Crime News

ಅಪಘಾತ ಪ್ರರಕಣ

ದಿನಾಂಕ 13-09-2018 ರಂದು ಅರಂತೋಡು ಗ್ರಾಮದ ನಿವಾಸಿಯಾದ ಅಬ್ದುಲ್ಲಾ ಎಂಬುವವರು ಮೋಟಾರು ಸೈಕಲಿನಲ್ಲಿ ಮಡಿಕೇರಿಯಿಂದ ಸುಳ್ಯಕ್ಕೆ ಹೋಗುತ್ತಿರುವಾಗ ದೇವರಕೊಲ್ಲಿ ಎಂಬಲ್ಲಿಗೆ ತಲುಪುವಾಗ ಹಿಂದೆ ಹೋಗುತ್ತಿದ್ದ ಮೋಟಾರು ಸೈಕಲನ್ನು ಅದರ ಸವಾರ ಅಜಾಗರೂಕತೆಯಿಂದ ಚಾಲನೆ ಮಾಡಿ ಅಬ್ದುಲ್ಲಾರವರು ಚಾಲನೆ ಮಾಡುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಮೋಟಾರು ಸೈಕಲಿನವರಿಗೂ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 13-09-2018 ರಂದು ಮಡಿಕೇರಿ ನಗರದ ಎಫ್. ಎಂ. ಸಿ. ಕಾಲೇಜಿನ ಬಳಿಯ ನಿವಾಸಿ ಸ್ಮಿತಾ ಲೋಕೇಶ್ ಮತ್ತು ಕುಲದೀಪ್ ವರು ಮನೆಯಲ್ಲಿರುವಾಗ ಪಕ್ಕದ ಮನೆಯವರಾದ ಚಂದನ್, ಯಾದವ, ವೀಣಾ ಮತ್ತು ಚಿಂತನ್ ರವರು ಸ್ಮಿತಾ ಲೋಕೇಶ್ ರವರ ಜಾಗದಿಂದ ಮರದ ತುಂಡುಗಳನ್ನು ತೆಗೆದುಕೊಂಡು ಹೋಗಲು ಬಂದವರನ್ನು ವಿಚಾರಿಸಿದಾಗ ಎಲ್ಲರೂ ಸೇರಿ ಸ್ಮಿತಾ ಲೋಕೇಶ್ ಹಾಗೂ ಕುಲದೀಪರವರ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.