Crime News

ಬೈಕ್ ಅಪಘಾತದಲ್ಲಿ ಸಾವನಪ್ಪಿದ ಸವಾರ:

ಬೈಕ್ ಸವಾರನೋರ್ವ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ಗೋಣಿಕೊಪ್ಪ ಸಮೀಪದ ಬಿಳೂರು ಬೈರಮುಂಡ ಎಂಬಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು ಹುದಿಕೇರಿ ಗ್ರಾಮದ ನಿವಾಸಿ ಕೆ.ರಾಯ್ ಎಂಬವರು ಲಿಂಗಪ್ಪ ಎಂಬವರೊಂದಿಗೆ ಮೋಟಾರ್ ಸೈಕಲಿನಲ್ಲಿ ದಿನಾಂಕ 4-9-2018 ರಂದು ಹುದಿಕೇರಿಗೆ ಹೋಗುತ್ತಿರುವಾಗ ಬೈಕಿನ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯಲ್ಲಿದ್ದ ಮರವೊಂದಕ್ಕೆ ಡಿಕ್ಕಿಯಾದ ಪರಿಣಾಮ ಬೈಕು ಸವಾರ ಕೆ.ರಾಯ್ ರವರು ತೀವ್ರವಾಗಿ ಗಾಯಗೊಂಡು ಅವರನ್ನು ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜೆ.ಎಸ್‍.ಎಸ್‍. ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸದರಿ ರಾಯ್ ರವರು ದಿನಾಂಕ 5-9-2018 ರಂದು ಮೃತಪಟ್ಟಿದ್ದು, ಈ ಸಂಬಂಧ ಮೃತ ಸಹೋದರ ಎನ್. ರವಿರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರಿಮೆಣಸು ಕಳವು:

ತೋಟದ ಲೈನ್ ಮನೆಯಲ್ಲಿ ಶೇಖರಿಸಿಟ್ಟಿದ್ದ ಕರಿಮೆಣಸು ಕಳ್ಳತನವಾದ ಘಟನೆ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಂಬರ ಎಸ್ಟೇಟಿನಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು ಅತ್ತೂರು ಗ್ರಾಮದಲ್ಲಿರುವ ಪುತ್ತಂಬರ ಎಸ್ಟೇಟಿನಲ್ಲಿ ಪಿ. ಮೊಹಮ್ಮದ್ ‍ಎಂಬವರು ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸಿಕೊಂಡಿದ್ದು ಸದರಿ ಎಸ್ಟೇಟಿನ ಲೈನು ಮನೆಯಲ್ಲಿ ಕರಿಮೆಣಸನ್ನು ಶೇಖರಿಸಿಟ್ಟಿದ್ದು, ದಿನಾಂಕ 2-9-2018 ರಂದು ಯಾರೋ ಕಳ್ಳರು ಸದರಿ ಲೈನುಮನೆಯ ಬೀಗವನ್ನು ಮುರಿದು 65 ಕೆ.ಜಿ. ತೂಕದ 8 ಚೀಲಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ:

ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ವಾಸವಾಗಿರುವ ಪಣಿ ಎರವರ ಅಣ್ಣಪ್ಪ ಎಂಬವರ ಪತ್ನಿ ಶ್ರೀಮತಿ ಬೋಜಿ ಎಂಬವರು ದಿನಾಂಕ 4-9-2018 ರಂದು ತಾನು ವಾಸವಾಗಿದ್ದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ಅಪರಿಚಿತ ವ್ಯಕ್ತಿ ಮೃತ ದೇಹ ಪತ್ತೆ:

ದಿನಾಂಕ 5-9-2018 ರಂದು ಕುಶಾಲನಗರ ಪಟ್ಟಣದ ಲಾರಿ ನಿಲ್ದಾಣದ ಬಳಿ ಇರುವ ಸಾರ್ವಜನಿಕ ಶೌಚಾಲಯದ ಬಳಿ ಅಂದಾಜು 55 ವರ್ಷ ಪ್ರಾಯದ ಅಪರಿಚಿತ ಗಂಡಸಿದ ಮೃತ ದೇಹವು ಪತ್ತೆಯಾಗಿದ್ದು ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.