Crime News

ವ್ಯಕ್ತಿ ಆತ್ಮಹತ್ಯೆ

ದಿನಾಂಕ 08/09/2018ರಂದು ಕುಟ್ಟ ಬಳಿಯ ಸಿಂಕೋನ ಕಾಲೋನಿ ನಿವಾಸಿ ಆರ್‌.ಸುರೇಶ ಎಂಬಾತನು ಮನೆಯ ಕೊಠಡಿಯೊಳಗೆ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅತೀವ ಮದ್ಯವ್ಯಸನಿಯಾಗಿದ್ದ ಸುರೇಶನು ಮದ್ಯದ ಅಮಲಿನಲ್ಲಿ ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದು ಆತ್ಮಹತ್ಯೆ

ದಿನಾಂಕ 08/09/2018ರಂದು ಗೋಣಿಕೊಪ್ಪ ಬಳಿಯ ಹಾತೂರು ಗ್ರಾಮದ ನಿವಾಸಿ ಜವರ ಎಂಬವರು ಅದೇ ಗ್ರಾಮದ ಪ್ರಸನ್ನ ಎಂಬವರ ಕೆರೆಯ ಬಳಿ ಸೀಬೆ ಹಣ್ಣಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ದೀರ್ಘ ಕಾಲದ ಅಸ್ತಮಾ ಮತ್ತು ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ಜವರನವರು ಈ ಬಗ್ಗೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ದೂರು ನೀಡಲಾಗಿದೆ. ಘಟನೆ ಸಂಬಂಧ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 08/09/2018ರ ರಾತ್ರಿ ಕುಟ್ಟ ಬಳಿಯ ಕೆ.ಬಾಡಗ ಗ್ರಾಮದ ಅಲಂದೋಡು ಪೈಸಾರಿ ನಿವಾಸಿ ಸರೋಜಿನಿ ಎಂಬವರು ಮನೆಯಲ್ಲಿದ್ದಾಗ ಅಲ್ಲಿಗೆ ಬಂದ ಕುಟ್ಟ ನಿವಾಸಿ ಪ್ರಸಾದ್, ಚೂರಿಕಾಡು ನಿವಾಸಿ ಗಣೇಶ ಮತ್ತು ಇನ್ನೊಬ್ಬ ವ್ಯಕ್ತಿಯು ಸೇರಿ ಹಣದ ವಿಚಾರದಲ್ಲಿ ಸರೋಜಿನಿರವರೊಂದಿಗೆ ಜಗಳವಾಡಿ ರಾಡಿನಿಂದ ಆಕೆಯ ತಲೆಗೆ ಹೊಡೆದು ಹಲ್ಲೆ ಮಾಡಿದ್ದು ಅಲ್ಲಿಯೇ ಇದ್ದ ಟಿ.ಬಿ.ಮೋಹನ ಎಂಬವರ ಮೇಲೂ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.