Crime News

ಬಿಸಿ ನೀರು ಬಿದ್ದು ಗಾಯಗೊಂಡಿದ್ದ ಮಗುವಿನ ಸಾವು

ಮಡಿಕೇರಿ ನಗರದ ನಿವಾಸಿ ನಾಗರಾಜು ಎಂಬುವವರ 3 ವರ್ಷ ಪ್ರಾಯದ ಗಂಡು ಮಗು ದಿನಾಂಕ 26-08-2018 ರಂದು ಮನೆಯಲ್ಲಿ ಆಟವಾಡುತ್ತಾ ಅಡುಗೆ ಮನೆಯಲ್ಲಿ ಗ್ಯಾಸ್ ಸ್ವೌ ಮೇಲೆ ಇಟ್ಟಿದ್ದ ಕುದಿಯುತ್ತಿದ್ದ ನೀರಿನ ಪಾತ್ರೆಯನ್ನು ತನ್ನ ಮೈಮೇಲೆ ಬೀಳಿಸಿಕೊಂಡು ಸುಟ್ಟ ಗಾಯಗಳಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 30-08-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಳೇ ದ್ವೇಷ ವ್ಯಕ್ತಿಯ ಮೇಲೆ ಹಲ್ಲೆ

ದಿನಾಂಕ 31-08-2018 ರಂದು ಮಕ್ಕಂದೂರು ಗ್ರಾಮದ ನಿವಾಸಿಯಾದ ಪಳಂಗಪ್ಪನವರು ಮಡಿಕೇರಿ ನಗರದ ಮಹದೇವಪೇಟೆಯಲ್ಲಿರುವ ಕ್ಯಾಂಟೀನ್ ನಲ್ಲಿ ಕಾಫಿ ಕುಡಿಯುತ್ತಿರುವಾಗ ಮುಕ್ಕೋಡ್ಲು ಗ್ರಾಮದವರಾದ ಪೂವಯ್ಯನವರು ಹಳೇ ದ್ವೇಷದಿಂದ ಕತ್ತಿಯಿಂದ ಹಲ್ಲೆ ನಡೆಸಿದ್ದು, ತಡೆಯಲು ಹೋದ ಬಾಸ್ಕರರವರಿಗೂ ಸಹಾ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮದಲ್ಲಿ ವರದಿಯಾಗಿದೆ. ಕೂಡಿಗೆ ಗ್ರಾಮದ ನಿವಾಸಿಯಾದ ಸಂತೋಷ ಎಂಬುವವರು ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದು, ಇವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 30-08-2018 ರಂದು ಮನೆಯಲ್ಲಿ ಪತ್ನಿ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.