Crime News

ಆಸ್ತಿ ವಿಚಾರದಲ್ಲಿ ಹಲ್ಲೆ

ದಿನಾಂಕ 24-08-2018 ರಂದು ಗರಗಂದೂರು ಗ್ರಾಮದ ಸಂತು ಎಂಬುವವರು ವಿನುರವರೊಂದಿಗೆ ಹೊಸತೋಟಕ್ಕೆ ಹೋಗುತ್ತಿರುವಾಗ ಅದೇ ಗ್ರಾಮದವರಾದ ಅಣ್ಣಯ್ಯ, ರಾಜು ಮತ್ತು ಮಂಜುರವರು ಆಸ್ತಿ ವಿಚಾರದಲ್ಲಿ ಜಗಳ ಮಾಡಿ ಇಬ್ಬರ ಮೇಲೆ  ಹಲ್ಲೆ ನಡೆಸಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕೃತಿ ವಿಕೋಪದಲ್ಲಿ ಕಾಣೆಯಾದವರ ಶವ ಪತ್ತೆ

ದಿನಾಂಕ 17-08-2018 ರಂದು ಸುರಿದ ಬಾರೀ ಮಳೆ ಗಾಳಿಗೆ, ಹಟ್ಟಿಹೊಳೆ, ಉದಯಗಿರಿ ಮತ್ತು ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ಭೂಕುಸಿತ ಉಂಟಾಗಿ ಕಾಣೆಯಾಗಿದ್ದ  ಪ್ರಾನ್ಸಿಸ್ ಮೊಂತೆರೋ, ಬಾಬು ಮತ್ತು ಚಂದ್ರರವರ ಶವವವು ದಿನಾಂಕ 25-08-2018 ರಂದು ಪತ್ತೆಯಾಗಿರುತ್ತದೆ.

ವ್ಯಕ್ತಿ ನಾಪತ್ತೆ

ದಿನಾಂಕ 20-08-2018 ರಂದು ರಂಗಸಮುದ್ರ ಗ್ರಾಮದ ನಿವಾಸಿಯಾದ ಲಕ್ಷ್ಮಯ್ಯ ಎಂಬುವವರು ಮನೆಯಿಂದ ಹೋದವರು ಮನೆಗೆ ವಾಪಾಸ್ಸು ಬಾರದೇ ಇದ್ದುದ್ದರಿಂದ ಪತ್ನಿ ರಾಧರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಬೈಕ್ ಡಿಕ್ಕಿ

ದಿನಾಂಕ 25-08-2018 ರಂದು ಕುಶಾಲನಗರದ ಬಸವನಹಳ್ಳಿ ಎಂಬಲ್ಲಿ ರಸ್ತೆ ಬದಿಯಲ್ಲಿ ಬಸವನಹಳ್ಳಿ ನಿವಾಸಿ ಮಣಿ ಎಂಬುವವರು ನಡೆದುಕೊಂಡು ಹೋಗುತ್ತಿರುವಾಗ ಕುಶಾಲನಗರದ ಕಡೆಯಿಂದ ಪ್ರವೀಣ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಹೋಗಿ ನಡೆದುಕೊಂಡು ಹೋಗುತ್ತಿದ್ದ ಮಣಿಯವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.