ ಸೇರಿ ದಿನಾಂಕ 15-8-2018 ರಂದು ಕಾಲೂರು ಗ್ರಾಮಕ್ಕೆ ತನ್ನ ಪತ್ನಿಯ ತವರು ಮನೆಗೆ ಹೋಗಿದ್ದು ಒ.ಬಿ. ಶಿವರಾಂರವರ ತಂದೆ ಒ.ಕೆ. ಬಾಬು ರವರು ಒಬ್ಬರೇ ಮನೆಯಲ್ಲಿದ್ದು ದಿನಾಂಕ 16-8-2018 ರಂದು ಸುರಿದ ಬಾರಿ ಮಳೆಗೆ ಮಕ್ಕಂದೂರಿನಲ್ಲಿದ್ದ ಮನೆಗೆ ತೀವ್ರವಾಗಿ ಹಾನಿಯಾಗಿದ್ದು ದಿನಾಂಕ 22-8-2018 ರಂದು ಒ.ಬಿ. ಶಿವರಾಂರವರು ತಮ್ಮ ಮನೆ ಮಕ್ಕಂದೂರಿಗೆ ಹೋಗಿ ನೋಡಿದಾಗ ಮನೆ ಸಂಪೂರ್ಣ ಬಿದ್ದುಹೋಗಿದ್ದು ಕಂಡು ಬಂದಿದ್ದು ಒ.ಕೆ. ಬಾಬುರವರು ಕಾಣೆಯಾಗಿರುವುದು ತಿಳಿದು ಬಂದಿದ್ದು, ಈ ಸಂಬಂಧ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.