Crime News

ವ್ಯಕ್ತಿಯ ಆತ್ಮಹತ್ಯೆ

ಸೋಮವಾರಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದ ಬಿಬಿಟಿಸಿ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿರುವ ದೊಡ್ಡಮಾದ ಶೆಟ್ಟಿಯವರ ಮಗ ಸ್ವಾಮಿಯವರು ಆನಾರೋಗ್ಯದಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 04-09-2018 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ಸುಂಟಿಕೊಪ್ಪ ನಗರದ ನಿವಾಸಿ ಜಬೀಬುಲ್ಲಾ ಎಂಬುವವರ ಬಾಡಿಗೆ ಮನೆಯನ್ನು ಸತ್ತಾರ್ ಎಂಬುವವರು 3 ವರ್ಷಕ್ಕೆ ಬೋಗ್ಯಕ್ಕೆ ತೆಗೆದುಕೊಂಡಿದ್ದು ಅವಧಿ ಮುಗಿದರೂ ಮನೆ ಖಾಲಿ ಮಾಡದೇ ಇದ್ದು ಈ ಬಗ್ಗೆ ಜಬೀಬುಲ್ಲಾರವರು ಮನೆ ಖಾಲಿ ಮಾಡುವಂತೆ ಹಲವುಬಾರಿ ಹೇಳಿದ್ದರು, ದಿನಾಂಕ 04-09-2018 ರಂದು ಜಬೀಬುಲ್ಲಾರವರು ಸುಂಟಿಕೊಪ್ಪ ನಗರದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಇದೇ ವಿಚಾರದಲ್ಲಿ ಜಗಳ ತೆಗೆದು ಸತ್ತಾರ್, ಶಬ್ಬೀರ್ ಮತ್ತು ರಫಿಕ್ ರವರು ಹಲ್ಲೆ ನಡೆಸಿದ್ದು ಈ ಬಗ್ಗೆ ಸುಂಟಿಕೊಪ್ಪ ನಗರದಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಂಟಿಕೊಪ್ಪ ನಗರದಲ್ಲಿ ವರದಿಯಾಗಿದೆ. ಸುಂಟಿಕೊಪ್ಪ ನಗರದ ನಿವಾಸಿ ರಾಮಚಂದ್ರರವರ ಮಗ ಯೋಗೇಶ್ ಎಂಬುವವರು ದಿನಾಂಕ 04-09-2018 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಹಾದೇವಮ್ಮನವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 04-09-2018 ರಂದು ಹೆಗ್ಗಳ ಗ್ರಾಮದ ನಿವಾಸಿಯಾದ ಮಂಜು ಎಂಬುವವರು ಹಳೇ ದ್ವೇಷದಿಂದ ಬೋಪಣ್ಣನವರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದು, ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.