Crime News

ವ್ಯಕ್ತಿ ನಾಪತ್ತೆ

ಸೋಮವಾರಪೇಟೆ ತಾಲೂಕಿನ ಕೂಗೇಕೋಡಿ ಗ್ರಾಮದ ನಿವಾಸಿಯಾದ ಪ್ರಕಾಶ್ ಎಂಬುವವರ ಮಗ ಚೇತನ್ ಪ್ರಕಾಶ್ ಎಂಬುವವರು ದಿನಾಂಕ 10-09-2018 ರಂದು ಮನೆಗೆ ಸಾಮಾಗ್ರಿ ತರಲು ಸೋಮವಾರಪೇಟೆ ನಗರಕ್ಕೆ ಹೋದವನು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ

ದಿನಾಂಕ 11-09-2018 ರಂದು ವಿರಾಜಪೇಟೆಯ ಮಗ್ಗುಲ ಗ್ರಾಮದ ನಿವಾಸಿಯಾದ ರವಿವೀರಸ್ವಾಮಿ ಎಂಬುವವರು ಮತ್ತು ಶಿವಶಂಕರ @ ಉಣ್ಣಿ ಎಂಬುವವರು ಇಬ್ಬರೂ ಸೇರಿ ಮದ್ಯಪಾನ ಮಾಡಿ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಶಿವಶಂಕರ @ ಉಣ್ಣಿ ಎಂಬುವವರು ರವಿವೀರಸ್ವಾಮಿಯವರಿಗೆ ಕತ್ತಿಯಿಂದ ಕಡಿದು ಗಾಯಪಡಿಸಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 10-09-2018 ರಂದು ವಿರಾಜಪೇಟೆ ತಾಲೂಕಿನ ಮೇಕೂರು ಹೊಸ್ಕೇರಿ ಗ್ರಾಮದ ನಿವಾಸಿಯಾದ ಆಟೋ ಚಾಲಕ ಮಾದೇಶ ಎಂಬುವವರು ಆಟೋ ರಿಕ್ಷಾದಲ್ಲಿ ಪಾಲಿಬೆಟ್ಟ ನಗರದಲ್ಲಿ ಹೋಗುತ್ತಿರುವಾಗ ಚಂದ್ರ ಮತ್ತು ದಿನೇಶ ಎಂಬುವವರು ಹಳೇ ವೈಷಮ್ಯದಿಂದ ಜಗಳ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 11-09-2018 ರಂದು ಸೋಮವಾರಪೇಟೆ ತಾಲೂಕಿನ ಗಣಗೂರು ಗ್ರಾಮದ ನಿವಾಸಿಗಳಾದ ಶಿವಕುಮಾರ್, ರಾಕೇಶ್, ಪೂರ್ಣಿಮಾ ಹಾಗೂ ಅದೇ ಗ್ರಾಮದ ಚಂದ್ರ, ಗೆಳೆಯ @ ಅನಿಲ್, ಶ್ಯಾಮ್, ಗುರುಪ್ರಸಾದ್ ಎಂಬುವವರು ಪರಸ್ಪರ ಹಲ್ಲೆ ನಡೆಸಿಕೊಂಡಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರತ್ಯೇಕ ಎರಡು  ಪ್ರಕರಣಗಳು ದಾಖಲಾಗಿರುತ್ತವೆ.