Crime News

ಚಿನ್ನಾಭರಣ ಕಳವು:

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಡಾವು ಕೊಯಿನಾಡು ಗ್ರಾಮದಲ್ಲಿ ವಾಸವಾಗಿರುವ ಲತಾ ಎಂಬವರ ಮನೆಯಲ್ಲಿ ಅವರ ಅತ್ತಿಗೆಯಾದ ಶ್ರೀಮತಿ ಜಯ ಯಾನೆ ಜಯಂತಿ ಎಂಬವರು ಕೆಲವು ಸಮಯದಿಂದ ವಾಸವಾಗಿದ್ದು, ಲತಾರವರು ತಮ್ಮ ಮನೆಯಲ್ಲಿ ಪೆಟ್ಟಿಗೆಯೊಂದರಲ್ಲಿ ಒಂದು ಚಿನ್ನದ ಉಂಗುರ ಮತ್ತು ಓಲೆಯನ್ನು ಇಟ್ಟಿದ್ದು ದಿನಾಂಕ 28-8-2018 ರಂದು ನೋಡಿದಾಗ ಸದರಿ ಚಿನ್ನದ ಆಭರಣಗಳು ಕಳ್ಳತನವಾಗಿರುವುದು ಕಂಡುಬಂದಿದ್ದು,  ಸದರಿ ಲತಾರವರ ಮನೆಯಲ್ಲಿ ಇದ್ದ ಅವರ ಅತ್ತಿಗೆ ಶ್ರೀಮತಿ ಜನ ಯಾನೆ ಜಯಂತಿರವರು ಸದರಿ ಚಿನ್ನದ ಆರಭಣಗಳನ್ನು ಕಳ್ಳತನ ಮಾಡಿರುವ ಸಂಶಯವಿರುವುದಾಗಿ ಲತಾರವರ ಅಣ್ಣ ಪಿ.ಎಂ. ಬಾಬುರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗುಡ್ಡಕುಸಿತ ವೇಳೆ ಕಾಣೆಯಾಗಿದ್ದ ವ್ಯಕ್ತಿಯ ಶವ ಪತ್ತೆ:

ಮಡಿಕೇರಿ ತಾಲೋಕು ಕಾಟಕೇರಿ ಗ್ರಾಮದಲ್ಲಿ ಗಿಲ್ಬರ್ಟ್ ರವರು ತಮ್ಮ ಸಂಸಾರದೊಂದಿಗೆ ವಾಸವಾಗಿದ್ದು ಜಿಲ್ಲೆಯಲ್ಲಿ ದಿನಾಂಕ 16-8-2018 ರಂದು ಸುರಿದ ಭಾರೀ ಮಳೆಯ ಸಂದರ್ಭದಲ್ಲಿ  ಮಡಿಕೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದ್ದು, ಗಿಲ್ಬರ್ಟ್‍ರವರು ವಾಸವಾಗಿರುವ ಪ್ರದೇಶದಲ್ಲಿಯೂ ಭೂಕುಸಸಿತ ಉಂಟಾದ ಸಂದರ್ಭದಲ್ಲಿ ಅವರು ಕಾಣೆಯಾಗಿದ್ದು, ದಿನಾಂಕ 29-8-2018 ರಂದು ಪೊಲೀಸ್ ಹಾಗು ಸಾರ್ವಜನಿಕರು ಪತ್ತೆಕಾರ್ಯ ನಡೆಸಿದ ಸಂದರ್ಭದಲ್ಲಿ ಸದರಿ ಗಿಲ್ಬರ್ಟ್ ರವರ ಮೃತ ದೇಹವು ಸಿಕ್ಕಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.

ಮನುಷ್ಯ ಕಾಣೆ:

ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಮುತ್ತಪ್ಪ ದೇವಾಲಯದ ಬಳಿ ವಾಸವಾಗಿರುವ ಬಿ.ಜಿ. ರಮೇಶ್ ರವರ ತಂದೆ ಬಿ.ಪಿ. ಗಣಪತಿ ಎಂಬವರು ದಿನಾಂಕ 29-8-2018 ರಂದು ಬೆಳಗ್ಗೆ ಮನೆಯಿಂದ ಯಾರಿಗೂ ಹೇಳದೆ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಸಂಬಂಧ ಬಿ.ಜಿ. ರಮೇಶ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಕುಶಾಲನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೊಳ್ಳೂರು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ದಿವ್ಯಾ ಡಿಸೋಜಾ ಎಂಬವರ ಪತಿ ಕಾಶ್ಮೀರ್ ಡಿಸೋಜಾ ಎಂಬವರು ದಿನಾಂಕ 28-8-2018 ರಂದು ರಾತ್ರಿ ತಮ್ಮ ವಾಸದ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಮೃತರ ಪತ್ನಿ ಶ್ರೀಮತಿ ದಿವ್ಯಾ ಡಿಸೋಜಾ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಯಮ ಮೀರಿ ಮರದ ದಿಮ್ಮಿಗಳ ಸಾಗಾಟ:

