Crime News

ಹಲ್ಲೆ ಪ್ರಕರಣ

ದಿನಾಂಕ 13/09/2018ರಂದು ಮಡಿಕೇರಿ ನಗರದ ಎಫ್‌ಎಂಸಿ ಕಾಲೇಜು ಮುಂಭಾಗದ ನಿವಾಸಿ ವೈ.ಎಂ.ಯಾದವ ಎಂಬವರು ಅವರ ಮನೆಯ ಮುಂದೆ ಬೀಳುವ ಸ್ಥಿತಿಯಲ್ಲಿದ್ದ ಒಂದು ನೇರಳೆ ಮರವನ್ನು ಕಡಿದು ತೆರವುಗೊಳಿಸುತ್ತಿದ್ದಾಗ ಅಲ್ಲಿಗೆ ಬಂದ ವೈ.ಜಿ.ಲೋಕೇಶ್, ವೈ.ಜಿ.ಕುಲದೀಪ್ ಮತ್ತು ಸ್ಮಿತಾ ಎಂಬವರುಗಳು ಸೇರಿಕೊಂಡು ಯಾದವರೊಂದಿಗೆ ಜಗಳವಾಡಿ ಕತ್ತಿಯಿಂದ ಕಡಿದು ಹಲ್ಲೆ ಮಾಡಿರವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ಹಲ್ಲೆ ಪ್ರಕರಣ

ದಿನಾಂಕ 13/09/2018ರಂದು ನಾಪೋಕ್ಲು ಬಳಿಯ ಹಳೆ ತಾಲೂಕು ನಿವಾಸಿ ರೊನಾಲ್ಡ್ ರಾಡ್ರಿಗಸ್ ಎಂಬವರು ಅವರ ಪತ್ನಿ ಹೇಮಾವತಿ ಮಗಳು ಪೂರ್ವ ಎಂಬವರೊಂದಿಗೆ ನಾಫೋಕ್ಲು ನಗರದಿಂದ ಮನೆಗೆ ಹೋಗುತ್ತಿರುವಾಗ ಬಾಳೆಯಡ ವಿನೋದ್ ಎಂಬಾತನು ರೊನಾಲ್ಡ್ ರಾಡ್ರಿಗಸ್‌ರವರನ್ನು ತಡೆದು ಹಣದ ವಿಚಾರದಲ್ಲಿ ಜಗಳವಾಡಿ ಹಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ರಸ್ತೆ ಅಪಘಾತ ; ಸಾವು

ದಿನಾಂಕ 12/09/2018ರಂದು ಪೊನ್ನಂಪೇಟೆ ಬಳಿಯ ಬಲ್ಯಮಂಡೂರು ನಿವಾಸಿ ರವಿ ಎಂಬವರು ಅವರ ಸ್ಕೂಟರಿನಲ್ಲಿ ಪೊನ್ನಂಪೇಟೆಯಿಂದ ಬಲ್ಯಮಂಡೂರಿಗೆ ಹೋಗುತ್ತಿರುವಾಗ ಮುಗುಟಗೇರಿ ಬಳಿ ಸ್ಕೂಟರನ್ನು ಅತಿ ವೇಗವಾಗಿ ಚಾಲಿಸಿದ ಪರಿಣಾಮ ಸ್ಕೂಟರ್‌ ರವಿಯವರ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡ ರವಿಯವರನ್ನು ಸಾರ್ವಜನಿಕರು ಗೋಣಿಕೊಪ್ಪದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರವಿಯವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಪಾದಚಾರಿಗೆ ಬೈಕ್ ಡಿಕ್ಕಿ

ದಿನಾಂಕ 12/09/2018ರಂದು ತಿತಿಮತಿ ನಿವಾಸಿ ವಿ.ಎ.ನಾಗರಾಜು ಎಂಬವರ ತಮ್ಮ ರವಿ ಎಂಬವರು ತಿತಿಮತಿಯ ಅವರ ಮನೆಯ ಮುಂದಿನ ಫೋಟೋ ಸ್ಟುಡಿಯೋದಿಂದ ಮುಖ್ಯ ರಸ್ತೆಗೆ ಬರುತ್ತಿರುವಾಗ ಗೋಣಿಕೊಪ್ಪ ಕಡೆಯಿಂದ ಕೆಎ-45-ಹೆಚ್‌-8045ರ ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದಿ ರವಿರವರಿಗೆ ಡಿಕ್ಕಿಪಡಿಸಿದ ಪರಿಣಾಮ ರವಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಅಂಗಡಿ ಕಳವು

ಪೊನ್ನಂಪೇಟೆ ಬಳಿಯ ಸುಳುಗೋಡು ನಿವಾಸಿ ಎಂ.ಜಿ.ಶಶಿಧರ ಎಂಬವರು ದಿನಾಂಕ 11/09/2018ರಂದು ಅವರ ಅಂಗಡಿಗೆ ಬೀಗ ಹಾಕಿಕೊಂಡು ಕೇರಳದ ಅವರ ಸಂಬಂಧಿಕರ ಮದುವೆಗೆಂದು ಹೋಗಿದ್ದು ದಿನಾಂಕ 13/09/2018ರಂದು ಮರಳಿ ಬಂದು ಅಂಗಡಿಯನ್ನು ತೆರೆಯುವಾಗ ಯಾ ರೋ ಕಳ್ಳರು ಅಂಗಡಿಯ ಹೆಂಚುಗಳನ್ನು ತೆರೆದು ಒಳ ಪ್ರವೇಶಿಸಿ ಅಂಗಡಿಯೊಳಗಿದ್ದ ಸುಮಾರು ರೂ. 3,000/- ಬೆಲೆಯ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಬೈಕ್ ಡಿಕ್ಕಿ ; ಸಾವು

ದಿನಾಂಕ 12/09/2018ರಂದು ಸೋಮವಾರಪೇಟೆ ಬಳಿಯ ಹಾನಗಲ್ಲು ನಿವಾಸಿ ಶಿವಕುಮಾರ್ ಎಂಬವರು ಅವರ ಬೈಕಿನಲ್ಲಿ ತಾಕೇರಿ ಗ್ರಾಮದ ಅವರ ತೋಟಕ್ಕೆ ಹೋಗಿ ಮರಳಿ ರಾತ್ರಿ ವೇಳೆ ಮನೆಗೆ ಬರುತ್ತಿರುವಾಗ ಸೋಮವಾರಪೇಟೆ ನಗರದ ಆನೆ ಕೆರೆ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಕ್ರೇನ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಶಿವ ಕುಮಾರ್‌ರವರು ಸ್ಥಳದಲ್ಲೇ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ನೀರಿನಲ್ಲಿ ಮುಳುಗಿ ಬಾಲಕ ಸಾವು

ದಿನಾಂಕ 13/09/2018ರಂದು ಕುಶಾಲನಗರ ಬಳಿಯ ಅರಶಿನಗುಪ್ಪೆ ಗ್ರಾಮದ ನವ ಗ್ರಾಮದ ನಿವಾಸಿ ಅನಂತ ಕುಮಾರ್ ಎಂಬವರ ಮಗ 13 ವರ್ಷ ಪ್ರಾಯದ ಹೇಮಂತ್ ಎಂಬಾತನು ಅದೇ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆಗೆಂದು ಹೋಗಿದ್ದು ಅಲ್ಲಿನ ಬಿದಿರು ಕಟ್ಟೆ ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.