Crime News

ವಾಹನ ಅಪಘಾತ  

ದಿನಾಂಕ 24-08-2018 ರಂದು ಬಲ್ಲಮಾವಟಿಯ ನೇತಾಜಿ ಪ್ರೌಢ ಶಾಲೆಗೆ ಸೇರಿದ ಬಸ್ಸಿನ ಚಾಲಕ ನಂದೀಶರವರು ಮಕ್ಕಳನ್ನು ಬಿಟ್ಟು ವಾಪಾಸ್ಸು ಹೋಗುತ್ತಿರುವಾಗ ಭಾಗಮಂಡಲ ಕಡೆಯಿಂದ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಬಸ್ಸಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಸ್ಸು ಹಾಗೂ ಕಾರು ಜಖಂಗೊಂಡಿದ್ದು ಕಾರಿನ ಚಾಲಕ ಹಾಗೂ ಕಾರಿನಲ್ಲಿದ್ದವರಿಗೆ ಗಾಯವಾಗಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ವ್ಯಾನು ಡಿಕ್ಕಿ

ದಿನಾಂಕ 24-08-2018 ರಂದು ಮಡಿಕೇರಿ ನಗರದ ನಿವಾಸಿ ರಾಜ @ ಈರಪ್ಪರವರು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಮಡಿಕೇರಿ ಮೈಸೂರು ರಸ್ತೆಯ ಈಸ್ಟ್ ಎಂಡ್ ಪೆಟ್ರೋಲ್ ಬಂಕ್ ಹತ್ತಿರ ತಲುಪುವಾಗ ಮಾರುತಿ ಓಮಿನಿ ವ್ಯಾನನ್ನು ಅದರ ಚಾಲಕ ಕಟ್ಟೆಮಾಡುವಿನ ನಿವಾಸಿ ಹರೀಶ ಎಂಬುವವರು  ಅಜಾಗರೂಕತೆಯಿಂದ ಚಾಲನೆ ಮಾಡಿ ರಾಜ @ ಈರಪ್ಪರವರಿಗೆ ಡಿಕ್ಕಿಪಡಿಸಿ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೀಪು ಅಪಘಾತ

ದಿನಾಂಕ 24-08-2018 ರಂದು ಸೋಮವಾರಪೇಟೆಯ ಕುಸುಬೂರು ಗ್ರಾಮದ ನಿವಾಸಿಗಳಾದ ವಿನ್ಸೆಂಟ್, ನಾಗಣ್ಣ ದೊರೆಸ್ವಾಮಿ, ಲಕ್ಷ್ಮಿ, ಕವಿತರವರು ಕಿಬ್ಬೆಟ್ಟ ಗ್ರಾಮದ ಶಾಂತ ಕುಮಾರ್ ರವರ ಕಾಫಿ ತೋಟಕ್ಕೆ ಜೀಪಿನಲ್ಲಿ ಕೆಲಸಕ್ಕೆ ಹೋಗಿದ್ದವರು ಕೆಲಸ ಮುಗಿಸಿಕೊಂಡು ಜೀಪಿನಲ್ಲಿ ವಾಪಾಸ್ಸು ಬರುತ್ತಿರುವಾಗ ಕೋವರ್ ಕೊಲ್ಲಿ ಎಂಬಲ್ಲಿಗೆ ತಲುಪುವಾಗ ಚಾಲಕ ನಂದರವರು ಅಜಾಗರೂಕತೆಯಿಂದ ಚಾಲನೆ ಮಾಡಿ ನಿಯಂತ್ರಣ ತಪ್ಪಿ ತೋಟದೊಳಗೆ ಬಿದ್ದ ಪರಿಣಾಮ ಎಲ್ಲರಿಗೂ  ಗಾಯಗಳಾಗಿದ್ದು ಈ ಬಗ್ಗೆ ಸೋಮವಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.