ಕೊಡಗು ಜಿಲ್ಲೆಯಾದ್ಯಂತ ಮರಳು ಮತ್ತು ಮರದ ದಿಮ್ಮಿಗಳ ಸಾಗಾಟಕ್ಕೆ ಜಿಲ್ಲಾಧಿಕಾರಿಯವರು ನಿಷೇಧಿಸಿ ಆದೇಶವನ್ನು ಹೋರಡಿಸಿದ್ದು, ದಿನಾಂಕ 28-8-2018 ರಂದು ಕುಶಾಲನಗರ ಠಾಣಾ ಸರಹದ್ದಿನ ನಿಸರ್ಗಧಾಮದ ಮುಂದುಗಡೆ(1) ಶರತ್ ಕುಮಾರ್, ಕಾನ್‍ಬೈಲು ಸುಂಟಿಕೊಪ್ಪ,(2) ಸಲೀಮ್, ಕೊಪ್ಪ, ಪಿರಿಯಾಪಟ್ಟಣ, (3) ಶಫಿಕ್, ಕೂಡಿಗೆ ಮತ್ತು ಸತೀಶ್ ಅಂದಗೋವೆ, ಸುಂಟಿಕೊಪ್ಪ ಗ್ರಾಮ ಇವರುಗಳು ತಮ್ಮ ಲಾರಿ ಮತ್ತು ಪಿಕ್ ಅಪ್ ವಾಹನದಲ್ಲಿ ನಿಯಮ ಮೀರಿ ಹೆಚ್ಚಿನ ಬಾರದ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಕುಶಾಲನಗರ ಕಂದಾಯ ಪರಿವೀಕ್ಷಕರಾದ ಮಧುಸೂದನ್ ರವರು ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಯುವತಿ ಆತ್ಮಹತ್ಯೆ:

ಸೋಮವಾರಪೇಟೆ ತಾಲೋಕು ಕಿರಗಂದೂರು ಗ್ರಾಮದ ನಿವಾಸಿ ಶ್ರೀಮತಿ ಆಲಿಮಾ ಎಂಬವರ ಮಗಳಾದ 20 ವರ್ಷ ಪ್ರಾಯದ ರುಕಿಯಾ ಎಂಬವರು ಹೊಟ್ಟೆನೋವು ಖಾಯಿಲೆಯಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಜಿಗುಪ್ಸೆಗೊಂಡ ಆಕೆ ದಿನಾಂಕ 29-8-2018 ರಂದು ತಾವು ವಾಸವಾಗಿರುವ ಮನೆಯ ಹತ್ತಿರದ ಕಾಫಿ ತೋಟದಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಶ್ರೀಮತಿ ಆಲಿಮಾರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಮನೆಯಿಂದ ಚಿನ್ನಭರಣ ಕಳವು:

ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ತೊರೆಬೀದಿಯಲ್ಲಿ ಕೆಂಪನಾಯಕ ಎಂಬವರು ವಾಸವಾಗಿದ್ದು, ಅವರು ಎಂದಿನಂತೆ ದಿನಾಂಕ 29-8-2018 ರಂದು ಕೆಲಸಕ್ಕೆಂದು ಹೋಗಿದ್ದು, ಮನೆಯಲ್ಲಿದ್ದ ಮಕ್ಕಳು ಶಾಲೆಗೆ ತೆರಳುವಾಗ ಮರೆತು ಮನೆಗೆ ಬೀಗವನ್ನು ಹಾಕದೇ ಹೋಗಿದ್ದು, ಇದೇ ಸಂದರ್ಭವನ್ನು ಉಪಯೋಗಿಸಿದ ಕಳ್ಳರು ಅವರ ಮನೆಯೊಳಗೆ ಪ್ರವೇಶ ಮಾಡಿ ಲಾಕರ್ ನಲ್ಲಿಟ್ಟಿದ್ದ 12,000 ರೂ ಬೆಲೆಬಾಳುವ ಚಿನ್ನದ ಉಂಗುರ ಮತ್ತು ಜುಮುಕಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ವಿಚಾರವಾಗಿ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಬೈಕ್ ಡಿಕ್ಕಿ:

ವಿರಾಜಪೇಟೆ ತಾಲೋಕು ಗೋಣಿಕೊಪ್ಪ ನಗರದಲ್ಲಿ ವಾಸವಾಗಿರುವ ಎನ್. ಸಿದ್ದಯ್ಯ ಎಂಬವರು ದಿನಾಂಕ 29-8-2018 ರಂದು 1ನೇ ವಿಭಾಗದ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗೋಣಿಕೊಪ್ಪ ಕಡೆಯಿಂದ ಬೈಕನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಎನ್. ಸಿದ್ದಯ್ಯರವರಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಅವರಿಗೆ ಗಾಯಗಳಾಗಿದ್ದು ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.