Crime News

ಬೆಂಕಿ ತಗುಲಿ ವ್ಯಕ್ತಿ ಸಾವು:

ವಿರಾಜಪೇಟೆ ತಾಲೋಕು ಅತ್ತೂರು ಗ್ರಾಮದ ನಿವಾಸಿ ಶ್ರೀಮತಿ ಕಾವೇರಿ ಎಂಬವರ ಗಂಡ ಶೇಖರ ಎಂಬವರು ದಿನಾಂಕ 25-8-2018 ರಂದು ರಾತ್ರಿ ದೀಪ ಹಚ್ಚುವ ಸಲುವಾಗಿ ಸೀಮೆಣ್ಣೆ ಡಬ್ಬದ ಮುಚ್ಚಳವನ್ನು ತೆರೆದು ದೀಪ ಹಚ್ಚುವ ಸಂದರ್ಭದಲ್ಲಿ ಅಕಸ್ಮಿಕವಾಗಿ ಬೆಂಕಿ ತಗುಲಿ ಮೈ ಸುಟ್ಟು ಹೋಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸದರಿ ಶೇಖರರವರು ಮೃತಪಟ್ಟಿದ್ದು ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

ಶನಿವಾರಸಂತೆ ಠಾಣೆ ಸರಹದ್ದಿನ ಒಡೆಯನಪುರ ಗ್ರಾಮದ ನಿವಾಸಿಎ.ಸಿ.ಗಿರೀಶ ಎಂಬವರು ದಿನಾಂಕ 25-8-2018 ರಂದು ತಮ್ಮ ಮನೆಯಿಂದ ಅತ್ತೆಯ ಮನೆಗೆ ಹೋಗುತ್ತಿದ್ದಾಗ ಯತೀಶ ಮತ್ತು ಪ್ರಕಾಶ ಎಂಬವರು ಅವರ ದಾರಿ ತಡೆದು ಹಣದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿರುತ್ತಾರೆಂದು ಎ.ಸಿ. ಗಿರೀಶ ರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.